7th Pay Commission:ನಾಮಿನಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದ ಸರ್ಕಾರ

7th Pay Commission: ಕರ್ತವ್ಯ ನಿರ್ವಹಣೆಯ ವೇಳೆ ನೌಕರನ ಸಾವಿಗೆ ಸಂಬಂಧಿಸಿದ ನಿಯಮದಲ್ಲಿ ಕೇಂದ್ರ ಸರ್ಕಾರವು (Union Government) ಪ್ರಮುಖ ಬದಲಾವಣೆಯನ್ನು ಮಾಡಿದೆ. ಮೃತ ನೌಕರನ ಸಂಬಂಧಿಕರಿಗೆ ಈ ಬದಲಾವಣೆ ಅನ್ವಯಿಸಲಿದೆ. 

Written by - Nitin Tabib | Last Updated : Oct 2, 2021, 08:18 PM IST
  • ಉದ್ಯೋಗದಲ್ಲಿ ಮೃತಪಟ್ಟ ನೌಕರನ ಪರಿಹಾರಕ್ಕೂ ಬಂತು ನಾಮಿನಿ ರೂಲ್.
  • CCS(Pension) Rule 1972 ನಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ.
  • ಉದ್ಯೋಗಿ ನಾಮಿನಿ ಘೋಶಿಸದಿದ್ದಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೆ ಸಮನಾಗಿ ಹಂಚಿಕೆ
7th Pay Commission:ನಾಮಿನಿಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದ ಸರ್ಕಾರ  title=
7th Pay Commission (File Photo)

7th Pay Commission: ಕರ್ತವ್ಯ ನಿರ್ವಹಣೆಯ ವೇಳೆ ನೌಕರನ ಸಾವಿಗೆ ಸಂಬಂಧಿಸಿದ ನಿಯಮದಲ್ಲಿ ಕೇಂದ್ರ ಸರ್ಕಾರವು (Union Government) ಪ್ರಮುಖ ಬದಲಾವಣೆಯನ್ನು ಮಾಡಿದೆ. ಮೃತ ನೌಕರನ ಸಂಬಂಧಿಕರಿಗೆ ಈ ಬದಲಾವಣೆ ಅನ್ವಯಿಸಲಿದೆ. ಹೊಸ ನಿಯಮಗಳ ಪ್ರಕಾರ, ಕರ್ತವ್ಯದಲ್ಲಿ ಒಂದು ವೇಳೆ ಉದ್ಯೋಗಿ ಮರಣ ಹೊಂದಿದ ನಂತರ ಉದ್ಯೋಗಿ (Central Government Employee) ಪಡೆದ ಪರಿಹಾರವನ್ನು ನಾಮಿನಿಯಾಗಿ ಮಾಡಿದ ಕುಟುಂಬದ ಸದಸ್ಯರಿಗೆ ಪಾವತಿಸಲಾಗುತ್ತದೆ. ಇದರರ್ಥ ನಾಮಿನಿಯು  ಪರಿಹಾರಕ್ಕೆ (On Duty Death Compensation) ಅರ್ಹನಾಗಿರುತ್ತಾನೆ. ಇದುವರೆಗೆ ಇಂತಹ ಪ್ರಕರಣಗಳಲ್ಲಿ  ನಾಮಿನೇಟ್ (Nominee) ಮಾಡುವ ಯಾವುದೇ ಪ್ರಾವಧಾನ ಇರಲಿಲ್ಲ.

ನಾಮಿನಿ ಮಾಡಿದರೆ ಏನಾಗಲಿದೆ?
ಇಂತಹ ಸಂದರ್ಭದಲ್ಲಿ ಒಂದು ವೇಳೆ ಕೇಂದ್ರ ಸರ್ಕಾರಿ ನೌಕರ ಯಾರನ್ನೂ ಕೂಡ ನಾಮನಿರ್ದೇಶನ ಮಾಡಿರದಿದ್ದರೆ, ಆ ಮೊತ್ತವನ್ನು ಕುಟುಂಬದ ಎಲ್ಲಾ ಸದಸ್ಯರಿಗೆ ಸಮನಾಗಿ ಹಂಚಲಾಗುವುದು. ಅಂದರೆ, ಯಾವುದೇ ಒಬ್ಬ ಸದಸ್ಯ ಈ ಒಟ್ಟು ಪರಿಹಾರದ ಮೊತ್ತಕ್ಕೆ ಅರ್ಹನಾಗಿರುವುದಿಲ್ಲ. ಸಾಮಾನ್ಯವಾಗಿ ಸರ್ಕಾರಿ ನೌಕರರು ಪಿಂಚಣಿ, ಪಿಎಫ್ ಅಥವಾ ಗ್ರಾಚ್ಯುಟಿ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಆದರೆ ಕರ್ತವ್ಯದಲ್ಲಿ ಸಂಭವಿಸಿದ ಸಾವಿನ ಸಂದರ್ಭದಲ್ಲಿ ಪರಿಹಾರಕ್ಕಾಗಿ ನಾಮಿನಿ ವ್ಯವಸ್ಥೆ ಇರಲಿಲ್ಲ. ಆದರೆ, ಇದೀಗ ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿರುವ ಸರ್ಕಾರ ಮಾರ್ಗಸೂಚಿಗಳನ್ನು ನೀಡಿದೆ.

ಇದನ್ನೂ ಓದಿ-ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಕತ್ತರಿ: ಪೆಟ್ರೋಲ್, ಡೀಸೆಲ್ ಬಳಿಕ CNG, PNG ಬೆಲೆಯೂ ಏರಿಕೆ..!

ಅಂದರೆ, ಇದೀಗ ಪರಿಹಾರದ ವಿಷಯದಲ್ಲಿಯೂ ಕೂಡ ನೌಕರರು ನಾಮಿನಿಯನ್ನು ಘೋಷಣೆ ಮಾಡಬೇಕು. ಇದರಿಂದ ಒಂದು ವೇಳೆ ಸರ್ಕಾರಿ ನೌಕರ ಆನ್ ಡ್ಯೂಟಿ ಮೃತಪಟ್ಟರೆ ಅವರ ಪರಿಹಾರ ಧನ ಕುಟುಂಬದ ಯಾವುದೇ ಓರ್ವ ಸದಸ್ಯನಿಗೆ ಸಿಗುವುದು ಸುನೀಸ್ಚಿತವಾಗಿದೆ.

ಇದನ್ನೂ ಓದಿ-Xpulse 200 4V Teaser: ಶೀಘ್ರದಲ್ಲಿಯೇ Hero ಬಿಡುಗಡೆ ಮಾಡಲಿದೆ Adventure Touring Motorcycle

ಇದೇ ವೇಳೆ ಕುಟುಂಬದ ಸದಸ್ಯರನ್ನು ಮಾತ್ರ ನಾಮಿನೇಟ್ ಮಾಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಪರಿಹಾರ ಮೊತ್ತಕ್ಕೆ ಯಾವುದೇ ಹೊರಗಿನವರನ್ನು ನಾಮಿನಿಯನ್ನಾಗಿ ಮಾಡಲು ಸಾಧ್ಯವಿಲ್ಲ. ಏಕಕಾಲದಲ್ಲಿ, ಪರಿಹಾರದ ಪಾವತಿಗೆ ಸಂಬಂಧಿಸಿದಂತೆ ನಾಮನಿರ್ದೇಶನವನ್ನು ಸೇರಿಸಲು ಸರ್ಕಾರವು CCS(Pension) Rule 1972 ಗೆ ಲಗತ್ತಿಸಲಾದ ನಮೂನೆಯ ಸ್ವರೂಪವನ್ನು ಕೂಡ ತಿದ್ದುಪಡಿ ಮಾಡಲಾಗಿದೆ. 

ಇದನ್ನೂ ಓದಿ-Ladakh ನಲ್ಲಿ ಅನಾವರಣಗೊಂಡ ವಿಶ್ವದ ಅತಿ ದೊಡ್ಡ ತ್ರಿವರ್ಣ ಧ್ವಜ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News