7th Pay Commission: ಸರ್ಕಾರಿ ನೌಕರರಿಗೆ ಸಂಬಂಧಿಸಿದ ಒಂದು ಮಹತ್ವದ ಅಪ್ಡೇಟ್ ಪ್ರಕಟ, ನೀವೂ ತಿಳಿದುಕೊಳ್ಳಿ

7th Pay Commission Latest News Today: ಕೇಂದ್ರ ಸರ್ಕಾರಿ ನೌಕರರ ಪೆನ್ಷನ್ ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಪ್ರಕಟಗೊಂಡಿದೆ.

Written by - Nitin Tabib | Last Updated : Jun 18, 2021, 10:37 PM IST
  • ಕೇಂದ್ರ ಸರ್ಕಾರಿ ನೌಕರರ ಪೆನ್ಷನ್ ಗೆ ಸಂಬಂಧಿಸಿದ ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ.
  • OPS ಅಥವಾ NPS ಅಡಿ ಸಂಪೂರ್ಣ ಕಾರ್ಪಸ್ ನಿಂದ ಲಾಭ ಆಯ್ದುಕೊಳ್ಳುವ ಆಯ್ಕೆ ನೀಡಲಾಗುವುದು.
  • ಆದರೆ, ಸಂತ್ರಸ್ತರ ಕುಟುಂಬ ಸದಸ್ಯರಿಗೆ ಈ ಆಯ್ಕೆ ಸಿಗುವುದಿಲ್ಲ.
7th Pay Commission: ಸರ್ಕಾರಿ ನೌಕರರಿಗೆ ಸಂಬಂಧಿಸಿದ ಒಂದು ಮಹತ್ವದ ಅಪ್ಡೇಟ್ ಪ್ರಕಟ, ನೀವೂ ತಿಳಿದುಕೊಳ್ಳಿ title=
7th Pay Commission (File Photo)

7th Pay Commission Latest News Today - ಕೇಂದ್ರ ಸರ್ಕಾರಿ ನೌಕರರ ಪೆನ್ಷನ್ ಗೆ ಸಂಬಂಧಿಸಿದ ಮಹತ್ವದ ಅಪ್ಡೇಟ್ ಪ್ರಕಟಗೊಂಡಿದೆ. CCS (Implementation of NPS) Rules, 2021 ನಿಯಮ 10ರ ಅಡಿ, ನ್ಯಾಷನಲ್ ಪೇಮೆಂಟ್ ಸಿಸ್ಟಮ್ ಅಡಿ ಬರುವ ಸರ್ಕಾರಿ ನೌಕರರಿಗೆ ಇದೀಗ ಮೃತ್ಯು ಸಂಭವಿಸಿದ ಸ್ಥಿತಿಯಲ್ಲಿ ಓಲ್ಡ್ ಪೆನ್ಷನ್ ಸ್ಚೀಮ್ ಅಥವಾ NPS ಯೋಜನೆ ಅಡಿ ಸಂಗ್ರಹಗೊಂಡ ಸಂಪೂರ್ಣ ಕಾರ್ಪಸ್ ನಿಂದ ಲಾಭ ಆಯ್ದುಕೊಳ್ಳುವ ಆಯ್ಕೆ ನೀಡಲಾಗುವುದು. ಆದರೆ, ಸಂತ್ರಸ್ತರ ಕುಟುಂಬ ಸದಸ್ಯರಿಗೆ ಈ ಆಯ್ಕೆ ಸಿಗುವುದಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರಿ ನೌಕರ ತನ್ನ ಆಪ್ಶನ್ ಆಯ್ಕೆ ಮಾಡದೆ ಹೋದಲ್ಲಿ, ಸೇವೆಯ ಆರಂಭಿಕ 15 ವರ್ಷಗಳವರೆಗೆ ಹಳೆ ಪೆನ್ಷನ್ ಯೋಜನೆಯ ಅಡಿ ಲಾಭ ತನ್ನಷ್ಟಕ್ಕೆ ತಾನೇ ಸಿಗಲಿದ್ದು, ಅದಾದ ಬಳಿಕ ಅವರಿಗೆ ಡಿಫಾಲ್ಟ್ NPC ಆಯ್ಕೆ ಇರಲಿದೆ. ಪ್ರಸ್ತುತ ಹಳೆ ಪೆನ್ಷನ್ ಯೋಜನೆಯ ಡೀಫಾಲ್ಟ್ ಆಯ್ಕೆ ಈ ನಿಯಮಗಳ ಅನುಸಾರ ಮಾರ್ಚ್ 2024 ರವರೆಗೆ ಇದೆ. ಇದರಲ್ಲಿ ಸರ್ಕಾರಿ ನೌಕರ ಕೇವಲ 15 ವರ್ಷ ಪೂರ್ಣಗೊಳಿಸಿದರೂ ಕೂಡ ಈ ನಿಯಮ ಅನ್ವಯಿಸಲಿದೆ.

CCS (Implementation of NPS) Rules, 2021 ಅನ್ನು ಮಾರ್ಚ್ 30, 2021 ರಂದು ಗ್ಯಾಜೆಟ್ ಅಧಿಸೂಚನೆಯನ್ನು ಜಾರಿಗೊಳಿಸುವ ಮೂಲಕ ಘೋಷಿಸಲಾಗಿದೆ. ಸಿಸಿಎಸ್ (ಎನ್‌ಪಿಎಸ್ ಅನುಷ್ಠಾನ) ನಿಯಮ, 2021 ರ ಪ್ರಕಾರ, “ಎನ್‌ಪಿಎಸ್ ವ್ಯಾಪ್ತಿಗೆ ಬರುವ ಪ್ರತಿಯೊಬ್ಬ ಸರ್ಕಾರಿ ನೌಕರರು, ಸರ್ಕಾರಿ ಸೇವೆಗೆ ಸೇರುವ ಸಮಯದಲ್ಲಿ, ಎನ್‌ಪಿಎಸ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಫಾರ್ಮ್ 1 ರಲ್ಲಿ ಒಂದು ಆಯ್ಕೆಯನ್ನು ಆಯ್ದುಕೊಳ್ಳಬೇಕು. ಏಕೆಂದರೆ, ಸಿವಿಲ್ ಸರ್ವೀಸಸ್ (ಪಿಂಚಣಿ) ನಿಯಮಗಳು, 1972 ಅಥವಾ ಕೇಂದ್ರ ನಾಗರಿಕ ಸೇವೆಗಳ (ಅಸಾಧಾರಣ ಪಿಂಚಣಿ) ನಿಯಮಗಳು, 1939 ರಲ್ಲಿ ಅವರ ಸಾವು ಅಥವಾ ಅಸಮರ್ಥತೆಯಿಂದಾಗಿ ಬೋರ್ಡಿಂಗ್ ಅಥವಾ ನೌಕರಿ ಕಡಿತ ಮೇಲೆ ಅವರು ನಿವೃತ್ತರಾದಾಗ. " ಎನ್‌ಪಿಎಸ್‌ನ ವ್ಯಾಪ್ತಿಯು ಅಂತಹ ಆಯ್ಕೆಯನ್ನು ಶೀಘ್ರವಾಗಿ ಫಾರ್ಮ್ 2 ರಲ್ಲಿ ಬಳಸಬೇಕಾಗುತ್ತದೆ. 

ಇದಕ್ಕೆ ಸಂಬಂಧಿಸಿದಂತೆ ಜೂನ್ 9, 2021 ರಂದು ಹೊರಡಿಸಲಾಗಿರುವ ಒಂದು ಆಫಿಸ್ ಮೆಮೊರೆಂಡಮ್ ನಲ್ಲಿ ಹೇಳಿದ್ದ ಡೈರೆಕ್ಟರ್ ಜನರಲ್ ಆಫ್ ಹೆಲ್ತ್ (DGHS), ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಮತ್ತು ಎನ್‌ಪಿಎಸ್ ವ್ಯಾಪ್ತಿಗೆ ಬರುವ ನೌಕರರು ಸಹ ಕುಟುಂಬ ವಿವರಗಳನ್ನು ಫಾರ್ಮ್ 2 ರಲ್ಲಿ ನೀಡಬೇಕಾಗುತ್ತದೆ. ಈ ಫಾರ್ಮ್ ಅನ್ನು ಕೇಂದ್ರ ದಾಖಲೆಯಲ್ಲಿ ಇಡಬೇಕಾದ ಅವಶ್ಯಕತೆ ಇದೆ.  ಜೂನ್ 11 ರೊಳಗೆ ತಮ್ಮ ವಿಭಾಗಕ್ಕೆ ಇದಕ್ಕೆ ಸಂಬಂಧಿಸಿದ ತಮ್ಮ ಆಯ್ಕೆಯನ್ನು ತಿಳಿಸುವಂತೆ DGHS ಎಲ್ಲಾ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿತ್ತು.

ಇದನ್ನೂ ಓದಿ-LPG Delivery Charges : ನಿಮಗೆ ಬೇಕಾದ ಸಮಯದಲ್ಲಿ ಎಲ್ ಪಿಜಿ ಸಿಲಿಂಡರ್ ಬೇಕಾದರೆ ಏನು ಮಾಡಬೇಕು?

ಸೇವಾವಧಿಯಲ್ಲಿ ಮೃತ್ಯು ಸಂಭವಿಸಿದರೆ ಏನು ಲಾಭ?
ಸಿಸಿಎಸ್ (ಪಿಂಚಣಿ) ನಿಯಮಗಳು, 1972 ರ ಅಡಿಯಲ್ಲಿ ಕುಟುಂಬ ಪಿಂಚಣಿ, ಸರ್ಕಾರಿ ನೌಕರನು ಅಥವಾ ಪೂರ್ವನಿಯೋಜಿತವಾಗಿ ಚಲಾಯಿಸಿದ ಆಯ್ಕೆಯ ಪ್ರಕಾರ ಅಥವಾ ಸರ್ಕಾರಿ ನೌಕರನು ಎನ್‌ಪಿಎಸ್ ಅಡಿಯಲ್ಲಿ ಪ್ರಯೋಜನಗಳನ್ನು ಆರಿಸಿಕೊಂಡಿದ್ದರೆ, ಆತನ ಕುಟುಂಬವು ಎನ್‌ಪಿಎಸ್ ಅಡಿಯಲ್ಲಿ ಸಂಗ್ರಹಣೆಯಾದ ಪಿಂಚಣಿ ಸಂಪತ್ತಿನಿಂದ ಲಾಭ ಪಡೆಯಲು ಅರ್ಹತೆ ಪಡೆದುಕೊಳ್ಳಲಿದೆ.

ಇದನ್ನೂ ಓದಿ-Today Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹ 861ಇಳಿಕೆ!

>> ಡೆತ್ ಗ್ರ್ಯಾಚುಟಿ
>> ಲೀವ್ ಎನ್ಕಾಷ್ಮೆಂಟ್
>> CGEGIS ನಿಂದ ಲಾಭ
>> CGHS ಸೌಲಭ್ಯ
>> ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ (7th Pay Commission) ಶಿಫಾರಸ್ಸಿನಂತೆ ವೇತನ ಪಾವತಿ.

ಇದನ್ನೂ ಓದಿ-Black tree India : ಪ್ರತಿ ಬಟ್ಟೆಯ ಖರೀದಿಯೊಂದಿಗೆ ಸಿಗಲಿದೆ ಉಚಿತ ಮೊಬೈಲ್, 300 ರೂ ಕ್ಯಾಶ್ ಬ್ಯಾಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News