ಬ್ಯಾಂಕ್ ಗ್ರಾಹಕರ ಗಮನಕ್ಕೆ : 'ATM' ಗೆ ಸಂಬಂಧಿಸಿದಂತೆ ಬದಲಾಗಲಿವೆ ಈ 5 ನಿಯಮಗಳು!

ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಉಚಿತವಾಗಿ ಬಳಸಬಹದು (ಹಣಕಾಸು ಮತ್ತು ಹಣಕಾಸು ಯೇತರ ವಹಿವಾಟುಗಳನ್ನು ಒಳಗೊಂಡಂತೆ) ಅರ್ಹರಾಗಿರುತ್ತಾರೆ.

Last Updated : Jun 12, 2021, 11:36 AM IST
  • ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ
  • ಎಟಿಎಂ ಕಾರ್ಡ್ ಗೆ ಸಂಬಂಧಿಸಿದಂತೆ 5 ಮಹತ್ವದ ಬದಲಾವಣೆಗಳನ್ನು ಮಾಡಿದೆ
  • ಜ. 1, 2022 ರಿಂದ ಜಾರಿಗೆ ಬರುವಂತೆ ಪ್ರತಿ ವಹಿವಾಟಿಗೆ 20 ರೂ. ಬದಲು 21 ರೂ. ಪಾವತಿ
ಬ್ಯಾಂಕ್ ಗ್ರಾಹಕರ ಗಮನಕ್ಕೆ : 'ATM' ಗೆ ಸಂಬಂಧಿಸಿದಂತೆ ಬದಲಾಗಲಿವೆ ಈ 5 ನಿಯಮಗಳು! title=

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ಎಟಿಎಂ ಕಾರ್ಡ್ ಗೆ ಸಂಬಂಧಿಸಿದಂತೆ 5 ಮಹತ್ವದ ಬದಲಾವಣೆಗಳನ್ನು ಮಾಡಿದೆ.

ATM ಕಾರ್ಡ್ ಗೆ ಸಂಬಂಧಿಸಿದ 5 ನಿಯಮ ಬದಲಾವಣೆಗಳು ಇಲ್ಲಿವೆ :

1. ಮುಂದಿನ ವರ್ಷದಿಂದ ಉಚಿತ ಮಾಸಿಕ ಅನುಮತಿಮಿತಿಯನ್ನು ಮೀರಿ ನಗದು ಮತ್ತು ನಗದು ರಹಿತ ಎಟಿಎಂ(ATM) ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ಆರ್ ಬಿಐ ಈಗ ಬ್ಯಾಂಕುಗಳಿಗೆ ಅನುಮತಿ ನೀಡಿದೆ. 'ಹೆಚ್ಚಿನ ವಿನಿಮಯ ಶುಲ್ಕಕ್ಕೆ ಬ್ಯಾಂಕುಗಳಿಗೆ ಪರಿಹಾರ ನೀಡಲು ಮತ್ತು ವೆಚ್ಚಗಳಲ್ಲಿ ಸಾಮಾನ್ಯ ಹೆಚ್ಚಳವನ್ನು ನೀಡಿದರೆ, ಪ್ರತಿ ವಹಿವಾಟಿಗೆ ಗ್ರಾಹಕರ ಶುಲ್ಕವನ್ನು 21 ರೂ.ಗಳಿಗೆ ಹೆಚ್ಚಿಸಲು ಅವರಿಗೆ ಅನುಮತಿ ನೀಡಲಾಗಿದೆ. ಈ ಹೆಚ್ಚಳವು ಜನವರಿ 1, 2022 ರಿಂದ ಜಾರಿಗೆ ಯಾಗಲಿದೆ' ಎಂದು ಆರ್ ಬಿಐ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಇದನ್ನೂ ಓದಿ : SBI- ಕರೋನಾ ಚಿಕಿತ್ಸೆಗಾಗಿ ಎಸ್‌ಬಿಐ ಗ್ರಾಹಕರಿಗೆ ಎದುರಾಗಲ್ಲ ಹಣದ ಸಮಸ್ಯೆ, ಬ್ಯಾಂಕ್ ನೀಡುತ್ತಿದೆ ಅಗ್ಗದ ಸಾಲ ಸೌಲಭ್ಯ

2. ಬ್ಯಾಂಕ್ ಗ್ರಾಹಕರು(Bank Customers) ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ಮೀರಿದರೆ, ಜನವರಿ 1, 2022 ರಿಂದ ಜಾರಿಗೆ ಬರುವಂತೆ ಪ್ರತಿ ವಹಿವಾಟಿಗೆ 20 ರೂ. ಬದಲು 21 ರೂ. ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : Corona Vaccine ಹಾಕಿಸಿಕೊಂಡ ಬಳಿಕ ದೇಹದಲ್ಲಿ ಕಾಂತೀಯ ಶಕ್ತಿಯ ಸಂಚಾರ!

3. ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ಪ್ರತಿ ತಿಂಗಳು ಐದು ಉಚಿತ(Five Free Transactions)ವಾಗಿ ಬಳಸಬಹದು (ಹಣಕಾಸು ಮತ್ತು ಹಣಕಾಸು ಯೇತರ ವಹಿವಾಟುಗಳನ್ನು ಒಳಗೊಂಡಂತೆ) ಅರ್ಹರಾಗಿರುತ್ತಾರೆ.

ಇದನ್ನೂ ಓದಿ : ನಿಮ್ಮಲ್ಲೂ ಈ ನಾಣ್ಯಗಳಿದ್ದರೆ ಕುಳಿತಲ್ಲೇ ಗಳಿಸಬಹುದು 5 ಲಕ್ಷ ರೂಪಾಯಿ

4. ಗ್ರಾಹಕರು ಇತರ ಬ್ಯಾಂಕ್ ಎಟಿಎಂಗಳಿಂದ ಉಚಿತ ವಹಿವಾಟು (ಹಣಕಾಸು ಮತ್ತು ಹಣಕಾಸು ಯೇತರ ವಹಿವಾಟುಗಳನ್ನು ಒಳಗೊಂಡಂತೆ) ಅಂದರೆ ಮೆಟ್ರೋ ನಗರಗಳಲ್ಲಿ(Metro Centres) ಮೂರು ವಹಿವಾಟುಗಳು ಮತ್ತು ಮೆಟ್ರೋ ಯೇತರ ನಗರಗಳಲ್ಲಿ ಐದು ವಹಿವಾಟುಗಳಿಗೆ ಅರ್ಹರಾಗಿರುತ್ತಾರೆ. ಉಚಿತ ವಹಿವಾಟುಗಳನ್ನು ಮೀರಿ, ಗ್ರಾಹಕರ ಶುಲ್ಕಗಳ ಮೇಲಿನ ಮಿತಿ/ಕ್ಯಾಪ್ ಪ್ರತಿ ವಹಿವಾಟಿಗೆ 20 ರೂ.

ಇದನ್ನೂ ಓದಿ : Driving License : ಇನ್ಮುಂದೆ 'RTO'ದಲ್ಲಿ ಪರೀಕ್ಷೆ ನೀಡದೆ 'ಡ್ರೈವಿಂಗ್‌ ಲೈಸನ್ಸ್‌' ಪಡೆಯಬಹುದು : ಹೇಗೆ ಗೊತ್ತಾ?

5. ಆಗಸ್ಟ್ 1, 2021 ರಿಂದ ಜಾರಿಗೆ ಬರುವಂತೆ, ಹಣಕಾಸು ವ್ಯವಹಾರ(Financial Transactions)ಗಳಿಗೆ ಪ್ರತಿ ವಹಿವಾಟಿಗೆ ವಿನಿಮಯ ಶುಲ್ಕವನ್ನು ರೂ.15 ರಿಂದ ರೂ.17 ಕ್ಕೆ ಮತ್ತು ಎಲ್ಲಾ ಕೇಂದ್ರಗಳಲ್ಲಿ ಹಣಕಾಸು ಯೇತರ ವಹಿವಾಟುಗಳಿಗೆ ರೂ.5 ರಿಂದ ರೂ.6 ಕ್ಕೆ ಹೆಚ್ಚಿಸಲು ಬ್ಯಾಂಕುಗಳಿಗೆ ಅನುಮತಿ ನೀಡಲಾಗಿದೆ ಎಂದು ಆರ್ ಬಿಐ ಮತ್ತೊಂದು ಘೋಷಣೆಯಲ್ಲಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News