7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಏರಿಕೆ! ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ

7th Pay Commission Updates: 3% ಹೆಚ್ಚಳದ ನಂತರ, ತುಟ್ಟಿಭತ್ಯೆ 31% ಕ್ಕೆ ಏರಿಕೆಯಾದಂತಾಗಿದೆ. ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಮತ್ತೊಮ್ಮೆ ಏರಿಕೆಯಾಗಿದ್ದು ಇಲ್ಲಿದೆ ಅದರ ಸಂಪೂರ್ಣ ಲೆಕ್ಕಾಚಾರ.

Written by - Nitin Tabib | Last Updated : Nov 22, 2021, 01:36 PM IST
  • ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳ.
  • ಪ್ರಸ್ತುತ ಇರುವ ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಏರಿಕೆಯಾಗಿ ಶೇ.31ಕ್ಕೆ ತಲುಪಿದ DA
  • ವೇತನದಲ್ಲಿ ಎಷ್ಟು ಏರಿಕೆಯಾಗಲಿದೆ ಎಂಬುದರ ಲೆಕ್ಕಾಚಾರ ಇಲ್ಲಿದೆ.
7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಏರಿಕೆ! ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ title=
7th Pay Commission Updates (File Photo)

ನವದೆಹಲಿ: 7th Pay Commission - ಕೇಂದ್ರ ನೌಕರರಿಗೆ  (Central Government Employees) ಸಂತಸದ ಸುದ್ದಿ ಪ್ರಕಟವಾಗಿದೆ. ಈ ತಿಂಗಳು ನೌಕರರ ಸಂಬಳ ಮತ್ತೊಮ್ಮೆ ಹೆಚ್ಚಾಗಲಿದೆ (Salary Hike). ವಾಸ್ತವವಾಗಿ, 28% DA ಹೆಚ್ಚಳದ ನಂತರ, ಮತ್ತೊಮ್ಮೆ ತುಟ್ಟಿಭತ್ಯೆಯನ್ನು ಶೇ. 3 ರಷ್ಟು ಹೆಚ್ಚಿಸಲಾಗಿದೆ. ಹಣಕಾಸು ಸಚಿವಾಲಯದ ಪ್ರಕಾರ, ಅಕ್ಟೋಬರ್‌ನಿಂದ ಉದ್ಯೋಗಿಗಳು ಒಟ್ಟು ಶೇ. 31ರಷ್ಟು ತುಟ್ಟಿಭತ್ಯೆಯನ್ನು ಪಡೆಯಲಿದ್ದಾರೆ.  ಅಂದರೆ, ನವೆಂಬರ್ ತಿಂಗಳ ಸಂಬಳವೂ ಹೆಚ್ಚಾಗಲಿದೆ. 

ಸುದೀರ್ಘ ಕಾಯುವಿಕೆಯ ನಂತರ ಕೇಂದ್ರ ಸರ್ಕಾರವು ನೌಕರರ ತುಟ್ಟಿಭತ್ಯೆಯನ್ನು 17% ರಿಂದ 28% ಕ್ಕೆ ಹೆಚ್ಚಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ನಂತರ, ಇದೀಗ ಮತ್ತೆ 3% DA ಹೆಚ್ಚಿಸಲಾಗಿರುವ ಕಾರಣ ಅದು ಶೇ.31ಕ್ಕೆ ಬಂದು ತಲುಪಿದೆ.

ತುಟ್ಟಿಭತ್ಯೆ ಶೇ.31ಕ್ಕೆ ಏರಿಕೆ (DR Hike)
ನೌಕರರ ತುಟ್ಟಿ ಭತ್ಯೆ ಶೇ.31ಕ್ಕೆ ಏರಿಕೆಯಾಗಿದೆ. ಈ ಹಿಂದೆ ಅದು 28% ಆಗಿತ್ತು. ಹೀಗಾಗಿ ಇದೀಗ ಕೇಂದ್ರ ಉದ್ಯೋಗಿಗಳ ನವೆಂಬರ್ ತಿಂಗಳ ಸಂಬಳದಲ್ಲಿ ಬಂಪರ್ ಏರಿಕೆಯಾಗಲಿದೆ. ಈ ತಿಂಗಳು ಉದ್ಯೋಗಿಗಳ ಸಂಬಳದಲ್ಲಿ 3% ಹೆಚ್ಚಳ DAಬರುತ್ತದೆ. 28% DA ಗೆ ಹೋಲಿಸಿದರೆ 31% DA ಯೊಂದಿಗೆ ನೌಕರರ ಸಂಬಳ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

31% DAಮೇಲೆ ಲೆಕ್ಕಾಚಾರ (DA Hike)
ತುಟ್ಟಿಭತ್ಯೆಯನ್ನು ಶೇಕಡಾ 3 ರಷ್ಟು ಹೆಚ್ಚಿಸಿದ ನಂತರ, ಒಟ್ಟು DA ಶೇಕಡಾ 31 ಆಗಿದೆ. ಈಗ 18,000 ರೂ ಮೂಲ ವೇತನದಲ್ಲಿ, ಒಟ್ಟು ವಾರ್ಷಿಕ ತುಟ್ಟಿ ಭತ್ಯೆ 66,960 ರೂ. ಸಿಗಲಿದೆ. ಆದರೆ ವ್ಯತ್ಯಾಸದ ಬಗ್ಗೆ ಮಾತನಾಡುವುದಾದರೆ, ವೇತನದಲ್ಲಿ ವಾರ್ಷಿಕ ಹೆಚ್ಚಳ 6,480 ರೂ. ಇರಲಿದೆ.

ಇದನ್ನೂ ಓದಿ-Upcoming Royal Enfield Motorcycle: ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲಿವೆ Royal Enfieldನ 4 ಬೈಕ್ ಗಳು

ಕನಿಷ್ಠ ಮೂಲ ವೇತನದ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ ರೂ 18,000
2. ಹೊಸ ತುಟ್ಟಿಭತ್ಯೆ (31%) ರೂ.5580/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (28%) ರೂ.5040/ತಿಂಗಳು
4. ತುಟ್ಟಿಭತ್ಯೆ ಎಷ್ಟು ಹೆಚ್ಚಿದೆ 5580- 5040 = ರೂ 540/ತಿಂಗಳಿಗೆ
5. ವಾರ್ಷಿಕ ವೇತನದಲ್ಲಿ ಹೆಚ್ಚಳ 540X12 = 6,480 ರೂ

ಇದನ್ನೂ ಓದಿ-LIC: ಈಗ ಏಜೆಂಟ್ ಗಳ ಅಗತ್ಯವಿಲ್ಲ, ವಿಮೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಒಂದೇ ಕರೆಯಲ್ಲಿ ಲಭ್ಯ

ಗರಿಷ್ಠ ಮೂಲ ವೇತನದ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ ರೂ 56900
2. ಹೊಸ ತುಟ್ಟಿಭತ್ಯೆ (31%) ರೂ 17639/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (28%) ರೂ 15932/ತಿಂಗಳು
4. 17639-15932= ರೂ 1,707/ತಿಂಗಳಿಗೆ ಎಷ್ಟು ತುಟ್ಟಿ ಭತ್ಯೆ ಹೆಚ್ಚಿದೆ
5. ವಾರ್ಷಿಕ ವೇತನದಲ್ಲಿ ಹೆಚ್ಚಳ 1,707 X12 = 20,484 ರೂ

ಇದನ್ನೂ ಓದಿ-7th Pay Commission: Good News - ಶೀಘ್ರದಲ್ಲಿಯೇ ಈ ಸರ್ಕಾರಿ ನೌಕರರ ಖಾತೆ ಸೇರಲಿದೆ 4 ತಿಂಗಳ DA ಬಾಕಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News