ಮಧ್ಯಪ್ರದೇಶ : ಮಹಿಳೆಗೆ ಮದುವೆ ಫಿಕ್ಸ್ ಆಗಿದ್ದಕ್ಕೆ ಆಕೆಯನ್ನು ಅತ್ಯಾಚಾರಗೈದು ಹತ್ಯೆಗೈದ ಪ್ರೇಮಿ

ಭೋಪಾಲ್‌ನಿಂದ ಪೂರ್ವಕ್ಕೆ 186 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಬುಧವಾರ ಮಹಿಳೆಯೊಬ್ಬಳು ತನ್ನ ಮದುವೆಯ ದಿನಾಂಕವನ್ನು ನಿಗದಿಪಡಿಸಿದಾಗ ಆಕೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ ಹತ್ಯೆಗೈದಿದ್ದಾನೆ  ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Jan 30, 2020, 10:59 PM IST
ಮಧ್ಯಪ್ರದೇಶ : ಮಹಿಳೆಗೆ ಮದುವೆ ಫಿಕ್ಸ್ ಆಗಿದ್ದಕ್ಕೆ ಆಕೆಯನ್ನು ಅತ್ಯಾಚಾರಗೈದು ಹತ್ಯೆಗೈದ ಪ್ರೇಮಿ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಭೋಪಾಲ್‌ನಿಂದ ಪೂರ್ವಕ್ಕೆ 186 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಬುಧವಾರ ಮಹಿಳೆಯೊಬ್ಬಳು ತನ್ನ ಮದುವೆಯ ದಿನಾಂಕವನ್ನು ನಿಗದಿಪಡಿಸಿದಾಗ ಆಕೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ ಹತ್ಯೆಗೈದಿದ್ದಾನೆ  ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬುಧವಾರ ಸಂಜೆ ನಡೆದಿದೆ. ಆಕ್ರೋಶಗೊಂಡ ಕುಟುಂಬ ಸದಸ್ಯರು, ಸಂಬಂಧಿಕರು ಮತ್ತು ಇತರ ಗ್ರಾಮಸ್ಥರು ಗುರುವಾರ ಗ್ರಾಮದ ಬಳಿ ಶವದೊಂದಿಗೆ ರಸ್ತೆ ದಿಗ್ಬಂಧನ ನಡೆಸಿದರು. ಆಕ್ರೋಶಗೊಂಡ ಜನಸಮೂಹ ಕಲ್ಲು ತೂರಿಸಲು ಪ್ರಾರಂಭಿಸಿದಾಗ ಮೂವರು ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 18 ವರ್ಷದ ಸಂತ್ರಸ್ತೆ ಕುಟುಂಬದಿಂದ ಅಂತಿಮಗೊಳಿಸಲ್ಪಟ್ಟ ಮದುವೆಯ ದಿನಾಂಕದ ಬಗ್ಗೆ ಕೋಪಕೊಂಡ ವ್ಯಕ್ತಿ ಆಕೆ ಮೇಲೆ ಅತ್ಯಾಚಾರಗೈದು ಹತ್ಯೆಗೈದಿದ್ದಾನೆ.  ಸಾಗರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ವ್ಯಾಸ್, “ಮರಣೋತ್ತರ ವರದಿಯ ಪ್ರಕಾರ ಅತ್ಯಾಚಾರ ಎಸೆಗಿರುವುದು ಧೃಡಪಟ್ಟಿದೆ. ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಿದ್ದಾರೆ. ”ಎಂದು ಹೇಳಿದ್ದಾರೆ.

Trending News