ನವದೆಹಲಿ: ಸುಪ್ರೀಂಕೋರ್ಟಿನ 46 ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ರಂಜನ್ ಗೊಗೊಯಿ ಇಂದು ಅಧಿಕಾರ ವಹಿಸಿಕೊಳ್ಳದ್ದಾರೆ. ಓರ್ವ ಮುಖ್ಯಮಂತ್ರಿ ಪುತ್ರ ದೇಶದ ಮುಖ್ಯ ನ್ಯಾಯಮೂರ್ತಿಯಾಗುತ್ತಿರುವುದು ಬಹುಶಃ ದೇಶದಲ್ಲಿ ಇದೇ ಮೊದಲು. ಅವರ ತಂದೆ ಕೇಶಬ್ ಚಂದ್ರ ಗೊಗೊಯ್ ಅವರು ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು. ರಂಜನ್ ಗೊಗೊಯ್ ಮತ್ತು ಅವರ ಹಿರಿಯ ಸಹೋದರ ಶಾಲೆಗೆ ಸೇರುವಾಗ ಅವರಲ್ಲಿ ಒಬ್ಬರು ಮಾತ್ರ ಗೋಲ್ಪದಾ ಮಿಲಿಟರಿ ಶಾಲೆಯಲ್ಲಿ ಸೇರಬಹುದೆಂದು ಅವರ ತಂದೆ ಹೇಳಿದರು. ಇದಕ್ಕಾಗಿ, ಈ ಇಬ್ಬರಲ್ಲಿ ಯಾರು ಮಿಲಿಟರಿ ಶಾಲೆಗೆ ಹೋಗಬೇಕೆಂಬುದನ್ನು ನಿರ್ಧರಿಸಲು ನಾಣ್ಯವನ್ನು(ಟಾಸ್) ಎಸೆಯಲಾಯಿತು. ಟಾಸ್ ಅಂಜನ್ ಪರವಾಗಿ ಬಿದ್ದಿದ್ದರಿಂದ ರಂಜನ್ ಗೊಗೊಯ್ ಅವರ ಹಿರಿಯ ಸಹೋದರ ಆಂಜನ್ ಆರ್ಮಿ ಶಾಲೆಗೆ ಹೋದರು ಮತ್ತು ಅವರು ಏರ್ ಮಾರ್ಷಲ್ ಆದರು.
ದಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ರಂಜನ್ ಗೊಗೊಯ್ ಅವರು ಡಿಬ್ರುಗಢ್ನ ಡಾನ್ ಬಾಸ್ಕೊ ಶಾಲೆಗೆ ಸೇರಿಕೊಂಡರು ಮತ್ತು ನಂತರ ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ನಿಂದ ಹಿಸ್ಟರಿ ಪದವಿ ಪಡೆದರು. ಅದರ ನಂತರ ತಂದೆಯ ಮಾತನ್ನು ಗೌರವಿಸಿ, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆ ತೆಗೆದುಕೊಂಡು ಸಫಲರಾದರು. ಆದರೆ ಅವರು ಕಾನೂನು ಪದವಿ ಪಡೆದು ತಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುವುದಾಗಿ ತನ್ನ ತಂದೆಗೆ ಪ್ರಾಮಾಣಿಕವಾಗಿ ತಿಳಿಸಿದರು.
ನ್ಯಾಯಮೂರ್ತಿ ಗೊಗೊಯ್ ಅವರು 1954 ರ ನವೆಂಬರ್ 18 ರಂದು ಅಸ್ಸಾಂನ ದಿಬ್ರುಗಢ್ನಲ್ಲಿ ಜನಿಸಿದರು. ಅವರ ಆರಂಭಿಕ ಶಿಕ್ಷಣವು ಡಾನ್ ವ್ಯಾಸ್ಕೊ ಸ್ಕೂಲ್ನಲ್ಲಿ ನಡೆಯಿತು. ಇಂಟರ್ಮೀಡಿಯೇಟ್ ಅಧ್ಯಯನ ಗುವಾಹಾಟಿಯ ಕೇಟ್ ಕಾಲೇಜಿನಲ್ಲಾದರೆ. ದೆಹಲಿ ವಿಶ್ವವಿದ್ಯಾಲಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಹಿಸ್ಟರಿ ಪೂರ್ಣಗೊಂಡಿತು. ಇದರ ನಂತರ, ಡಿಯು ನಲ್ಲಿ ಕಾನೂನಿನ ಪದವಿ ಪಡೆದರು. 1978 ರಲ್ಲಿ, ಗೌಹಾಟಿಯಲ್ಲಿ ವಕೀಲರ ವೃತ್ತಿಯನ್ನು ಆರಂಭಿಸಿದರು. ಫೆಬ್ರವರಿ 28, 2001 ರಂದು ಗುವಾಹಾಟಿ ಹೈಕೋರ್ಟ್ನ ನ್ಯಾಯಾಧೀಶರಾದರು. ತರುವಾಯ, ಸೆಪ್ಟೆಂಬರ್ 9, 2010 ರಂದು ಅವರನ್ನು ಪಂಜಾಬ್ ಮತ್ತು ಹರಿಯಾಣ ಹೋಯ್ಕಾರ್ಟ್ಗೆ ವರ್ಗಾಯಿಸಲಾಯಿತು. ಫೆಬ್ರವರಿ 12, 2011 ರಂದು ಅವರು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡರು. ನಂತರ ಏಪ್ರಿಲ್ 23, 2012 ರಂದು ಗೊಗೊಯ್ ಅವರು ಸುಪ್ರೀಂ ಕೋರ್ಟ್ನ ನ್ಯಾಯಾಧೀಶರಾಗಿ ನೇಮಕರಾದರು. ಇದೀಗ ಇಂದು ದೇಶದ 46 ನೇ ಮುಖ್ಯ ನ್ಯಾಯಾಮೂರ್ತಿಯಾಗಿ ರಂಜನ ಗೊಗೊಯ್ ಅಧಿಕಾರ ಸ್ವೀಕರಿಸಲಿದ್ದಾರೆ. ಜಸ್ಟಿಸ್ ರಂಜನ್ ಗೊಗೊಯ್ ಈ ಸ್ಥಾನ ಅಲಂಕರಿಸುತ್ತಿರುವ ಈಶಾನ್ಯ ಭಾರತದ ಮೊದಲ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.
ಸವಾಲುಗಳು:
ಮುಖ್ಯ ನ್ಯಾಯಮೂರ್ತಿಯಾದ ನಂತರ, ಅಯೋಧ್ಯೆಯ ಪ್ರಕರಣವನ್ನು ಬಗೆಹರಿಸುವುದು ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಮುಂದಿರುವ ದೊಡ್ಡ ಸವಾಲಾಗಿದೆ. ಇದಲ್ಲದೆ, ಬಾಕಿ ಉಳಿದಿರುವ ಪ್ರಕರಣಗಳನ್ನು ಬಗೆಹರಿಸುವುದು ಜಸ್ಟೀಸ್ ಗೊಗೊಯ್ಗೆ ದೊಡ್ಡ ಸವಾಲಾಗಿದೆ.
ದೇಶದ ಇತಿಹಾಸಲ್ಲೇ ಮೊದಲಬಾರಿಗೆ ಸುಪ್ರೀಂ ಕೋರ್ಟ್ನ ನಾಲ್ವರು ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿದ್ದು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಅಸಮಧಾನ ಹೊರಹಾಕಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ (ಈಗ ನಿವೃತ್ತರಾಗಿದ್ದಾರೆ) ಅವರ ಕೆಲಸವನ್ನು ಪ್ರಶ್ನಿಸಿ ರಾಷ್ಟ್ರದ ಜನರೊಂದಿಗೆ ಮಾತನಾಡಿದ್ದರು. ನ್ಯಾಯಾಲಯದ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಾಧೀಶ ಜೆ.ಚೆಲಮೇಶ್ವರ್, ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರಂಜನ್ ಗೊಗೊಯ್ ಮತ್ತು ಮದನ್ ಲೋಕೂರ್ ಅವರು ನ್ಯಾಯಾಂಗ ವ್ಯವಸ್ಥೆಯಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳ ಕುರಿತು ಸಿಜೆಐಗೆ ಸಹಿ ಪತ್ರವೊಂದನ್ನು ನೀಡಿದ್ದೆವು. ಈ ನ್ಯಾಯಾಧೀಶರಲ್ಲಿ ಜಸ್ಟಿಸ್ ಗೊಗೊಯಿ ಕೂಡಾ ಸೇರಿದ್ದರು.