Aadhaar Card Big Update! Tweet ಮೂಲಕ ಮಾಹಿತಿ ನೀಡಿದ UIDAI, ಎಲ್ಲರಿಗೂ ಅನ್ವಯಿಸಲಿದೆ

Aadhaar Card Latest News - UIDAI ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ಒಂದು ದೊಡ್ಡ ಅಪ್‌ಡೇಟ್ ನೀಡಿದೆ. ಯುಐಡಿಎಐ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡುವ ಮೂಲಕ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಈ ವಿಶೇಷ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದೆ.

Written by - Nitin Tabib | Last Updated : Aug 29, 2021, 06:04 PM IST
  • ಆಧಾರ್ ಕಾರ್ಡ್ ಬಗ್ಗೆ ಮಹತ್ವದ ಅಪ್ಡೇಟ್ ಪ್ರಕಟ
  • ಕೇವಲ ಈ ಒಂದು ಲಿಂಕ್ ಬಳಸಿ ಮಹತ್ವದ ಕೆಲಸ ಮಾಡಿ
  • ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡ UIDAI.
Aadhaar Card Big Update! Tweet ಮೂಲಕ ಮಾಹಿತಿ ನೀಡಿದ UIDAI, ಎಲ್ಲರಿಗೂ ಅನ್ವಯಿಸಲಿದೆ title=
Aadhaar Card Latest News (File Photo)

ನವದೆಹಲಿ: Aadhaar Card Latest News - UIDAI ಆಧಾರ್ ಕಾರ್ಡ್ ಅಪ್‌ಡೇಟ್‌ಗೆ ಸಂಬಂಧಿಸಿದಂತೆ ಒಂದು ಮಹತ್ವದ ಸುದ್ದಿ ಪ್ರಕಟವಾಗಿದೆ. ಹೌದು, ಒಂದು ವೇಳೆ ನೀವು ನಿಮ್ಮ ಆಧಾರ್ ಕಾರ್ಡ್ ಕಳೆದುಕೊಂಡರೆ ಇದೀಗ ನೀವು ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. ಏಕೆಂದರೆ ಇದೀಗ ಆನ್‌ಲೈನ್‌ನಲ್ಲಿ ಆಧಾರ್ ಡೌನ್‌ಲೋಡ್ ಮಾಡುವುದು ಮತ್ತಷ್ಟು ಸುಲಭವಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಈ ಮಾಹಿತಿಯನ್ನು ನೀಡಿದೆ ಮತ್ತು ನೀವು ಆಧಾರ್ ಕಾರ್ಡ್ ಅನ್ನು ಎಲ್ಲಿಂದಲಾದರೂ ಡೌನ್‌ಲೋಡ್ ಮಾಡಬಹುದಾದ ನೇರ ಲಿಂಕ್ ಅನ್ನು ಸಹ ಹಂಚಿಕೊಂಡಿದೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ UIDAI(Aadhar Update)
UIDAI ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಿಂದ ಟ್ವೀಟ್ ಮಾಡುವ ಮೂಲಕ ಈ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದೆ. ಆಧಾರ್ ಪ್ರಸ್ತುತ ನಮ್ಮ ಗುರುತಿನ ಪ್ರಮುಖ ದಾಖಲೆಯಾಗಿದೆ. ಬ್ಯಾಂಕ್ ಕೆಲಸ ಇರಲಿ ಅಥವಾ ಸರ್ಕಾರಿ ಯೋಜನೆಯ ಲಾಭವೇ ಆಗಿರಲಿ ನಿಮಗೆ ಆಧಾರ್ ಅಗತ್ಯವಿದೆ. ಆಧಾರ್ ಅನ್ನು ನಿಮ್ಮ ಬಳಿ ಇಟ್ಟುಕೊಳ್ಳುವ ಮೂಲಕ ಅದಕ್ಕೆ  ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಬಹುದು.

ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ನೇರ ಲಿಂಕ್ ಅನ್ನು ಹಂಚಿಕೊಂಡ UIDAI, 'https://eaadhaar.uidai.gov.in ನಿಂದ ಯಾವಾಗಬೇಕಾದರೂ ಮತ್ತು ಎಲ್ಲಿಂದ ಬೇಕಾದರೂ ಕೂಡ ನೀವು ನಿಮ್ಮ ಆಧಾರ್ ಅನ್ನು ಡೌನ್ ಲೋಡ್ ಮಾಡಬಹುದಾಗಿದೆ.

ಇದನ್ನೂ ಓದಿ-NPS Rule Change: NPS ನಿಯಮಗಳಲ್ಲಿ ಭಾರಿ ಬದಲಾವಣೆ

ಹೇಗೆ ಡೌನ್ಲೋಡ್ ಮಾಡಬೇಕು?
ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು, ನೀವು UIDAI ನೀಡಿರುವ ನೇರ ಲಿಂಕ್ ಆಗಿರುವ  https://eaadhaar.uidai.gov.in ಗೆ ಲಾಗ್ ಇನ್ ಆಗಬೇಕು. ನಂತರ OTP ಮೂಲಕ ಲಾಗಿನ್ ಮಾಡಿ, ಕೆಲವು ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಧಾರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ-Online Passport Apply : ಈಗ ಮನೆಯಿಂದಲೇ Passport ಗೆ ಅರ್ಜಿ ಸಲ್ಲಿಸಬಹುದು - ಹೇಗೆ ಇಲ್ಲಿದೆ ಸಂಪೂರ್ಣ ಮಾಹಿತಿ!

ಡೌನ್ ಲೋಡ್ ಮಾಡಲು ಈ ಹಂತಗಳನ್ನು ಅನುಸರಿಸಿ
>> ಈ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಆಧಾರ್ ಅನ್ನು ಡೌನ್ಲೋಡ್ ಮಾಡಬಹುದು.
>> UIDAI ನೇರ ಲಿಂಕ್ https://eaadhaar.uidai.gov.in ಗೆ  ಲಾಗಿನ್ ಮಾಡಿ.
>> ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
>> ಒಂದು ವೇಳೆ ನೀವು ಮಾಸ್ಕ್ ಆಧಾರ್ ಕಾರ್ಡ್ ಹೊಂದಲು ಬಯಸಿದರೆ 'ನನಗೆಮಾಸ್ಕ್ ಆಧಾರ್ ಬೇಕು' ಆಯ್ಕೆಯ ಎಡಭಾಗದಲ್ಲಿರುವ ಬಾಕ್ಸ್ ಅನ್ನು ಟಿಕ್ ಮಾಡಿ.
>> ಭದ್ರತಾ ಕೋಡ್ ಅಥವಾ ಕ್ಯಾಪ್ಚಾ ನಮೂದಿಸಿ.
>> 'Send OTP' ಮೇಲೆ ಕ್ಲಿಕ್ ಮಾಡಿ.
>> ನಿಮ್ಮ ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
>> OTP ನಮೂದಿಸಿ.
>> OTP ಸಲ್ಲಿಸಿದ ನಂತರ, ನಿಮ್ಮ ಆಧಾರ್ ಕಾರ್ಡ್ ವಿವರಗಳು ಮತ್ತು ಆಧಾರ್ ಡೌನ್‌ಲೋಡ್ ಮಾಡುವ ಆಯ್ಕೆಯನ್ನು ನಿಮ್ಮ ಕಂಪ್ಯೂಟರ್ ಮಾನಿಟರ್ ಪರದೆ ಅಥವಾ ಸ್ಮಾರ್ಟ್ ಫೋನ್ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
>> ಡೌನ್ಲೋಡ್ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಭವಿಷ್ಯದ ಬಳಕೆಗಾಗಿ ಕಾಯ್ದಿರಿಸಿ.

ಇದನ್ನೂ ಓದಿ-SBI ಗ್ರಾಹಕರ ಗಮನಕ್ಕೆ! ನೀವು ATM Card ಹೊಂದಿದ್ದರೆ ಎಚ್ಚರ : ಬ್ಯಾಂಕ್ ಪ್ರಮುಖ ಮಾಹಿತಿಯೊಂದನ್ನ ನೀಡಿದೆ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News