ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಅನಾಹುತ

ಮುಂಬೈನ ಐಕಾನಿಕ್ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು,ಇಲ್ಲಿನ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ.ಮಾರುಕಟ್ಟೆಯ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ.

Last Updated : Jun 11, 2020, 07:56 PM IST
ಮುಂಬೈನ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ  ಭಾರಿ ಬೆಂಕಿ ಅನಾಹುತ title=

ನವದೆಹಲಿ: ಮುಂಬೈನ ಐಕಾನಿಕ್ ಕ್ರಾಫೋರ್ಡ್ ಮಾರುಕಟ್ಟೆಯಲ್ಲಿ ಗುರುವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು,ಇಲ್ಲಿನ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಹುಟ್ಟಿಸಿದೆ.ಮಾರುಕಟ್ಟೆಯ ನೆಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಯಾವುದೇ ಗಾಯವಾದ ವರದಿಗಳಿಲ್ಲ

ಮುಂಬೈ ಅಗ್ನಿಶಾಮಕ ದಳದ ಕನಿಷ್ಠ ಆರು ತಂಡಗಳನ್ನು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.ಸಂಜೆ 6:15 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಸಾಂಪ್ರದಾಯಿಕ ಕ್ರಾಫೋರ್ಡ್ ಮಾರುಕಟ್ಟೆ ಬ್ರಿಟಿಷ್ ಯುಗದ ಕಾರ್ಯನಿರತ ಮಾರುಕಟ್ಟೆಯಾಗಿದ್ದು, ಇದರಲ್ಲಿ ತರಕಾರಿಗಳು, ಹಣ್ಣುಗಳು, ಕೋಳಿ, ಆಮದು ಮಾಡಿದ ಆಹಾರ ಪದಾರ್ಥಗಳು ಮುಂತಾದ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಹಲವಾರು ಅಂಗಡಿಗಳಿವೆ.ಈ ಸಗಟು ಮಾರುಕಟ್ಟೆ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿದೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಪೊಲೀಸರು ಮತ್ತು ವೈದ್ಯರನ್ನು ಕೂಡ ಸಜ್ಜುಗೊಳಿಸಲಾಗಿದೆ.

Trending News