ನವದೆಹಲಿ: ಇಂದು ಪ್ರೇಮಿಗಳ ದಿನ (Valentine's Day). ಇಂದು ಬಿಹಾರದ ದರ್ಭಾಂಗದಲ್ಲಿ ಯುವಕನೊಬ್ಬ 'ಬಾಯ್ ಫ್ರೆಂಡ್ ಆನ್ ರೆಂಟ್' ಎಂಬ ಬೋರ್ಡ್ ಹಿಡಿದು ನಗರದೆಲ್ಲೆಡೆ ಸುತ್ತಾಡಿದ್ದಾರೆ.
ಇದನ್ನೂ ಓದಿ: IPL 2022: ಅನ್ ಸೋಲ್ಡ್ ಆದ ಬಳಿಕ ಧೋನಿ ಕುರಿತು ಸುರೇಶ್ ರೈನಾ ಮಾತನಾಡಿದ ವಿಡಿಯೋ ವೈರಲ್.!
ಮಾಹಿತಿ ಪ್ರಕಾರ, ಈ ಮೂಲಕ ಜನರಿಗೆ ಪ್ರೀತಿಯ ಸಂದೇಶ (Love message) ನೀಡುತ್ತಿದ್ದಾರೆ. ನೀವು ಚಿತ್ರದಲ್ಲಿ ನೋಡುವಂತೆ, ಬಿಹಾರದ (Bihar) ರಾಜ್ ಕೋಟೆ, ಚರ್ಚ್, ದರ್ಭಾಂಗ ಟವರ್, ದರ್ಭಾಂಗದ ಬಿಗ್ ಬಜಾರ್ ಸೇರಿದಂತೆ ಅನೇಕ ಜನನಿಬಿಡ ಸ್ಥಳಗಳಲ್ಲಿ ಈ ವ್ಯಕ್ತಿ ಪೋಸ್ಟರ್ನೊಂದಿಗೆ ಪೋಸ್ ನೀಡಿದ್ದಾರೆ.
ಅದೇ ಸಮಯದಲ್ಲಿ, ಈಗ ಈ ಚಿತ್ರವನ್ನು (Viral Photo) ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ.
'Boyfriend on Rent' in #Darbhanga, Bihar
🙆🤪रूझान आना शुरु 😄😄
#ValentinesDay2022 pic.twitter.com/T7z7CmRhpP— सुपर कठोर सिंह जी 🇮🇳 (@TheReal_Singh_) February 14, 2022
ವಾಸ್ತವವಾಗಿ, ವೈರಲ್ ಆಗುತ್ತಿರುವ ಚಿತ್ರಗಳಲ್ಲಿ ಕಂಡುಬರುವ ಯುವಕನ ಹೆಸರು ಪ್ರಿಯಾಂಶು ಮತ್ತು ದರ್ಭಾಂಗ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಫ್ಯಾಕಲ್ಟಿಯ 5 ನೇ ಸೆಮಿಸ್ಟರ್ ವಿದ್ಯಾರ್ಥಿ. ಪ್ರಿಯಾಂಶು ತಮ್ಮ ವಿಶಿಷ್ಟ ಪ್ರಚಾರದ ಬಗ್ಗೆ ಈಗಾಗಲೇ ಚರ್ಚೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Valentine's Day:ಅರ್ಜುನ್ ಕಪೂರ್ "ನನ್ನವನು" ಎಂದ ಮಲೈಕಾ! ಬಿಗಿಯಾಗಿ ಅಪ್ಪಿಕೊಂಡ ಪೋಸ್ಟ್ ವೈರಲ್
ಇದಕ್ಕೂ ಮೊದಲು, ಕ್ರಿಸ್ಮಸ್ ಸಂದರ್ಭದಲ್ಲಿ ಪ್ರಿಯಾಂಶು ದರ್ಭಾಂಗ ಚರ್ಚ್ನ ಮುಂದೆ 'ಫ್ರೀ ಹಗ್' ಅಭಿಯಾನವನ್ನು ನಡೆಸಿದ್ದರು. ಅಷ್ಟೇ ಅಲ್ಲ, ಕಳೆದ ತಿಂಗಳು ಜನವರಿಯಲ್ಲಿ ಯುಪಿಯ ಬನಾರಸ್ನಲ್ಲಿಯೂ ಅವರು ಇಂತಹ ಅಭಿಯಾನವನ್ನು ನಡೆಸಿದ್ದರು ಮತ್ತು ಈ ಅಭಿಯಾನದಲ್ಲಿ ಜನರು ಅವರನ್ನು ಸಾಕಷ್ಟು ಮೆಚ್ಚಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.