ನವದೆಹಲಿ: ಭೂ ವಿವಾದಕ್ಕೆ ಸಂಬಂಧಿಸಿದಂತೆ ಪೂರ್ವ ಉತ್ತರ ಪ್ರದೇಶದ ಸೋನ್‌ಭದ್ರ ಜಿಲ್ಲೆಯ ಹಳ್ಳಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ಚಕಮಕಿಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಇಬ್ಬರು ಜನರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ
ಈ ಘಟನೆ ಸೋನ್ ಭದ್ರ ಜಿಲ್ಲೆಯ ಉಭಾ ಗ್ರಾಮದಲ್ಲಿ ನಡೆದಿದ್ದು, ಎರಡು ವರ್ಷಗಳ ಹಿಂದೆ ಯಜ್ಞ ದತ್ ಎಂದು ಗುರುತಿಸಲ್ಪಟ್ಟ ಗ್ರಾಮದ ಮುಖ್ಯಸ್ಥ 36 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ್ದಾನೆ. ಇಂದು ಅವನು ಮತ್ತು ಅವನ ಸಹಚರರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋದಾಗ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ, ಇದರಿಂದಾಗಿ ಅವರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗ ಈ ಘಟನೆ ವಿಚಾರವಾಗಿ ಸುದ್ದಿಗಾರರಿಗೆ ತಿಳಿಸಿರುವ ಹಿರಿಯ ಪೋಲಿಸ್ ಅಧಿಕಾರಿಯೋಬ್ಬರು "ಇದು ಉಭಾ ಗ್ರಾಮದ ಘೋರಾವಾಲ್ ಪ್ರದೇಶದಲ್ಲಿ ನಡೆದ ಘಟನೆಯಾಗಿದೆ. ಎರಡು ವರ್ಷಗಳ ಹಿಂದೆ ಪ್ರಧಾನ್ 90 ಬಿಘಾ (36 ಎಕರೆ) ಭೂಮಿಯನ್ನು ಖರೀದಿಸಿದರು. ಇಂದು ಅವರು ತಮ್ಮ ಕೆಲವು ಮಿತ್ರರೊಂದಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹೋಗಿದ್ದಾರೆ. ಆಗ ಇದಕ್ಕೆ ಸ್ಥಳೀಯ ಗ್ರಾಮಸ್ಥರು ವಿರೋಧಿಸಿದ್ದಾರೆ. ಇದರ ಪರಿಣಾಮವಾಗಿ, ಅವರು (ಗ್ರಾಮದ ಮುಖ್ಯಸ್ಥರು) ಗುಂಡು ಹಾರಿಸಿ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
"ಗ್ರಾಮ ಪ್ರಧಾನ್ ಅನೇಕ ಜನರನ್ನು ಟ್ರಾಕ್ಟರುಗಳಲ್ಲಿ ಕರೆ ತಂದು ತನ್ನ ಭೂಮಿಯನ್ನು ಉಳುಮೆ ಮಾಡಲು ಪ್ರಾರಂಭಿಸಿದರು ಇದಕ್ಕೆ ಗ್ರಾಮಸ್ಥರು ಇದನ್ನು ವಿರೋಧಿಸಿದ್ದಾರೆ. ಈ ಸಮಯದಲ್ಲಿ ಆ ವ್ಯಕ್ತಿ ಗ್ರಾಮಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದ್ದಾರೆ ಎಂದು ಸೋನ್‌ಭದ್ರ ಪೊಲೀಸ್ ಮುಖ್ಯಸ್ಥ ಸಲ್ಮಂತಜ್ ಪಾಟೀಲ್ ಹೇಳಿದರು .ಈ ಜಮೀನು ತುಂಡು ಈ ಹಿಂದೆ ಗ್ರಾಮದ ಮುಖ್ಯಸ್ಥ ಮತ್ತು ಗ್ರಾಮಸ್ಥರ ನಡುವೆ ಉದ್ವಿಗ್ನತೆಯನ್ನುಂಟು ಮಾಡಿತ್ತು ಎಂದು ಪೊಲೀಸರು ಹೇಳುತ್ತಾರೆ.