ಸಂಸ್ಕೃತ ಭಾಷೆಯ ಕುರಿತು ಹೊರಬಿದ್ದಿದೆ ಅಚ್ಚರಿಯ ಸಂಗತಿ..!

ಸನಾತನ ಹಿಂದೂ ಧರ್ಮದ ದೇವ ಭಾಷೆಯೆಂದು ಪರಿಗಣಿಸಲಾಗುವ ಸಂಸ್ಕೃತ ಭಾಷೆಯು ಇಂದು ಅಳಿವಿನ ಅಂಚಿನಲ್ಲಿದೆ ಎಂಬ ಆಘಾತಕಾರಿ ಅಂಶವು ಭಾಷಾ ಪ್ರೇಮಿಗಳಿಗೆ ದಿಗ್ಭ್ರಮೆ ಮೂಡಿಸಿದೆ. 

Written by - Zee Kannada News Desk | Last Updated : Sep 28, 2022, 03:56 PM IST
  • ಕೇಂದ್ರ ಗೃಹ ಸಚಿವಾಲಯದ ಭಾಷಾ ಇಲಾಖೆ, ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಈ ಆಘಾತಕಾರಿ ಮಾಹಿತಿಯನ್ನು ನೀಡಿದೆ.
ಸಂಸ್ಕೃತ ಭಾಷೆಯ ಕುರಿತು ಹೊರಬಿದ್ದಿದೆ ಅಚ್ಚರಿಯ ಸಂಗತಿ..! title=
ಸಾಂದರ್ಭಿಕ ಚಿತ್ರ

ನವದೆಹಲಿ: ಸಂಸ್ಕೃತವು ಭಾರತದ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಾಗಿದೆ. ದೇಶದ ಬಹುತೇಕ ಭಾಗಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಇಂದಿಗೂ ಸಂಸ್ಕೃತ ಭಾಷೆಯನ್ನು ಅಲ್ಲಲ್ಲಿ ಕಲಿಸಲಾಗುತ್ತದೆ. ಒಂದೆಡೆ ಬಿಹಾರ, ಉತ್ತರ ಪ್ರದೇಶ ಮತ್ತು ಪಂಜಾಬ್‌ನ ಜನಸಂಖ್ಯೆಯ ಹೆಚ್ಚಿನ ಭಾಗವು ಉರ್ದು ಮಾತನಾಡುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಭಾರತದಲ್ಲಿ ಪ್ರಸ್ತುತ ಕೇವಲ 24,821 ಜನರು ಮಾತ್ರ ಸಂಸ್ಕೃತವನ್ನು ಮಾತನಾಡುತ್ತಾರೆ ಎಂದು ಆರ್ಟಿಐನಿಂದ ಮಾಹಿತಿ ದೊರೆತಿದೆ.

ಕೇಂದ್ರ ಗೃಹ ಸಚಿವಾಲಯದ ಭಾಷಾ ಇಲಾಖೆ, ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ಈ ಆಘಾತಕಾರಿ ಮಾಹಿತಿಯನ್ನು ನೀಡಿದೆ.ಆಗ್ರಾ ಮೂಲದ ಶಸ್ತ್ರಚಿಕಿತ್ಸಕ ಮತ್ತು ಸಾಮಾಜಿಕ ಕಾರ್ಯಕರ್ತ ಡಾ. ದೇಬಶಿಶ್ ಭಟ್ಟಾಚಾರ್ಯ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯೆಯಾಗಿ ಇಲಾಖೆ ಈ ಮಾಹಿತಿ ನೀಡಿದೆ.ಡಾ.ಭಟ್ಟಾಚಾರ್ಯ ಅವರು ಪಡೆದ ಮಾಹಿತಿಯ ಪ್ರಕಾರ, 2011 ರ ಜನಗಣತಿಯ ಪ್ರಕಾರ, ಭಾರತೀಯ ಜನಸಂಖ್ಯೆಯ ಒಟ್ಟು ಶೇಕಡಾ 0.002 ರಷ್ಟು ಜನರು ಮಾತ್ರ ಸಂಸ್ಕೃತವನ್ನು ಮಾತನಾಡುತ್ತಾರೆ. 

ಇದನ್ನೂ ಓದಿ- Ration Card: ಉಚಿತ ಪಡಿತರ ಪ್ರಯೋಜನಗಳನ್ನು ಪಡೆಯಲು ಈ ಹೊಸ ನಿಯಮಗಳನ್ನು ತಪ್ಪದೇ ತಿಳಿಯಿರಿ

ಡಾ ಭಟ್ಟಾಚಾರ್ಯರ ಪಡೆದ ಮಾಹಿತಿ ಪ್ರಕಾರ ಸಂಸ್ಕೃತವನ್ನು ಸಂವಿಧಾನದಲ್ಲಿ ಅಲ್ಪಸಂಖ್ಯಾತ ಭಾಷೆಯಾಗಿ ಪಟ್ಟಿ ಮಾಡಲಾಗಿಲ್ಲ, ಆದರೆ ದೇಶದ 22 ಅಧಿಕೃತ ಭಾಷೆಗಳಲ್ಲಿ ಸಂಸ್ಕೃತವು ಒಂದಾಗಿದೆ. 2010 ರಲ್ಲಿ, ಉತ್ತರಾಖಂಡವು ಸಂಸ್ಕೃತವನ್ನು ತನ್ನ ರಾಜ್ಯದ ಎರಡನೇ ಅಧಿಕೃತ ಭಾಷೆ ಎಂದು ಪಟ್ಟಿ ಮಾಡಿದ ಭಾರತದ ಮೊದಲ ರಾಜ್ಯವಾಯಿತು. ಆದಾಗ್ಯೂ, ಇದನ್ನು ಯಾರೂ ಹೆಚ್ಚಾಗಿ ಮಾತನಾಡುವುದಿಲ್ಲ, ಆದರೆ ಸಂಸ್ಕೃತ ಸೇರಿದಂತೆ ಹಲವಾರು ಭಾಷೆಗಳ ಮಿಶ್ರಣವಾದ ಹಿಂದಿಯನ್ನು ಹಲವಾರು ಕೋಟಿ ಭಾರತೀಯರು ಮಾತನಾಡುತ್ತಾರೆ. ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯ ಉಳಿಸಿ ಬೆಳೆಸುವ ಕುರಿತು ಸರ್ಕಾರಳು ಇನ್ನಷ್ಟು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಂಸ್ಕೃತ ಆಸ್ತಕರು ಅಭಿಪ್ರಾಯ ಪಡುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News