ಹೊಸ ವೈಶಿಷ್ಟ್ಯ ಪರಿಚಯಿಸಿದ Aarogya Setu App, ಇದೀಗ ಮನೆಯಿಂದಲೇ ಸಾಧ್ಯವಾಗಲಿದೆ ಈ ಕೆಲಸ

ಕೊರೊನಾವೈರಸ್ನ ಹೆಚ್ಚುತ್ತಿರುವ ಹಾನಿಯನ್ನು ತಡೆಗಟ್ಟುವ ಸಲುವಾಗಿ ಭಾರತ ಸರ್ಕಾರವು ಆರೋಗ್ಯಾ ಸೇತು ಎನ್ನುವ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಈ ಅಪ್ಲಿಕೇಶನ್ ಮೂಲಕ ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನೀವು ತಿಳಿದುಕೊಳ್ಳಬಹುದು.

Written by - Yashaswini V | Last Updated : May 8, 2020, 07:49 AM IST
ಹೊಸ ವೈಶಿಷ್ಟ್ಯ ಪರಿಚಯಿಸಿದ Aarogya Setu App, ಇದೀಗ ಮನೆಯಿಂದಲೇ ಸಾಧ್ಯವಾಗಲಿದೆ ಈ ಕೆಲಸ title=

ನವದೆಹಲಿ : ಕೊರೊನಾವೈರಸ್ನ ಹೆಚ್ಚುತ್ತಿರುವ ಹಾನಿಯನ್ನು ತಡೆಗಟ್ಟುವ ಸಲುವಾಗಿ ಭಾರತ ಸರ್ಕಾರವು ಆರೋಗ್ಯಾ ಸೇತು (Aarogya Setu) ಎನ್ನುವ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತು. ಈ ಅಪ್ಲಿಕೇಶನ್ ಮೂಲಕ ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ನೀವು ತಿಳಿದುಕೊಳ್ಳಬಹುದು.

ಕರೋನಾಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈಗ ಸರ್ಕಾರವು ಈ ಅಪ್ಲಿಕೇಶನ್‌ನಲ್ಲಿ ಬಹಳ ಮುಖ್ಯವಾದ ವೈಶಿಷ್ಟ್ಯವನ್ನು ಸೇರಿಸಲು ಹೊರಟಿದೆ. ಈ ಅಪ್ಲಿಕೇಶನ್‌ ಮೂಲಕ ಈಗ ಬಳಕೆದಾರರು ಕರೆ ಮಾಡುವ ಮೂಲಕ ಅಥವಾ ವೀಡಿಯೊ ಕರೆ ಮಾಡುವ ಮೂಲಕ ವೈದ್ಯರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೆ ನಾವು ಮನೆಯಲ್ಲಿ ಚಿಕಿತ್ಸೆ ಪಡೆಯಲು ಸಹ ಸಾಧ್ಯವಾಗುತ್ತದೆ. ಚೆಕಪ್ ಜೊತೆಗೆ ಬಳಕೆದಾರರು ಆನ್‌ಲೈನ್‌ನಲ್ಲಿ ಔಷಧಿಗಳನ್ನು ಆರ್ಡರ್ ಮಾಡಲು ಸಾಧ್ಯವಾಗುತ್ತದೆ.

ಆರೋಗ್ಯ ಸೇತು ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ

ಈ ಆ್ಯಪ್ ಮೂಲಕ ಶೀಘ್ರದಲ್ಲೇ ಇ-ಪಾಸ್ ಸೌಲಭ್ಯವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿದೆ. ಲಾಕ್‌ಡೌನ್(Lockdown)‌ನಲ್ಲಿ ನಿರ್ಗಮಿಸಲು ಇ-ಪಾಸ್ ಅನ್ನು ಬಳಸಬಹುದು. ಇಲ್ಲಿಯವರೆಗೆ ಜನರು ಫೋನ್, ವಾಟ್ಸಾಪ್ ಅಥವಾ ಆನ್‌ಲೈನ್ ಮೂಲಕ ಇ-ಪಾಸ್ಗಾಗಿ ಅರ್ಜಿ ಸಲ್ಲಿಸಬೇಕಾಗಿತ್ತು.

ಈ ಸೇವೆಗಾಗಿ ಸುಮಾರು 200 ವೈದ್ಯರು ಆರೋಗ್ಯ ಸೇತು ಆ್ಯಪ್ ನಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ.

ಇಂಟರ್ನೆಟ್ ಕಂಪನಿಗಳನ್ನು ಬೆಚ್ಚಿಬೀಳಿಸಿದೆ ಪ್ರಧಾನಿ ಮೋದಿ ಮಾಡಿದ ಒಂದು ಮನವಿ

ಈ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಎಲ್ಲೆಡೆ ನಿರ್ದೇಶನ ನೀಡಲಾಗಿದೆ. ಇಲ್ಲಿಯವರೆಗೆ  ಆರೋಗ್ಯ ಸೇತು ಆ್ಯಪ್ ಅನ್ನು ಸುಮಾರು ಒಂಬತ್ತು ಕೋಟಿ ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಜನರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಜನರಿಗೆ ಕೆಲಸ ಒದಗಿಸುವ ಯೋಜನೆಯನ್ನು ಸಹ ಸಿದ್ಧಪಡಿಸಲಾಗುತ್ತಿದೆ. ಹೆಚ್ಚಿನ ಜನರು ಕೆಲಸಕ್ಕೆ ಸೇರುವ ಸಲುವಾಗಿ ದೇಶಾದ್ಯಂತ 20 ಲಕ್ಷ 'ಸುರಕ್ಷಾ ಮಳಿಗೆಗಳನ್ನು' (Suraksha Store) ತೆರೆಯಲು ಸರ್ಕಾರ ಯೋಜಿಸುತ್ತಿದೆ.

ವಿಶೇಷವೆಂದರೆ ಜನರ ಸುರಕ್ಷತೆಗಾಗಿ ಈ ಮಳಿಗೆಗಳನ್ನು 'ಆರೋಗ್ಯ ಸೇತು ಆ್ಯಪ್' (Aarogya Setu App)ನೊಂದಿಗೆ ಜೋಡಿಸಲಾಗುತ್ತದೆ. ಮೊಹಲ್ಲಾಗಳ ಕಿರಾನಾ ಮಳಿಗೆಗಳನ್ನು ಆಯ್ಕೆ ಮಾಡಿ ಅವುಗಳನ್ನು 'ಭದ್ರತಾ ಮಳಿಗೆ'ಗಳಾಗಿ ಪರಿವರ್ತಿಸುವುದು ಸರ್ಕಾರದ ಯೋಜನೆಯಾಗಿದೆ.
 

Trending News