ಗುಜರಾತ್‌ನ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ 179 ಮಕ್ಕಳು ಸಾವು

 ರಾಜಸ್ಥಾನದ ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಸುದ್ದಿ ಮಾಸುವ ಮುನ್ನವೇ , 2019 ರ ಡಿಸೆಂಬರ್‌ನಲ್ಲಿ ಗುಜರಾತ್‌ನ ರಾಜ್‌ಕೋಟ್ ಮತ್ತು ಜಾಮ್‌ನಗರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 179 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ರಾಜ್‌ಕೋಟ್‌ನಲ್ಲಿ 111 ಸಾವುಗಳು ಸಂಭವಿಸಿದರೆ, ಜಮ್‌ನಗರದಲ್ಲಿ ಡಿಸೆಂಬರ್‌ನಲ್ಲಿ 68 ಮತ್ತು ನವೆಂಬರ್‌ನಲ್ಲಿ 71 ಸಾವುಗಳು ಸಂಭವಿಸಿವೆ.

Last Updated : Jan 5, 2020, 02:39 PM IST
ಗುಜರಾತ್‌ನ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ 179 ಮಕ್ಕಳು ಸಾವು  title=
ಸಾಂದರ್ಭಿಕ ಚಿತ್ರ

ನವದೆಹಲಿ: ರಾಜಸ್ಥಾನದ ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶುಗಳ ಸಾವಿನ ಸುದ್ದಿ ಮಾಸುವ ಮುನ್ನವೇ , 2019 ರ ಡಿಸೆಂಬರ್‌ನಲ್ಲಿ ಗುಜರಾತ್‌ನ ರಾಜ್‌ಕೋಟ್ ಮತ್ತು ಜಾಮ್‌ನಗರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 179 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿಯ ಪ್ರಕಾರ, ರಾಜ್‌ಕೋಟ್‌ನಲ್ಲಿ 111 ಸಾವುಗಳು ಸಂಭವಿಸಿದರೆ, ಜಮ್‌ನಗರದಲ್ಲಿ ಡಿಸೆಂಬರ್‌ನಲ್ಲಿ 68 ಮತ್ತು ನವೆಂಬರ್‌ನಲ್ಲಿ 71 ಸಾವುಗಳು ಸಂಭವಿಸಿವೆ.

ಜೀ ಮೀಡಿಯಾ ಜೊತೆ ಮಾತನಾಡಿದ ರಾಜ್‌ಕೋಟ್ ಸಿವಿಲ್ ಆಸ್ಪತ್ರೆಯ ಸಿವಿಲ್ ಸೂಪರಿಂಟೆಂಡೆಂಟ್ ಮನೀಶ್ ಮೆಹ್ತಾ ಅವರು 2019 ರ ಡಿಸೆಂಬರ್‌ನಲ್ಲಿ ಆಸ್ಪತ್ರೆಯಲ್ಲಿ 111 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಕಡಿಮೆ ತೂಕವಿರುವ ಮಕ್ಕಳನ್ನು ಉಳಿಸುವುದು ಕಠಿಣವಾಗಿದೆ ಮತ್ತು ಕೆಲವು ಶಿಶುಗಳು ಸೆಪ್ಸಿಸ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು. ಕೆಲವು ಮಕ್ಕಳ ಸಾವಿನ ಹಿಂದೆ ಬಹು ಜನ್ಮಜಾತ ದೋಷವೂ ಒಂದು ಕಾರಣ ಎಂದು ಗುಪ್ತಾ ಹೇಳಿದರು.ಜಾಮ್ ನಗರ ಗರದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 639 ಶಿಶುಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ.

2019 ರ ಡಿಸೆಂಬರ್‌ನಲ್ಲಿ ಆಸ್ಪತ್ರೆಯಲ್ಲಿ 85 ಶಿಶುಗಳು ಸಾವನ್ನಪ್ಪಿದ್ದಾರೆ ಎಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯ ಅಧೀಕ್ಷಕ ಗುನ್ವಂತ್ ಠಾಕೋರ್ ಒಪ್ಪಿಕೊಂಡಿದ್ದರಿಂದ ಅಹಮದಾಬಾದ್‌ನ ಪರಿಸ್ಥಿತಿ ಕೂಡ ಭೀಕರವಾಗಿದೆ. ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 70-80 ಶಿಶುಗಳು ಸಾಯುತ್ತವೆ ಎಂದು ಅವರು ಹೇಳಿದರು. ಈ ಸಾವುಗಳಿಗೆ ಅಪೌಷ್ಟಿಕತೆ ಒಂದು ಪ್ರಮುಖ ಕಾರಣ ಎಂದು ಠಾಕೋರ್ ಹೇಳಿದರು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿ ಕೊರತೆ ಇದೆ ಎನ್ನಲಾಗಿದೆ.

ಗುಜರಾತ್‌ನ ಚೋಟಾ ಉದಯಪುರ ಜಿಲ್ಲೆಯಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ 614 ಶಿಶುಗಳು ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಿಲ್ಲ ಮತ್ತು ಗರ್ಭಧಾರಣೆಯನ್ನು ಪರೀಕ್ಷಿಸಲು ಬಳಸುವ ಅಲ್ಟ್ರಾಸೌಂಡ್ ಯಂತ್ರವೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. ಜಿಲ್ಲೆಯಲ್ಲಿ ಕೇವಲ 28 ಎಂಬಿಬಿಎಸ್ ವೈದ್ಯರಿದ್ದು, ಕನಿಷ್ಠ 88 ವೈದ್ಯರ ಬೇಡಿಕೆ ಇದೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ ಇಬ್ಬರು ಸ್ತ್ರೀರೋಗ ತಜ್ಞರು ಮಾತ್ರ ಇದ್ದಾರೆ ಎನ್ನಲಾಗಿದೆ.

Trending News