ಕರ್ನಾಟಕ ಫಲಿತಾಂಶ ಕೊಹ್ಲಿ ನೇತೃತ್ವದಲ್ಲಿ 4-1 ಅಂತರದ ಟೆಸ್ಟ್ ಸರಣಿ ಗೆದ್ದಂತೆ ಇದೆ- ಚಿದಂಬರಂ

ಕರ್ನಾಟಕದಲ್ಲಿನ ಮೂರು ಲೋಕಸಭಾ ಮತ್ತು 2 ವಿಧಾನಸಭಾ ಕ್ಷೇತ್ರಗಳಿಗಾಗಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಫಲಿತಾಂಶ ವಿರಾಟ್ ಕೊಹ್ಲಿ ನೇತೃತ್ವದಲ್ಲಿ 4-1 ರ ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ಹಾಗೆ ಇದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Last Updated : Nov 6, 2018, 03:15 PM IST
ಕರ್ನಾಟಕ ಫಲಿತಾಂಶ ಕೊಹ್ಲಿ ನೇತೃತ್ವದಲ್ಲಿ 4-1 ಅಂತರದ ಟೆಸ್ಟ್ ಸರಣಿ ಗೆದ್ದಂತೆ ಇದೆ- ಚಿದಂಬರಂ title=

ನವದೆಹಲಿ: ಕರ್ನಾಟಕದಲ್ಲಿನ ಮೂರು ಲೋಕಸಭಾ ಮತ್ತು 2 ವಿಧಾನಸಭಾ ಕ್ಷೇತ್ರಗಳಿಗಾಗಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿರುವ ಹಿನ್ನಲೆಯಲ್ಲಿ ಟ್ವೀಟ್ ಮಾಡಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಫಲಿತಾಂಶ ವಿರಾಟ್ ಕೊಹ್ಲಿ ನೇತೃತ್ವದಲ್ಲಿ 4-1 ರ ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದ ಹಾಗೆ ಇದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಚಿದಂಬರಂ ಟ್ವೀಟ್ ಮೂಲಕ ಪ್ರತಿಕ್ರಿಯಿಸುತ್ತಾ " ಕರ್ನಾಟಕದಲ್ಲಿನ ಫಲಿತಾಂಶ ವಿರಾಟ್ ಕೊಹ್ಲಿ ನೇತೃತ್ವದಲ್ಲಿ  ಟೆಸ್ಟ್ ಸರಣಿಯನ್ನು 4-1 ರ ಅಂತರದಲ್ಲಿ ಗೆದ್ದ ಹಾಗಿದೆ. ಸಮ್ಮಿಶ್ರ ಸರ್ಕಾರ ಕೊನೆಗೂ ತನ್ನ ನಿರೀಕ್ಷೆಯನ್ನು ನೆರವೇರಿಸಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಗೆ ರಾಜ್ಯ ಫಲಿತಾಂಶದಿಂದ ನಿರಾಸೆಯುಂಟು ಮಾಡಿದೆ.ಅದರಲ್ಲೂ ಬಳ್ಳಾರಿ ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಪರಿಗಣಿಸಿದ್ದ ಬಿಜೆಪಿಗೆ ಈಗ ಸೋಲು ಕಾಣುವುದರ ಮೂಲಕ ಭಾರಿ ಮುಖಭಂಗ ಅನುಭವಿಸಿದೆ. ಈ ಹಿಂದೆ ಬಳ್ಳಾರಿಯಲ್ಲಿ ಬಿಜೆಪಿ ಸತತ ಮೂರು ಭಾರಿ ಗೆಲುವನ್ನು ಸಾಧಿಸಿತ್ತು.

 

Trending News