ಬಟ್ಟೆ ಶೋರೂಂಗೆ ಬೆಂಕಿ; ಐವರು ಸಾವು

ಮೇ 9 ರ ಮುಂಜಾನೆ ರಾಜಯೋಗ್ ಸಾರೀ ಡಿಪೋದಲ್ಲಿ ಬೆಂಕಿ ಅವಘಡ ಸಂಭವ್ಸಿ ಕೆಲವೇ ಕ್ಷಣಗಳಲ್ಲಿ ಸುತ್ತಲಿನ ಪ್ರದೇಶಕ್ಕೂ ಆವರಿಸಿತು. 

Last Updated : May 9, 2019, 11:06 AM IST
ಬಟ್ಟೆ ಶೋರೂಂಗೆ ಬೆಂಕಿ; ಐವರು ಸಾವು title=

ಪುಣೆ: ಮಹಾರಾಷ್ಟ್ರದ ಪುಣೆಯ ಉರುಳಿ ದೇವಚಿ ಗ್ರಾಮದಲ್ಲಿನ ಬಟ್ಟೆ ಶೋರೂಂ ಬೆಂಕಿ ಅನಾಹುತ ಸಂಭವಿಸಿದ ಪರಿಣಾಮ ಐವರು ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಮುಂಜಾನೆ ಸಂಭವಿಸಿದೆ. 

ಮೇ 9 ರ ಮುಂಜಾನೆ ರಾಜಯೋಗ್ ಸಾರೀ ಡಿಪೋದಲ್ಲಿ ಬೆಂಕಿ ಅವಘಡ ಸಂಭವ್ಸಿ ಕೆಲವೇ ಕ್ಷಣಗಳಲ್ಲಿ ಸುತ್ತಲಿನ ಪ್ರದೇಶಕ್ಕೂ ಆವರಿಸಿದೆ. ಕೂಡಲೇ ಸ್ಥಳಕಾಗಮಿಸಿದ ಅಗ್ನಿಶಾಮಕ ದಳದವರು, ಸತತ ಎರಡು ಗಂಟೆಗಳ ಪರಿಶ್ರಮದ ಬಳಿಕ ಬೆಂಕಿ ನಿಯಂತ್ರಣಕ್ಕೆ ತರಲಾಯಿತು. 

ಈ ದುರ್ಘಟನೆಯಲ್ಲಿ ಮೃತಪಟ್ಟ ಐವರೂ ಸೀರೆ ಶೋರೂಂ ಒಳಗೆ ನಿದ್ರಿಸುತ್ತಿದ್ದರು ಎನ್ನಲಾಗಿದೆ. ಬೆಂಕಿಯಿಂದಾಗಿ ಸುಟ್ಟಗಾಯಗಳು ಮತ್ತು ಹೊಗೆಯಿಂದ ಉಸಿರುಗಟ್ಟಿದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಇತರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಗಢ ಸಂಭವಿಸಿರಬಹುದು ಎನ್ನಲಾಗಿದೆ. 
 

Trending News