ನವದೆಹಲಿ: ದೆಹಲಿಯ ಕಾಶ್ಮೀರ್ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಸಿಐಎಸ್ಎಫ್ 4,64,000 ರೂ. ಮೌಲ್ಯದ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶ ಪಡಿಸಿಕೊಂಡಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ 5:30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾಶ್ಮೀರ್ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಗಸ್ತು ತಿರುಗುತ್ತಿದ್ದಾಗ, ಸಿಐಎಸ್ಎಫ್ ಸಬ್-ಇನ್ಸ್‌ಪೆಕ್ಟರ್ ಬೈರೇಂದರ್ ಕುಮಾರ್ ಅವರು ಗೇಟ್ ನಂ 8ರ ಬಳಿ ಬಿದ್ದಿರುವ ಚೀಲವನ್ನು ಗಮನಿಸಿದ್ದಾರೆ. ಆಗ ಇದರಲ್ಲಿ ನಕಲಿ ನೋಟುಗಳು ಇರುವುದು ಕಂಡುಬಂದಿದೆ.
ಇದಾದ ನಂತರ ಸಿಐಎಸ್ಎಫ್ ನಿಯಂತ್ರಣ ಕೊಠಡಿಯ ಸ್ಟೇಷನ್ ಶಿಫ್ಟ್ ಉಸ್ತುವಾರಿ ಸಬ್ ಇನ್ಸ್‌ಪೆಕ್ಟರ್ ಗೆ ಚೀಲದ ಬಗ್ಗೆ ಮಾಹಿತಿ ರವಾನಿಸಲಾಗಿದೆ. ತಕ್ಷಣ, ಈ ಪ್ರದೇಶವನ್ನು ಸುತ್ತುವರೆದು ಮತ್ತು ಬಾಂಬ್ ವಿಲೇವಾರಿ ದಳ ಮತ್ತು ಸಿಐಎಸ್ಎಫ್ ನ ಡಾಗ್ ಸ್ಕ್ವಾಡ್ ತಂಡಗಳನ್ನು ಎಚ್ಚರಿಸಲಾಯಿತು. ಚೀಲದ ಒಳಗಿನಿಂದ 4,64,000 ರೂ. ಇರುವ ಬಗ್ಗೆ ಸಿಐಎಸ್ಎಫ್ ಮತ್ತು ಡಿಎಂಆರ್ಪಿಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ನಂತರ, ಮುಂದಿನ ಕ್ರಮಕ್ಕಾಗಿ ನಕಲಿ ಕರೆನ್ಸಿಯೊಂದಿಗೆ ಚೀಲವನ್ನು ದೆಹಲಿ ಮೆಟ್ರೋ ರೈಲು ಪೊಲೀಸರಿಗೆ ಹಸ್ತಾಂತರಿಸಲಾಯಿತು.