ಕೊರೊನಾ ಭೀತಿ ಹಿನ್ನಲೆಯಲ್ಲಿ ಜೂನ್ 20 ಕ್ಕೆ ಪರೀಕ್ಷೆಗಳನ್ನು ಮುಂದೂಡಿದ ಈ ರಾಜ್ಯ

ಭಾನುವಾರ (ಮಾರ್ಚ್ 28) ರಾಜಸ್ಥಾನ್ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಆರ್‌ಇಇಟಿ) ಹೊಸ ದಿನಾಂಕವನ್ನು ಘೋಷಿಸಲಾಗಿದೆ.ಜೂನ್ 20 ರಂದು ರೀಇಟಿ ಪರೀಕ್ಷೆ ನಡೆಯಲಿದೆ ಎಂದು ರಾಜಸ್ಥಾನ ಪ್ರೌಢ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಿ.ಪಿ.ಜರೋಲಿ ತಿಳಿಸಿದ್ದಾರೆ.

Last Updated : Mar 28, 2021, 08:28 PM IST
ಕೊರೊನಾ ಭೀತಿ ಹಿನ್ನಲೆಯಲ್ಲಿ ಜೂನ್ 20 ಕ್ಕೆ ಪರೀಕ್ಷೆಗಳನ್ನು ಮುಂದೂಡಿದ ಈ ರಾಜ್ಯ title=
file photo

ನವದೆಹಲಿ: ಭಾನುವಾರ (ಮಾರ್ಚ್ 28) ರಾಜಸ್ಥಾನ್ ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಆರ್‌ಇಇಟಿ) ಹೊಸ ದಿನಾಂಕವನ್ನು ಘೋಷಿಸಲಾಗಿದೆ.ಜೂನ್ 20 ರಂದು ರೀಇಟಿ ಪರೀಕ್ಷೆ ನಡೆಯಲಿದೆ ಎಂದು ರಾಜಸ್ಥಾನ ಪ್ರೌಢ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಿ.ಪಿ.ಜರೋಲಿ ತಿಳಿಸಿದ್ದಾರೆ.

ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ರಾಜಸ್ತಾನ (Rajasthan) ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮಾಡಿದ ಪ್ರಕಟಣೆಯ ಅನುಷ್ಠಾನಕ್ಕಾಗಿ, ಆರ್ಥಿಕವಾಗಿ ದುರ್ಬಲವಾದ ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ನಂತರದ ದಿನಗಳಲ್ಲಿ ರೀಟ್ (REET) ಪರೀಕ್ಷೆಗೆ ಹಾಜರಾಗಲು ಅವಕಾಶವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಬಿಹಾರ, ಬಂಗಾಳ, ರಾಜಸ್ಥಾನ ರಾಜ್ಯಗಳಲ್ಲಿ ಬಾಲ್ಯವಿವಾಹ ಇನ್ನೂ ಜೀವಂತ: UNICEF

ಮುಖ್ಯಮಂತ್ರಿಯವರ ಪ್ರಕಾರ ಈ ಪರೀಕ್ಷೆಯನ್ನು ಆದಷ್ಟು ಬೇಗ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಜರೋಲಿ ಹೇಳಿದರು.ಸುದೀರ್ಘ ಚರ್ಚೆಯ ನಂತರ ಈ ಪರೀಕ್ಷೆಯ ದಿನಾಂಕವನ್ನು ಜೂನ್ 20 ರಂದು ನಿಗದಿಪಡಿಸಲಾಗಿದೆ.

ಇದಕ್ಕೂ ಮೊದಲು ಏಪ್ರಿಲ್ 25 ರಂದು ಆರ್‌ಇಇಟಿ ಪರೀಕ್ಷೆ ನಡೆಯಬೇಕಿತ್ತು, ಈ ದಿನ ಮಹಾವೀರ್ ಜಯಂತಿಯೂ ಇದ್ದರು, ಈ ಕಾರಣದಿಂದಾಗಿ ದಿನಾಂಕ ಬದಲಾವಣೆಯನ್ನು ನಿರಂತರವಾಗಿ ಸಾಮಾಜಿಕ ಮಾಧ್ಯಮ ಮತ್ತು ಸಾರ್ವಜನಿಕ ಪ್ರತಿನಿಧಿಗಳು ಒತ್ತಾಯಿಸುತ್ತಿದ್ದರು.

ಇದನ್ನೂ ಓದಿ: ಈ ರಾಜ್ಯ ಸರ್ಕಾರದಿಂದ ಬಡವರಿಗೆ ಕೇವಲ 8 ರೂಪಾಯಿಗಳಲ್ಲಿ ಸಿಗಲಿದೆ ಊಟ

ಮಂಡಳಿಯ ಅಧ್ಯಕ್ಷ ಡಿ.ಪಿ.ಜರೋಲಿ ಅವರು ಮುಂಬರುವ ಆರ್‌ಇಇಟಿ ದಿನಾಂಕವನ್ನು ಜೂನ್ 20 ಎಂದು ಘೋಷಿಸಲಾಗಿದ್ದು, ಇದರಿಂದ ಇವಿಎಸ್ ವಿಭಾಗದ ಅಭ್ಯರ್ಥಿಗಳು ಲಾಭ ಪಡೆಯಬಹುದು ಮತ್ತು ಮಂಡಳಿಯ ಪರೀಕ್ಷೆಯನ್ನು ಸಹ ಶಾಂತಿಯುತವಾಗಿ ನಡೆಸಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News