ಸೂರ್ಯನೊಳಗೆ ಹರಿದಾಡುತ್ತಿದೆ ವಿಚಿತ್ರ ವಸ್ತು: ವಿಜ್ಞಾನಿಗಳಿಗೂ ಒಗಟಾದ ದೃಶ್ಯವನ್ನು ನೀವೊಮ್ಮೆ ನೋಡಿ

European Space Agency: ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಚ್ಚರಿಗೊಳಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಹಾವು ಹರಿದಾಡುತ್ತಿರುವಂತೆ ಕಾಣುತ್ತದೆ. ಇವೆಲ್ಲದರ ಮಧ್ಯೆ ಸೂರ್ಯನ ತಾಪಮಾನವು ತುಂಬಾ ಹೆಚ್ಚಾಗಿರುವಂತೆ ಕಂಡುಬರುತ್ತಿದೆ. ಯಾವುದೇ ಜೀವಿ ಅದನ್ನು ತಲುಪಲು ಅಸಾಧ್ಯವಾಗುವಂತೆ ಗೋಚರವಾಗುತ್ತಿದೆ. ಹಾಗಾದ್ರೆ ಸೂರ್ಯನಲ್ಲಿ ಕಂಡುಬಂದ ಈ ವಸ್ತು ಏನು ಎಂಬ ಗೊಂದಲಕ್ಕೆ ವಿಜ್ಞಾನಿಗಳು ಉತ್ತರವನ್ನು ನೀಡಿದ್ದಾರೆ.

Written by - Bhavishya Shetty | Last Updated : Nov 19, 2022, 05:31 AM IST
    • ಪ್ರತಿ ಕ್ಷಣವೂ ಸೂರ್ಯನೊಳಗೆ ಸರಣಿ ಸ್ಫೋಟಗಳು ನಡೆಯುತ್ತಿವೆ
    • ಇದು ಸೂರ್ಯನ ಚಲನೆಗೆ ಪ್ರಮುಖ ಕಾರಣವಾಗಿದೆ
    • ಈ ಘಟನೆಯು ಯಾವುದೇ ಸ್ಫೋಟಕ್ಕಿಂತ ಭಿನ್ನವಾಗಿದೆ
ಸೂರ್ಯನೊಳಗೆ ಹರಿದಾಡುತ್ತಿದೆ ವಿಚಿತ್ರ ವಸ್ತು: ವಿಜ್ಞಾನಿಗಳಿಗೂ ಒಗಟಾದ ದೃಶ್ಯವನ್ನು ನೀವೊಮ್ಮೆ ನೋಡಿ  title=
space

European Space Agency: ಪ್ರತಿ ಸೆಕೆಂಡಿಗೆ ಬಾಹ್ಯಾಕಾಶದಲ್ಲಿ ಲೆಕ್ಕವಿಲ್ಲದಷ್ಟು ಚಲನೆಗಳು ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವನ್ನು ಸಂಶೋಧನೆಯ ಮೂಲಕ ದಾಖಲಿಸಬಹುದು. ಕೆಲವು ದಾಖಲಿಸಲು ತುಂಬಾ ಕಷ್ಟ. ನಮ್ಮ ಸೌರವ್ಯೂಹದ ಮಧ್ಯಭಾಗದಲ್ಲಿರುವ ಸೂರ್ಯನಲ್ಲಿ ಇತ್ತೀಚೆಗೆ ಅಂತಹ ದೊಡ್ಡ ಘಟನೆ ಕಂಡುಬಂದಿದೆ. ಪ್ರತಿ ಕ್ಷಣವೂ ಸೂರ್ಯನೊಳಗೆ ಸರಣಿ ಸ್ಫೋಟಗಳು ನಡೆಯುತ್ತಿವೆ. ಇದು ಸೂರ್ಯನ ಚಲನೆಗೆ ಪ್ರಮುಖ ಕಾರಣವಾಗಿದೆ. ಆದರೆ ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಘಟನೆಯು ಯಾವುದೇ ಸ್ಫೋಟಕ್ಕಿಂತ ಭಿನ್ನವಾಗಿದೆ.

ಇದನ್ನೂ ಓದಿ: ಶ್ರದ್ಧಾ ದೆವ್ವವಾಗಿ ಬಂದು ಅಫ್ತಾಬ್‍ನನ್ನು 70 ತುಂಡು ಮಾಡ್ಬೇಕು: ರಾಮ್ ಗೋಪಾಲ್ ವರ್ಮಾ

ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಚ್ಚರಿಗೊಳಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಹಾವು ಹರಿದಾಡುತ್ತಿರುವಂತೆ ಕಾಣುತ್ತದೆ. ಇವೆಲ್ಲದರ ಮಧ್ಯೆ ಸೂರ್ಯನ ತಾಪಮಾನವು ತುಂಬಾ ಹೆಚ್ಚಾಗಿರುವಂತೆ ಕಂಡುಬರುತ್ತಿದೆ. ಯಾವುದೇ ಜೀವಿ ಅದನ್ನು ತಲುಪಲು ಅಸಾಧ್ಯವಾಗುವಂತೆ ಗೋಚರವಾಗುತ್ತಿದೆ. ಹಾಗಾದ್ರೆ ಸೂರ್ಯನಲ್ಲಿ ಕಂಡುಬಂದ ಈ ವಸ್ತು ಏನು ಎಂಬ ಗೊಂದಲಕ್ಕೆ ವಿಜ್ಞಾನಿಗಳು ಉತ್ತರವನ್ನು ನೀಡಿದ್ದಾರೆ.

 

 

ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿರುವ ಈ 11 ಸೆಕೆಂಡ್ ವೀಡಿಯೋದಲ್ಲಿ ನೀವು ಕ್ರಾಲ್ ಲೈಟ್ ಅನ್ನು ಸ್ಪಷ್ಟವಾಗಿ ನೋಡುತ್ತೀರಿ. ಇದು ಬೆಂಕಿಯ ಅಲೆಯಂತೆ ಕಾಣುತ್ತದೆ. ಇದನ್ನು ಸೌರ ತರಂಗ ಎಂದು ಕರೆಯಬಹುದು. ಉಳಿದ ಸ್ಫೋಟದಂತೆ, ಈ ತರಂಗವೂ ಸ್ಫೋಟಗಳಿಂದ ಮಾಡಲ್ಪಟ್ಟಿದೆ. ವಿಜ್ಞಾನಿಗಳು ಅದಕ್ಕೆ ಸರ್ಪೆಂಟ್ ಇನ್ಸೈಡ್ ಸನ್ ಎಂದು ಹೆಸರಿಸಿದ್ದಾರೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ ಈ ವೀಡಿಯೊವನ್ನು 2 ವಾರಗಳ ಹಿಂದೆ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಇದುವರೆಗೆ 3.5 ಲಕ್ಷ ಬಾರಿ ವೀಕ್ಷಿಸಲಾಗಿದೆ.

ಇದನ್ನೂ ಓದಿ: Dangerous Stunt: ಪತ್ನಿಯನ್ನು ಬೈಕ್ ಮೇಲೆ ಕೂರಿಸಿ ಅಪಾಯಕಾರಿ ಸ್ಟಂಟ್ ಗಿಳಿದ ಭೂಪ... ವಿಡಿಯೋ ನೋಡಿ

ಕಾಂತೀಯ ಶಕ್ತಿ ಮತ್ತು ತರಂಗ ರಚನೆ:

ಸೌರವ್ಯೂಹದಲ್ಲಿ ಇಂತಹ ಅನೇಕ ಘಟನೆಗಳು ಇವೆ, ಇದು ಸಂಶೋಧಕರಿಗೂ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಅಂತಹ ಸೌರ ಅಲೆಗಳಿಗೆ ಸೂರ್ಯನ ಕಾಂತೀಯ ಕ್ಷೇತ್ರವೂ ಕಾರಣವಾಗಿದೆ ಎಂದು ನಂಬಲಾಗಿದೆ. ಅಲೆಗಳ ಉತ್ಪಾದನೆಯ ಸಮಯದಲ್ಲಿ, ತಾಪಮಾನದಲ್ಲಿ ಏರಿಳಿತಗಳು ಉಂಟಾಗುತ್ತವೆ ಮತ್ತು ಈ ಏರಿಳಿತಗಳಿಂದಾಗಿ, ಅಂತಹ ಅಲೆಗಳು ಉದ್ಭವಿಸುತ್ತವೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News