ಕಾನ್ಪುರ: ಉತ್ತರಪ್ರದೇಶದ ಕಾನ್ಪುರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಎಲೆಕ್ಟ್ರಿಕ್ ಬಸ್ ಪಾದಚಾರಿಗಳ ಮೇಲೆ ಹರಿದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದು, 9ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ.
ಕಾನ್ಪುರದ ಟ್ಯಾಟ್ ಮಿಲ್ ಕ್ರಾಸಿಂಗ್ ಬಳಿ ಈ ದುರ್ಘಟನೆ ನಡೆದಿದೆ. ಈ ಅಪಘಾತದಲ್ಲಿ 3 ಕಾರುಗಳಿಗೆ ಹಾನಿಯಾಗಿದೆ ಎಂದು ಪೂರ್ವ ಕಾನ್ಪುರದ ಡಿಸಿಪಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Good News! Retirement ವಯಸ್ಸಿನಲ್ಲಿ ಹೆಚ್ಚಳ, Pension ಮೊತ್ತದಲ್ಲೂ ಹೆಚ್ಚಳ! ಇಲ್ಲಿದೆ ಸರ್ಕಾರದ ಹೊಸ ಪ್ಲಾನ್
Uttar Pradesh | At least five people killed and several injured in an electric bus accident in Kanpur. The incident took place near Tat Mill cross road: Pramod Kumar, DCP East Kanpur pic.twitter.com/ZzVsKMOYuZ
— ANI UP/Uttarakhand (@ANINewsUP) January 30, 2022
‘ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, 9 ಜನರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ಪ್ರಮೋದ್ ಕುಮಾರ್ ಅವರು ಹೇಳಿದ್ದಾರೆ. ಕಾನ್ಪುರದಲ್ಲಿ ನಡೆದ ಅಪಘಾತದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕಾನ್ಪುರ ರಸ್ತೆ ಅಪಘಾತದ ದುರಂತದ ಬಗ್ಗೆ ತಿಳಿದು ತುಂಬಾ ನೋವಾಯಿತು. ಮೃತರ ಸಂಬಂಧಿಕರಿಗೆ ನನ್ನ ಮನದಾಳದ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಅಂತಾ ಹೇಳಿದ್ದಾರೆ.
ಘಟನೆಯ ನಂತರ ಕ್ರೇನ್ ಸಹಾಯದಿಂದ ಪೊಲೀಸರು ಹಾನಿಗೊಳಗಾದ ವಾಹನಗಳನ್ನು ಹೊರತೆಗೆದರು. ಘಂಟಾಘರ್‌ನಿಂದ ತತ್ಮಿಲ್‌ಗೆ ಹೋಗುತ್ತಿದ್ದ ಎಲೆಕ್ಟ್ರಿಕ್ ಬಸ್ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಲ ಪಾದಚಾರಿಗಳಿಗೂ ಬಸ್ ಡಿಕ್ಕಿ ಹೊಡೆದಿದೆ. ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಬಸ್ ನಿಲ್ಲಿಸಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಮೂರು ಕಾರುಗಳ ಜೊತೆಗೆ ಹಲವಾರು ಬೈಕ್‌ಗಳು ಜಖಂಗೊಂಡಿವೆ.
ತೆಲಂಗಾಣದಲ್ಲಿ ಅಪಘಾತಕ್ಕೆ ನಾಲ್ವರು ಬಲಿ
Telangana | Four women died after a speeding car driven by a minor hit them. The car ran over people sitting on the footpath. A case has been registered under section 304 of IPC on the minors traveling in the car: V Satyanarayana, Karimnagar CP (30.01) pic.twitter.com/7bFUjw7tvV
— ANI (@ANI) January 31, 2022
ತೆಲಂಗಾಣದಲ್ಲಿ ನಡೆದ ರಸ್ತೆ ಅಪಘಾತಕ್ಕೆ ನಾಲ್ವರು ಬಲಿಯಾಗಿದ್ದಾರೆ. ಅಪ್ರಾಪ್ತನೊಬ್ಬ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಫುಟ್‌ಪಾತ್‌ನಲ್ಲಿ ಕುಳಿತಿದ್ದವರ ಮೇಲೆ ಕಾರು ಹರಿದಿದೆ. ಕಾರು ಚಲಾಯಿಸಿ ಅಪಘಾತ ಮಾಡಿರುವ ಅಪ್ರಾಪ್ತನ ವಿರುದ್ಧ ಐಪಿಸಿ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಚುನಾವಣಾ ರ್ಯಾಲಿ ಮೇಲಿನ ನಿಷೇಧದ ವಿಚಾರ, ನಾಳೆ ಚುನಾವಣಾ ಆಯೋಗ ಪರಿಶೀಲನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.