ಅರುಣಾಚಲ ಪ್ರದೇಶದ ಕುರುಂಗ್ ಕುಮಾರಿ ಜಿಲ್ಲೆಯ ಡೆಮಿನ್ ಪ್ರದೇಶದ ಬಳಿ ರಸ್ತೆ ಕಾಮಾಗಾರಿ ನಡೆಸುತ್ತಿದ್ದ 19 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ. ಕಳೆದ 13 ದಿನಗಳಿಂದ ಗಡಿ ರಸ್ತೆಗಳ ಸಂಸ್ಥೆಯ (ಬಿಆರ್‌ಒ) 19 ಮಂದಿ ಕಾರ್ಮಿಕರು ನಾಪತ್ತೆಯಾಗಿದ್ದರು. ಸೋಮವಾರದಂದು ಡೆಮಿನ್ ಬಳಿ ಹರಿಯುವ ಕುಮಾರಿ ನದಿಯಲ್ಲಿ ಓರ್ವ ಮೃತದೇಹ ಪತ್ತೆಯಾಗಿತ್ತು.
ಇದನ್ನೂ ಓದಿ: ಕೇವಲ 49 ರೂಪಾಯಿಯ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಬಿಎಸ್‌ಎನ್‌ಎಲ್
ರಸ್ತೆ ನಿರ್ಮಾಣ ಗುತ್ತಿಗೆದಾರಿಗೆ ಈದ್‌ಗೆ ರಜೆ ಕೋರಿ ಈ ಕಾರ್ಮಿಕರು ಮನವಿ ಸಲ್ಲಿಸಿದ್ದರು. ಆದರೆ ಅನುಮತಿ ಸಿಕ್ಕಿರಲಿಲ್ಲ. ಹೀಗಾಗಿ ಅರಣ್ಯದ ಮೂಲಕ ಬೇರೆ ದಾರಿ ಹಿಡಿದು ತೆರಳುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿರಬಹುದು ಎಂದು ಕುರುಂಗ್ ಕುಮಾರಿ ಉಪ ಆಯುಕ್ತ (ಡಿಸಿ) ನಿಘಿ ಬೆಂಗಿಯಾ ಶಂಕಿಸಿದ್ದಾರೆ.
ಕಾರ್ಮಿಕರು ಅರಣ್ಯದ ಮೂಲಕ ಬೇರೆ ದಾರಿ ಹಿಡಿದಿರಬಹುದು. ಈ ವಿಚಾರದಲ್ಲಿ ಅಸ್ಸಾಂ ಪೊಲೀಸರನ್ನೂ ಸಂಪರ್ಕಿಸಲಾಗುತ್ತಿದೆ. ಈ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸ್ಥಳ ಭಾರತ-ಚೀನಾ ಗಡಿಯಿಂದ ಸುಮಾರು 200 ಕಿ.ಮೀ ದೂರದಲ್ಲಿದೆ. ಡೆಮಿನ್ ಪ್ರದೇಶದ ವೃತ್ತ ಅಧಿಕಾರಿ ಮತ್ತು ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಡಿಸಿ ಹೇಳಿದರು. ಬಹುತೇಕ ಕೂಲಿ ಕಾರ್ಮಿಕರು ಮುಸ್ಲಿಂರಾಗಿದ್ದು, ಜುಲೈ 5ರಂದು ಈದ್ ಆಚರಿಸಲು ಸ್ಥಳವನ್ನು ತೊರೆದಿದ್ದರು ಎಂದು ಡಿಸಿ ಹೇಳಿದರು.
ಇದನ್ನೂ ಓದಿ: ವಿರಾಟ್ ಮತ್ತೆ ಫಾರ್ಮ್ ಬರೋದಕ್ಕೆ ಈ ಲೆಜೆಂಡ್ ಆಟಗಾರ ಸಹಾಯ ಮಾಡುತ್ತಾರಂತೆ!
ಈ ಕೂಲಿ ಕಾರ್ಮಿಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ಎಲ್ಲ ಕೂಲಿಕಾರರು ಕುಮಾರಿ ನದಿ ದಾಟಲು ಯತ್ನಿಸಿ ಅವಘಡಕ್ಕೆ ಬಲಿಯಾಗಿರಬಹುದು ಎಂದು ಶಂಕಿಸಲಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಪ್ರಮಾಣವೂ ಹೆಚ್ಚಾಗಿದ್ದು, ಶೋಧ ಕಾರ್ಯಕ್ಕೂ ಸಂಕಷ್ಟ ಎದುರಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.