ಎರಡು ವಾರದ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಉ.ಪ್ರದೇಶದ ಮಹಿಳೆ ಸಾವು

ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನ 20 ವರ್ಷದ ಮಹಿಳೆ ಇಂದು ಬೆಳಿಗ್ಗೆ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಸಾಮೂಹಿಕ ಅತ್ಯಾಚಾರದ ನಂತರ ಆಕೆಯ ಸ್ಥಿತಿ ಗಂಭೀರವಾಗಿತ್ತು, ನಿನ್ನೆ ದೆಹಲಿಗೆ ತೆರಳುವವರೆಗೂ ಅವರು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದರು.

Last Updated : Sep 29, 2020, 04:19 PM IST
 ಎರಡು ವಾರದ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಉ.ಪ್ರದೇಶದ ಮಹಿಳೆ ಸಾವು  title=
ಸಾಂದರ್ಭಿಕ ಚಿತ್ರ

ನವದೆಹಲಿ: ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನ 20 ವರ್ಷದ ಮಹಿಳೆ ಇಂದು ಬೆಳಿಗ್ಗೆ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಸಾಮೂಹಿಕ ಅತ್ಯಾಚಾರದ ನಂತರ ಆಕೆಯ ಸ್ಥಿತಿ ಗಂಭೀರವಾಗಿತ್ತು, ನಿನ್ನೆ ದೆಹಲಿಗೆ ತೆರಳುವವರೆಗೂ ಅವರು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದರು.

ನಾಲ್ವರು ದಾಳಿಕೋರರು ಈಗ ಜೈಲಿನಲ್ಲಿದ್ದಾರೆ. ಈಗ ಅವರ ಮೇಲೆ ಕೊಲೆ ಆರೋಪವನ್ನು ಸಹ ಹೊರಿಸಲಾಗುವುದು. ಮಹಿಳೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ, ದಾಳಿಕೋರರು ಮೇಲ್ಜಾತಿಯವರು ಎನ್ನಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಿರ್ಭಯ ಹ'ತ್ಯಾಚಾರ ಪ್ರಕರಣ: ನಾಳೆಗಿಲ್ಲ ಅಪರಾಧಿಗಳ ಗಲ್ಲು ಶಿಕ್ಷೆ- ದೆಹಲಿ ಕೋರ್ಟ್ 

ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಲಕ್ಷ್ಕರ್ ಅವರ ಪ್ರಕಾರ, ಆಕೆಯ ದಾಳಿಕೋರರು ಅವಳನ್ನು ಕತ್ತು ಹಿಸುಕಲು ಪ್ರಯತ್ನಿಸುತ್ತಿದ್ದಾಗ ಅವಳು ನಾಲಿಗೆ ಕಚ್ಚಿದ್ದರಿಂದಾಗಿ ತೀವ್ರಗಾಯವಾಗಿತ್ತು. ಈ ಘೋರ ದಾಳಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಅನೇಕರು 2012 ರ ನಿರ್ಭಯಾ ಘಟನೆಗೆ ಹೋಲಿಸಿದ್ದಾರೆ.

ನಿರ್ಭಯಾ 'ಹ'ತ್ಯಾಚಾರಿಗಳಿಗೆ ಪವನ್ ಜಲ್ಲಾದ್ ಅವರಿಂದಲೇ ಏಕೆ ಗಲ್ಲುಶಿಕ್ಷೆ ?

"ಈ ಘಟನೆ ತುಂಬಾ ದುಃಖಕರವಾಗಿದೆ. ನಮ್ಮ ಸರ್ಕಾರ ಸಂತ್ರಸ್ತೆಯ ಕುಟುಂಬದೊಂದಿಗೆ ನಿಂತಿದೆ. ತನಿಖೆ ತಕ್ಷಣ ಪ್ರಾರಂಭವಾಯಿತು ಮತ್ತು ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ತನ್ನ ಕ್ರಮವನ್ನು ತೆಗೆದುಕೊಳ್ಳಲಿದೆ" ಎಂದು ಯುಪಿ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದ್ದಾರೆ.ಉತ್ತರ ಪ್ರದೇಶ ಪೊಲೀಸರು ಆರಂಭದಲ್ಲಿ ಸಹಾಯ ಮಾಡಲಿಲ್ಲ ಆದರೆ ಸಾರ್ವಜನಿಕರ ಆಕ್ರೋಶದ ನಂತರ ಮಾತ್ರ ಪ್ರತಿಕ್ರಿಯಿಸಿದ್ದಾರೆ ಎಂದು ಮಹಿಳೆಯ ಕುಟುಂಬ ಆರೋಪಿಸಿದೆ.

ಸೆಪ್ಟೆಂಬರ್ 14 ರಂದು ದೆಹಲಿಯಿಂದ 200 ಕಿ.ಮೀ ದೂರದಲ್ಲಿರುವ ಹತ್ರಾಸ್ ಎಂಬ ಹಳ್ಳಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ. ಅವಳು ತನ್ನ ಕುಟುಂಬದೊಂದಿಗೆ ಹುಲ್ಲು ಕತ್ತರಿಸುತ್ತಿದ್ದ ಸ್ಥಳದಿಂದ ಅವಳ ದುಪಟ್ಟಾಳನ್ನು ಎಳೆದು ಅತ್ಯಾಚಾರಗೈಯಲಾಗಿದೆ.

ನಿರ್ಭಯಾ ದೋಷಿಗಳಿಗೆ ಗಲ್ಲು ಶಿಕ್ಷೆ ಗ್ಯಾರಂಟಿ

ಮಹಿಳೆಯ ಸಹೋದರ ಮಾತನಾಡಿ' ಅವಳು ಕಾಣೆಯಾಗಿದ್ದಾಳೆಂದು ನನ್ನ ತಾಯಿ ಅರಿತುಕೊಂಡರು ಮತ್ತು ಅವಳನ್ನು ಹುಡುಕಲು ಹೋದರು. ನನ್ನ ತಂಗಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅವರು ಅವಳ ಮೇಲೆ ಅತ್ಯಾಚಾರ ಎಸಗಿದ್ದರು. ಪೊಲೀಸರು ಆರಂಭದಲ್ಲಿ ನಮಗೆ ಸಹಾಯ ಮಾಡಲಿಲ್ಲ...ಅವರು ಶೀಘ್ರ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.

ಆಕೆಯನ್ನು ಏಮ್ಸ್ ಗೆ ಕರೆದೊಯ್ಯಲಾಗುವುದು ಎಂದು ನಮಗೆ ತಿಳಿಸಲಾಯಿತು, ಆದರೆ ಆಕೆಯನ್ನು ಸಫ್ದರ್ಜಂಗ್‌ಗೆ ಕರೆದೊಯ್ಯಲಾಯಿತು.ಅವಳ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಅವಳು ಬಟ್ಟೆ ಇಲ್ಲದೆ ಬಜ್ರಾ ಹೊಲದಲ್ಲಿ ಪತ್ತೆಯಾಗಿದ್ದಳು. ಆರಂಭದಲ್ಲಿ ಅವಳು ಹಾವಿನಿಂದ ಕಚ್ಚಲ್ಪಟ್ಟಿದ್ದಾಳೆ ಎಂದು ನಾವು ಕೂಡ ಯೋಚಿಸಿದ್ದೆವು. ಅವಳ ಕುತ್ತಿಗೆಮೂರು ಮೂಳೆಗಳು ಮುರಿದುಹೋಗಿವೆ.ನಾವು ನಿನ್ನೆ ಇಲ್ಲಿಗೆ ತಲುಪಿದೆವು (ಸಫ್ದರ್ಜಂಗ್ ಆಸ್ಪತ್ರೆ),ಎಂದು "ಇನ್ನೊಬ್ಬ ಸಹೋದರ ಹೇಳಿದನು.
 

Trending News