ಯುಎಪಿಎ ಅಡಿಯಲ್ಲಿ 4,690 ಬಂಧಿತರು, 149 ದೋಷಿಗಳು: ರಾಜ್ಯಸಭೆಗೆ ಸರ್ಕಾರದ ಮಾಹಿತಿ

ಕಳೆದ ಮೂರು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 4,690 ಜನರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಅಡಿಯಲ್ಲಿ ಬಂಧಿಸಲಾಗಿದೆ.

Edited by - Zee Kannada News Desk | Last Updated : Dec 22, 2021, 05:55 PM IST
  • 4,690 ಜನರನ್ನು ಯುಎಪಿಎ ಅಡಿಯಲ್ಲಿ ಬಂಧನ
  • ಅವರಲ್ಲಿ 149 ಜನರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ
ಯುಎಪಿಎ ಅಡಿಯಲ್ಲಿ 4,690 ಬಂಧಿತರು, 149 ದೋಷಿಗಳು: ರಾಜ್ಯಸಭೆಗೆ ಸರ್ಕಾರದ ಮಾಹಿತಿ  title=
ಬಂಧನ

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ 4,690 ಜನರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಅಡಿಯಲ್ಲಿ ಬಂಧಿಸಲಾಗಿದೆ. ಅವರಲ್ಲಿ 149 ಜನರನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ ಎಂದು ಸರ್ಕಾರ ರಾಜ್ಯಸಭೆಗೆ ಅಂಕಿಅಂಶಗಳನ್ನು ತಿಳಿಸಿವೆ.

2018ರಲ್ಲಿ ಯುಎಪಿಎ ಅಡಿಯಲ್ಲಿ 1,421, 2019ರಲ್ಲಿ 1,948 ಮತ್ತು 2020ರಲ್ಲಿ 1,321 ಜನರನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 

ಇದನ್ನೂ ಓದಿ-  ಕುಡಿದು ತೂರಾಡುತ್ತಾ ಬಾಳೆ ಗಿಡಕ್ಕೆ ಪಂಚ್, ಕುಡುಕನ ಕಿತಾಪತಿಯ ವಿಡಿಯೋ ವೈರಲ್.!

ಶಿಕ್ಷೆಯು ವಿಸ್ತಾರವಾದ ನ್ಯಾಯಾಂಗ ಪ್ರಕ್ರಿಯೆಯ ಫಲಿತಾಂಶವಾಗಿದೆ ಮತ್ತು ವಿಚಾರಣೆಯ ಅವಧಿ, ಸಾಕ್ಷ್ಯಗಳ ಮೌಲ್ಯಮಾಪನ, ಸಾಕ್ಷಿಗಳ ಪರೀಕ್ಷೆಯಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

"ಕಾನೂನಿನ ದುರುಪಯೋಗವನ್ನು ತಡೆಗಟ್ಟಲು UAPA ನಲ್ಲಿಯೇ ಅಂತರ್ಗತ ಸುರಕ್ಷತೆಗಳು ಸೇರಿದಂತೆ ಸಾಕಷ್ಟು ಸಾಂವಿಧಾನಿಕ, ಸಾಂಸ್ಥಿಕ ಮತ್ತು ಶಾಸನಬದ್ಧ ಸುರಕ್ಷತೆಗಳಿವೆ" ಎಂದು ಅವರು ಹೇಳಿದರು.

ಇದನ್ನೂ ಓದಿ-  ನಾಯಿಗೆ 'ಸೋನು' ಎಂದು ಹೆಸರಿಟ್ಟ ಮಹಿಳೆ.. ಕೋಪಗೊಂಡು ಬೆಂಕಿ ಹಚ್ಚಿದ ಪಕ್ಕದ ಮನೆಯವರು.!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News