ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಮೂವರು ಕಾರ್ಮಿಕರ ಬಂಧನ

 ಭಾರತೀಯ ಸೇನೆಯ ಮೇಲೆ ಬೇಹುಗಾರಿಕೆ ಮತ್ತು ಪಾಕಿಸ್ತಾನದ ಜೊತೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಹರಿಯಾಣದ ಹಿಸಾರ್‌ನಿಂದ ಮೂವರನ್ನು ಬಂಧಿಸಲಾಗಿದೆ.

Last Updated : Aug 3, 2019, 05:17 PM IST
ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಮೂವರು ಕಾರ್ಮಿಕರ ಬಂಧನ  title=

ನವದೆಹಲಿ:  ಭಾರತೀಯ ಸೇನೆಯ ಮೇಲೆ ಬೇಹುಗಾರಿಕೆ ಮತ್ತು ಪಾಕಿಸ್ತಾನದ ಜೊತೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಹರಿಯಾಣದ ಹಿಸಾರ್‌ನಿಂದ ಮೂವರನ್ನು ಬಂಧಿಸಲಾಗಿದೆ.

ಪೊಲೀಸರು ಈ ಮೂವರು ವ್ಯಕ್ತಿಗಳ ಬಳಿ ಇದ್ದ ಮೊಬೈಲ್ ವಿಡಿಯೋ ತುಣುಕುಗಳು, ಛಾಯಾಚಿತ್ರಗಳು ಮತ್ತು ಕೆಲವು ವಾಟ್ಸಾಪ್ ಧ್ವನಿ ಸಂದೇಶಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಶಂಕಿತರನ್ನು ಸೇನಾ ದಂಡು ಪ್ರದೇಶದಲ್ಲಿ ಕಟ್ಟಡ ನಿರ್ಮಾಣದ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಬಂಧಿತ ಇಬ್ಬರು ಶಂಕಿತರನ್ನು ಉತ್ತರ ಪ್ರದೇಶದ ಮುಜಫರ್ ನಗರ ಮೂಲದ ಮೆಹ್ತಾಬ್ ಮತ್ತು ರಾಗಿಬ್ ಎಂದು ಗುರುತಿಸಲಾಗಿದೆ.ಮೂರನೇ ಶಂಕಿತ ವ್ಯಕ್ತಿಯನ್ನು ಸೂಪ್ ಶಮ್ಲಿ ಜಿಲ್ಲೆಯವನು ಎನ್ನಲಾಗಿದೆ. ಅವರು 12 ದಿನಗಳ ಹಿಂದೆಯೇ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸೇರಿಕೊಂಡರು ಮತ್ತು ಅಂದಿನಿಂದ ಈ ಪ್ರದೇಶಗಳಲ್ಲಿನ ಮಿಲಿಟರಿ ಚಲನವಲಗಳ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. 

ಈಗ ಅವರ ಬಂಧನವು ಅವರ ಗ್ರಾಮದಲ್ಲಿ ಭೀತಿಯನ್ನು ಉಂಟು ಮಾಡಿದೆ ಎನ್ನಲಾಗಿದೆ. ಈ ವಿಚಾರವಾಗಿ ಮಾಹಿತಿ ಗ್ರಾಮಕ್ಕೆ ತಿಳಿದ ಕೂಡಲೇ ಗ್ರಾಮದಲ್ಲಿ ಪಂಚಾಯತಿ ಸಭೆ ಸೇರಲಾಗಿದೆ. ಉದ್ಯೋಗಾವಕಾಶಕ್ಕಾಗಿ ಅವರು ಹರಿಯಾಣಕ್ಕೆ ಹೋಗಿ ನಂತರ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದರು ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದರು. ಆದರೆ ಅವರ ಕುಟುಂಬ ಸದಸ್ಯರು ತಮ್ಮ ಮಕ್ಕಳು ನಿರಪರಾಧಿಗಳು ಎಂದು ಹೇಳಿದರು.

ಮೆಹ್ತಾಬ್ ಅವರ ತಂದೆ ಹನೀಫ್ ಅವರು ಹೇಳುವಂತೆ ಅವರ ಮಗ ಬೇಹುಗಾರಿಕೆ ಮಾಡುವ ಉದ್ದೇಶವಿಲ್ಲದೆ ಹಾಗೆ ಫೋಟೋಗಳನ್ನು ಕ್ಲಿಕ್ ಮಾಡಿರಬಹುದು. ತನ್ನ ಮಗ ಹಿಸಾರ್ನಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ಅವರು ಹೇಳಿದರು. ಇನ್ನು ರಾಗಿಬ್ ಅವರ ಸಹೋದರ ಮುಜಮ್ಮಿಲ್ ಸಹ ತನ್ನ ಸಹೋದರನ ಬಂಧನದ ಬಗ್ಗೆ ಕಳವಳ ವ್ಯಕ್ತಪಡಿಸಿದರು, ಈ ಇದರ ಬಗ್ಗೆ ಅಧಿಕಾರಿಗಳು ಸಹ ಅವರಿಗೆ ತಿಳಿಸಿಲ್ಲ ಎಂದು ಹೇಳಿದರು.

Trending News