ನವದೆಹಲಿ: ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಆಯೋಗ (ಎನ್ಎಸ್ಸಿ), ಪಿ ಸಿ ಮೊಹನನ್ ಮತ್ತು ಜೆ ವಿ ಮೀನಾಕ್ಷಿ ಇಬ್ಬರು ಸದಸ್ಯರು ಮಂಗಳವಾರದಂದು ಕೇಂದ್ರ ಸರ್ಕಾರದ ನಿಲುವಿಗೆ ಅಸಮಾಧಾನಗೊಂಡು ರಾಜಿನಾಮೆ ನೀಡಿದ್ದಾರೆ.
ಮೋಹನನ್ ಅವರು ಹಂಗಾಮಿ ಅಧ್ಯಕ್ಷರಾಗಿದ್ದರು ಇವರೊಂದಿಗೆ ಮೀನಾಕ್ಷಿ ಅವರು ಕೂಡ ಹೊರಬಂದ ಕಾರಣ ಸದಸ್ಯರ ಸಂಖ್ಯೆ ಎರಡಕ್ಕೆ ಇಳಿದಿದೆ. ಉಳಿದಿರುವ ಸದಸ್ಯರಲ್ಲಿ ಮುಖ್ಯ ಸಂಖ್ಯಾಶಾಸ್ತ್ರಜ್ಞ ಪ್ರವೀಣ್ ಶ್ರೀವಾಸ್ತವ ಮತ್ತು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂಟ್ ಉಳಿದುಕೊಂಡಿದ್ದಾರೆ.
"ನಾನು ಎನ್ಎಸ್ಸಿಯಿಂದ ರಾಜೀನಾಮೆ ನೀಡಿದ್ದೇವೆ, ಆಯೋಗವು ಇತ್ತೀಚಿಗಿನ ದಿನಗಳಲ್ಲಿ ತುಂಬಾ ಪರಿಣಾಮಕಾರಿಯಾಗಿಲ್ಲ ಎನ್ನುವುದನ್ನು ನಾವು ಮನಗಂಡಿದ್ದೇವೆ ಮತ್ತು ಆಯೋಗದ ಜವಾಬ್ದಾರಿಯನ್ನು ನಿವಾರಿಸಲು ನಮಗೆ ಸಾಧ್ಯವಾಗುತ್ತಿಲ್ಲ" ಎಂದು ಮೊಹನನ್ ಪಿಟಿಐಗೆ ತಿಳಿಸಿದರು.
ಅಂಕಿಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ ಸಚಿವಾಲಯ (MoSPI) ಅಡಿಯಲ್ಲಿ ಬರುವ ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಆಯೋಗದ ವೆಬ್ಸೈಟ್ ಒಟ್ಟು ಏಳು ಸದಸ್ಯರನ್ನು ಹೊಂದಿರಬೇಕು ಎಂದು ಹೇಳುತ್ತದೆ.ಮೋಹನನ್ ಮತ್ತು ಮೀನಾಕ್ಷಿ ಅಧಿಕಾರಾವಧಿ - ಜೂನ್ 2017 ರಲ್ಲಿ ಎನ್ಎಸ್ಸಿ ಸದಸ್ಯರಾಗಿ ಸೇರಿಕೊಂಡಿದ್ದರು - ಜೂನ್ 2020ಕ್ಕೆ ಅವರ ಅವಧಿ ಅಂತ್ಯಗೊಳ್ಳುತ್ತಿತ್ತು.