ನವದೆಹಲಿ: ಶುಕ್ರವಾರದಂದು ಬೆಳಿಗ್ಗೆ ನಾಲ್ಕು ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.
ನ್ಯಾಯಮೂರ್ತಿ ಹೇಮಂತ್ ಗುಪ್ತಾ, ಅಜಯ್ ರಸ್ತೋಗಿ, ಎಮ್.ಆರ್.ಶಾ ಮತ್ತು ಆರ್. ಸುಭಾಷ್ ರೆಡ್ಡಿ ಅವರು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಸಮ್ಮುಖದಲ್ಲಿ ಸುಮಾರು 10:30 ಕ್ಕೆ ಪ್ರಮಾಣವಚನ ಸ್ವೀಕರಿಸಿದರು.ಆ ಮೂಲಕ ಈಗ ಸುಪ್ರಿಂಕೋರ್ಟ್ ನ್ಯಾಯಾಧೀಶರ ಸಂಖ್ಯೆ 28ಕ್ಕೆ ಏರಿದೆ.
ಮಂಗಳವಾರದಂದು ಸರಕಾರಕ್ಕೆ ನಾಲ್ವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೆಸರನ್ನು ಶಿಪಾರಸ್ಸು ಮಾಡಲಾಗಿತ್ತು. ಈಗ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಿದ ಕೇವಲ 48 ಗಂಟೆಯೊಳಗೆ ಅಂಗಿಕರಿಸಲಾಗಿದೆ.
ಈಗ ಸುಪ್ರಿಂಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಹೊಂದಿದವರಲ್ಲಿ ಜಸ್ಟಿಸ್ ಗುಪ್ತಾ ಅವರು ಮಧ್ಯಪ್ರದೇಶ ಹೈಕೋರ್ಟ್ನ, ನ್ಯಾಯಮೂರ್ತಿ ರಾಸ್ತೋಗಿ ತ್ರಿಪುರಾ ಹೈಕೋರ್ಟ್, ನ್ಯಾಯಮೂರ್ತಿ ಷಾ ಪಾಟ್ನಾ ಹೈಕೋರ್ಟ್ನ, ಮತ್ತು ಜಸ್ಟಿಸ್ ರೆಡ್ಡಿ ಗುಜರಾತ್ ಹೈಕೋರ್ಟ್ ನ ಮುಖ್ಯನ್ಯಾಯಾಧೀಶರುಗಳಾಗಿದ್ದಾರೆ.
ಈ ವರ್ಷ, ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರು ಸುಪ್ರಿಂಕೋರ್ಟ್ ನಿಂದ ನಿವೃತ್ತಿಯಾಗಲಿದ್ದಾರೆ ಮತ್ತು ನ್ಯಾಯಮೂರ್ತಿ ಎ. ಕೆ. ಸಿಕ್ರಿ ಮಾರ್ಚ್ 2019 ರಲ್ಲಿ ಅಧಿಕಾರವಧಿ ಮುಗಿಯಲಿದೆ.