ನಾಗ್ಪುರ: ನಾಗ್ಪುರ ಕೇಂದ್ರೀಯ ಜೈಲಿನಲ್ಲಿ ಕೈದಿಯಾಗಿದ್ದ 1993ರಲ್ಲಿ ನಡೆದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ ಅಬ್ದುಲ್ ಗನಿ ಟರ್ಕ್ ನಾಗ್ಪುರ ಜಿಎಂಸಿ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.
ಮುಂಬೈ ಸರಣಿ ಬಾಂಬ್ ಸ್ಫೋಟ ನಡೆದ 12 ಸ್ಥಳಗಳಲ್ಲಿ ಒಂದಾದ ಸೆಂಚುರಿ ಬಜಾರ್ ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಆತನ ಕೈವಾಡ ಸಾಬೀತಾದ ಕಾರಣ 2017ರಲ್ಲಿ ಮರಣದಂಡನೆ ವಿಧಿಸಲಾಗಿತ್ತು.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್, ಕೊಲಾಬಾದೇವಿ, ಶಿವಸೇನಾ ಭವನ್, ಏರ್ ಇಂಡಿಯಾ ಕಟ್ಟಡ, ನಾರಿಮನ್ ಪಾಯಿಂಟ್, ಬೆಸ್ತರ ಕಾಲೋನಿ, ಮಾಹಿಮ್, ವಾರ್ಲಿ ಸೆಂಚುರಿ ಬಝಾರ್, ಝವೇರಿ ಬಜಾರ್, ಹೋಟೆಲ್ ಸೀ ರಾಕ್- ಬಾಂದ್ರಾ, ಪ್ಲಾಜಾ ಸಿನೆಮಾ- ದಾದರ್, ಹೋಟೆಲ್ ಜುಹು ಸೆಂಟರ್, ಸಹಾರ್ ಏರ್ಪೋರ್ಟ್ ಪ್ರದೇಶ, ಹೋಟೆಲ್ ಏರ್ಪೋರ್ಟ್ ಸೆಂಟರ್ ಸೇರಿ ಒಟ್ಟು 12 ಕಡೆ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 250ಕ್ಕೂ ಹೆಚ್ಚು ಜನ ಅಸುನೀಗಿದ್ದರು.