ಎಸ್‌ಎಫ್‌ಐ ಕಾರ್ಯಕರ್ತರ ಮೇಲೆ ದಾಳಿ: ತಿರುವನಂತಪುರಂನಲ್ಲಿ ಬಿಜೆವೈಎಂ, ಎಬಿವಿಪಿಯಿಂದ ಪ್ರತಿಭಟನೆ

ಪ್ರತಿಭಟನೆ ವೇಳೆ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆವೈಎಂ, ಎಬಿವಿಪಿ ಕಾರ್ಯಕರ್ತರು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. 

Last Updated : Jul 15, 2019, 03:51 PM IST
ಎಸ್‌ಎಫ್‌ಐ ಕಾರ್ಯಕರ್ತರ ಮೇಲೆ ದಾಳಿ: ತಿರುವನಂತಪುರಂನಲ್ಲಿ ಬಿಜೆವೈಎಂ, ಎಬಿವಿಪಿಯಿಂದ ಪ್ರತಿಭಟನೆ title=
File Image

ತಿರುವನಂತಪುರಂ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಮತ್ತು ಬಿಜೆಪಿ ಯುವ ವಿಭಾಗ (ಬಿಜೆವೈಎಂ) ಸದಸ್ಯರು ಸೋಮವಾರ ಯುನಿವರ್ಸಿಟಿ ಕಾಲೇಜಿನಲ್ಲಿ ಎಸ್‌ಎಫ್‌ಐ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ವೇಳೆ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆವೈಎಂ, ಎಬಿವಿಪಿ ಕಾರ್ಯಕರ್ತರು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ನೀರಿನ ಫಿರಂಗಿಗಳನ್ನು ಬಳಸಬೇಕಾಯಿತು.

ಮೂರನೇ ವರ್ಷದ ಬಿಎ ವಿದ್ಯಾರ್ಥಿ ಅಖಿಲ್ ಅವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ (ಎಸ್‌ಎಫ್‌ಐ) ಎಂಟು ಸದಸ್ಯರ ವಿರುದ್ಧ ಪೊಲೀಸರು ಭಾನುವಾರ ಲುಕ್‌ ಔಟ್ ನೋಟಿಸ್ ನೀಡಿದ್ದಾರೆ.

ಎಸ್‌ಎಫ್‌ಐ ಸದಸ್ಯರು ಮತ್ತು ಇತರ ವಿದ್ಯಾರ್ಥಿಗಳ ನಡುವೆ ಶುಕ್ರವಾರ ನಡೆದ ಘರ್ಷಣೆಯಲ್ಲಿ ಕ್ಯಾಂಪಸ್‌ನೊಳಗೆ ಅಖಿಲ್ ಎಂಬ ವಿದ್ಯಾರ್ಥಿಗೆ ಇರಿಯಲಾಗಿದೆ. ಅಖಿಲ್ ಅವರನ್ನು ಕೂಡಲೇ ತಿರುವನಂತಪುರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಪ್ರಕರಣದಲ್ಲಿ ಈವರೆಗೆ ನಾಲ್ಕು ಜನರನ್ನು ಬಂಧಿಸಲಾಗಿದೆ. ಈ ಘಟನೆಯು ಕೇರಳ ವಿದ್ಯಾರ್ಥಿ ಸಂಘ (ಕೆಎಸ್‌ಯು), ಮುಸ್ಲಿಂ ವಿದ್ಯಾರ್ಥಿ ಒಕ್ಕೂಟ ಮತ್ತು ಎಬಿವಿಪಿ ಸದಸ್ಯರ ಪ್ರತಿಭಟನೆಗೆ ಕಾರಣವಾಯಿತು.

Trending News