ರಸ್ತೆ ಅಪಘಾತದಿಂದ 2017 ರಲ್ಲಿ 9400 ಮಕ್ಕಳ ಸಾವು-ಸಮೀಕ್ಷೆ

2017 ರ ಸಾಲಿನಲ್ಲಿ 9,400 ಕ್ಕೂ ಹೆಚ್ಚು ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಅಂಶ ಈಗ ಸರ್ವೇ ಮೂಲಕ ತಿಳಿದುಬಂದಿದೆ.

Last Updated : Jan 13, 2019, 03:21 PM IST
ರಸ್ತೆ ಅಪಘಾತದಿಂದ 2017 ರಲ್ಲಿ 9400 ಮಕ್ಕಳ ಸಾವು-ಸಮೀಕ್ಷೆ   title=
ಸಾಂದರ್ಭಿಕ ಚಿತ್ರ

ನವದೆಹಲಿ: 2017 ರ ಸಾಲಿನಲ್ಲಿ 9,400 ಕ್ಕೂ ಹೆಚ್ಚು ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನುವ ಅಂಶ ಈಗ ಸರ್ವೇ ಮೂಲಕ ತಿಳಿದುಬಂದಿದೆ.

ಸೇವ್ ಲೈಫ್ ಫೌಂಡೆಶನ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಈಗ ಬೆಳಕಿಗೆ ಬಂದಿದೆ.ಈ ಸಮೀಕ್ಷೆಯಲ್ಲಿ ಮಕ್ಕಳ ರಕ್ಷಣೆಗಾಗಿ ಕಠಿಣ ಕಾನೂನನ್ನು ತರುವ ಅಗತ್ಯವಿದೆ ಎಂದು ಶೇ 91.4 ಜನರು ಅಭಿಪ್ರಾಯಪಟ್ಟಿದ್ದಾರೆ.ರಸ್ತೆ ಮೇಲೆ ಹೆಚ್ಚುತ್ತಿರುವ ಮಕ್ಕಳ ಸಾವು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದ್ದು.ಇಂತಹ ದುರ್ಘಟನೆಗಳಿಗೆ ಪ್ರಮುಖ ಕಾರಣಗಳನ್ನು ಈ ಸರ್ಕಾರೇತರ ಸಂಸ್ಥೆ ಪತ್ತೆ ಹಚ್ಚಿದೆ. ಅದರಲ್ಲಿ ಸೀಟ್ ಬೆಲ್ಟ್ ಗಳನ್ನು ಬಳಸದೆ ಇರುವುದು ಕೂಡ ಒಂದು ಕಾರಣ ಎನ್ನಲಾಗಿದೆ. 

ದೇಶದಲ್ಲಿ ಸೀಟ್ ಬೆಲ್ಟ್ ಗಳ ವಿಚಾರವಾಗಿ ಕಾನೂನುಗಳು ಜಾರಿಯಲ್ಲಿದ್ದರೂ ಕೂಡ ಅದನ್ನು ಕಾರ್ಯಗತಗೊಳಿಸುವುದು ಒಂದು ಸವಾಲಾಗಿದೆ.2017 ರಲ್ಲಿ ದೇಶದಲ್ಲಿನ ರಸ್ತೆ ಅಪಘಾತಗಳಲ್ಲಿ 26,896 ಜನ ಸಾವುಗಳು ಸೀಟ್ ಬೆಲ್ಟ್ ಗಳನ್ನು ಬಳಕೆ ಮಾಡದಿರುವುದೇ ಕಾರಣವೆಂದು ಹೇಳಲಾಗಿದೆ.ಸೀಟ್-ಬೆಲ್ಟ್ಗಳನ್ನು ಬಳಸದೆ ಇರುವ ಕಾರಣದಿಂದಾಗಿ ಅಂತಹ ಸಾವುಗಳಲ್ಲಿ 377% ರಷ್ಟು ಹೆಚ್ಚಾಗಿವೆ.2017 ರಲ್ಲಿ, 16,876 ಪ್ರಯಾಣಿಕರು ಬೆಲ್ಟ್ ಬಳಸದೆ ಇರುವ ಕಾರಣದಿಂದ ಸಾವನ್ನಪ್ಪಿದರೆ , 61,942 ಮಂದಿ ಗಾಯಗೊಂಡಿದ್ದಾರೆ. 

Trending News