7th pay commission: ಪಿಯುಸಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ

7th pay commission today: ಹೈಕೋರ್ಟ್‌ನಲ್ಲಿ (HCRAJ) ಕೆಲಸಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದೆ. ರಾಜಸ್ಥಾನ ಹೈಕೋರ್ಟ್(Rajasthan High Court)ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಈ ಎಲ್ಲಾ ಖಾಲಿ ಹುದ್ದೆಗಳನ್ನು 7 ನೇ ವೇತನ ಆಯೋಗದ(7th pay commission) ಅಡಿಯಲ್ಲಿ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ.

Last Updated : Jan 20, 2020, 01:35 PM IST
7th pay commission: ಪಿಯುಸಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ title=
Representational Image

ನವದೆಹಲಿ: 7th pay commission today: ಹೈಕೋರ್ಟ್‌ನಲ್ಲಿ (HCRAJ) ಕೆಲಸಕ್ಕಾಗಿ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಿದೆ. ರಾಜಸ್ಥಾನ ಹೈಕೋರ್ಟ್(Rajasthan High Court)ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಈ ಎಲ್ಲಾ ಖಾಲಿ ಹುದ್ದೆಗಳನ್ನು 7 ನೇ ವೇತನ ಆಯೋಗದ(7th pay commission) ಅಡಿಯಲ್ಲಿ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಖಾಲಿ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯು ಜನವರಿ 30, 2020 ರಿಂದ ಪ್ರಾರಂಭವಾಗಲಿದೆ. ಈ ಖಾಲಿ ಹುದ್ದೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಎಚ್‌ಸಿಆರ್‌ಜೆ 434 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಎಲ್ಲಾ ಹುದ್ದೆಗಳು ಸ್ಟೆನೋಗ್ರಾಫರ್ ಹುದ್ದೆಗಳಾಗಿವೆ. ಈ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸಲು ಫೆಬ್ರವರಿ 28, 2020 ಕೊನೆಯ ದಿನಾಂಕವಾಗಿದೆ. ಈ ಖಾಲಿ ಹುದ್ದೆಗಳಿಗೆ ಲೆವಲ್ 10ರ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ಹೆಸರು: ಸ್ಟೆನೋಗ್ರಾಫರ್ (ಗ್ರೇಡ್ III)

ಪೋಸ್ಟ್‌ಗಳ ಸಂಖ್ಯೆ: 434

ಪೇ ಸ್ಕೇಲ್: 
ಈ ಖಾಲಿ ಹುದ್ದೆಯಲ್ಲಿ, ಏಳನೇ ವೇತನ ಆಯೋಗದ 10 ನೇ ಲೆವೆಲ್ ಅಡಿಯಲ್ಲಿ ನಿಮಗೆ ಸಂಬಳ ಸಿಗುತ್ತದೆ. ಇದರ ಅಡಿಯಲ್ಲಿ ಮಾಸಿಕ 33,800 ರೂ.ಗಳಿಂದ 1,06,700 ರೂ.ವರೆಗೆ ವೇತನ ಸಿಗಲಿದೆ.

ಅರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12 ನೇ ತರಗತಿ ಅಥವಾ ತತ್ಸಮಾನ ಪ್ರಮಾಣಪತ್ರವನ್ನು ಹೊಂದಿರಬೇಕು. ಇದಲ್ಲದೆ, ಅಭ್ಯರ್ಥಿಗಳು ಟೈಪಿಂಗ್ ಪ್ರಮಾಣ ಪತ್ರವನ್ನೂ ಕೂಡ ಹೊಂದಿರಬೇಕು.

ಅರ್ಜಿ ಶುಲ್ಕ:
ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 650 ರೂ.ಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯುಡಿ ಅರ್ಜಿ ಶುಲ್ಕವನ್ನು 400 ರೂ. ನೀವು ಕ್ರೆಡಿಟ್, ಡೆಬಿಟ್ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.

ನೆನಪಿಡಬೇಕಾದ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಪ್ರಕ್ರಿಯೆಗೆ ಪ್ರಾರಂಭ ದಿನಾಂಕ - 30 ಜನವರಿ 2020
  • ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ - 28 ಫೆಬ್ರವರಿ 2020
  • ಶುಲ್ಕ ಸಲ್ಲಿಕೆಗೆ ಕೊನೆಯ ದಿನಾಂಕ - 29 ಫೆಬ್ರವರಿ 2020

ಆಯ್ಕೆ ಪ್ರಕ್ರಿಯೆ:
ಈ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶಾರ್ಟ್ ಹ್ಯಾಂಡ್ ಡಿಕ್ಟೆಶನ್, ತರ್ಜುಮೆ ಪರೀಕ್ಷೆ ಮತ್ತು ಕಂಪ್ಯೂಟರ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.

ಅಧಿಕೃತ ಅಧಿಸೂಚನೆಯನ್ನು ಇಲ್ಲಿ ಪರಿಶೀಲಿಸಿ:
ಹೆಚ್ಚಿನ ಮಾಹಿತಿಗಾಗಿ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://hcraj.nic.in/hcraj/ ಗೆ ಭೇಟಿ ನೀಡಬಹುದು. ಇದಲ್ಲದೆ, ಅಧಿಕೃತ ಅಧಿಸೂಚನೆಗಳಿಗಾಗಿ ನೀವು ಈ ಲಿಂಕ್ ಅನ್ನು https://hcraj.nic.in/hcraj/hcraj_admin/uploadfile/recruitment/Steno57.pdf ಅನ್ನು ಪರಿಶೀಲಿಸಬಹುದು.

ಉದ್ಯೋಗದ ಸ್ಥಳ:
ಈ ಖಾಲಿ ಹುದ್ದೆಯಲ್ಲಿ ಆಯ್ಕೆಯಾಗುವ ಎಲ್ಲ ಅಭ್ಯರ್ಥಿಗಳನ್ನು ಕೆಲಸಕ್ಕಾಗಿ ರಾಜಸ್ಥಾನದಲ್ಲಿ ಪೋಸ್ಟ್ ಮಾಡಲಾಗುವುದು.
 

Trending News