Shocking News: ಹಿರಿಯ ವಿದ್ಯಾರ್ಥಿಯನ್ನೇ ಇರಿದು ಕೊಂದ ಕಿರಿಯ ವಿದ್ಯಾರ್ಥಿ..!

ಕೊಲೆಯಾಗಿರುವ ವಿದ್ಯಾರ್ಥಿಯು ಆರೋಪಿಯ ತಾಯಿಯನ್ನು ನಿಂದಿಸಿ, ಆಕೆಯ ಮೇಲೆ ದೌರ್ಜನ್ಯ ಎಸಗಿದ್ದನು ಎಂದು ಆರೋಪಿಸಲಾಗಿದೆ.

Written by - Puttaraj K Alur | Last Updated : Oct 3, 2021, 07:30 AM IST
  • ದೆಹಲಿಯಲ್ಲಿ ಸಿನೀಯರ್ ವಿದ್ಯಾರ್ಥಿಯನ್ನೇ ಇರಿದು ಹತ್ಯೆ ಮಾಡಿದ ಜೂನಿಯರ್ ವಿದ್ಯಾರ್ಥಿ
  • ಕೊಲೆಯಾದ ವಿದ್ಯಾರ್ಥಿ ಆರೋಪಿ ಬಾಲಕನ ತಾಯಿಗೆ ನಿಂದಿಸಿದ್ದ ಎಂದು ಆರೋಪಿಸಲಾಗಿದೆ
  • ಕ್ಷಮೆ ಕೇಳಲು ನಿರಾಕರಿಸಿದ 17 ವರ್ಷದ ವಿದ್ಯಾರ್ಥಿಗೆ ಇರಿದ ಕಿರಿಯ ಶಾಲಾ ಬಾಲಕ
Shocking News: ಹಿರಿಯ ವಿದ್ಯಾರ್ಥಿಯನ್ನೇ ಇರಿದು ಕೊಂದ ಕಿರಿಯ ವಿದ್ಯಾರ್ಥಿ..! title=
ದೆಹಲಿಯಲ್ಲಿ ಸಿನೀಯರ್ ವಿದ್ಯಾರ್ಥಿಯ ಇರಿದು ಹತ್ಯೆ (Photo Courtesy:@Zee News)

ನವದೆಹಲಿ: 17 ವರ್ಷದ ಹುಡುಗನನ್ನು ಆತನ ಶಾಲೆಯ ಕಿರಿಯ ವಿದ್ಯಾರ್ಥಿಯೇ ಇರಿದು ಕೊಲೆ(Stabbed To Death) ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಆಗ್ನೇಯ ದೆಹಲಿಯ ಓಖ್ಲಾ ಪ್ರದೇಶದಲ್ಲಿರುವ ತೆಹಖಂಡದ ಸರ್ಕಾರಿ ಶಾಲೆ(Government School in Tehkhand)ಯ ಹೊರಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾಗಿರುವ ವಿದ್ಯಾರ್ಥಿ(Student)ಯು ಆರೋಪಿಯ ತಾಯಿಯನ್ನು ನಿಂದಿಸಿ, ಆಕೆಯ ಮೇಲೆ ದೌರ್ಜನ್ಯ ಎಸಗಿದ್ದನು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕ್ಷಮೆ ಕೇಳಲು ನಿರಾಕರಿಸಿದಾಗ ಆತನಿಗೆ ಇರಿದು ಹತ್ಯೆ ಮಾಡಲಾಗಿದೆ. ಸದ್ಯ ಆರೋಪಿ ಬಾಲಕನನ್ನು ಬಂಧಿಸಲಾಗಿದೆ. ಘಟನೆ ನಡೆದಾಗ ಇಬ್ಬರು ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶೇ 50 ರಷ್ಟು ಸ್ಥಳಾವಕಾಶದೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಮುಂದಾದ ಕೇರಳ

ಘಟನೆಯಲ್ಲಿ ಮೃತ ವಿದ್ಯಾರ್ಥಿಗೆ ಮೂರು ಬಾರಿ ಇರಿಯಲಾಗಿತ್ತು. ಗಂಭೀರ ಗಾಯಗಳಿಂದ ಬಳಲುತ್ತಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ.

ಪೊಲೀಸರ(Delhi Police) ವಿಚಾರಣೆಯ ಸಮಯದಲ್ಲಿ ಮೃತ ಯುವಕನು ಶಾಲೆ ಮುಗಿಸಿ ತಿರುಗಾಡುತ್ತಿದ್ದಾಗ ಆತನಿಗೆ ಇರಿದಿರುವುದಾಗಿ ಆರೋಪಿ ತಿಳಿಸಿದ್ದಾನೆ. ಆರೋಪಿ ಬಾಲಕ 10ನೇ ತರಗತಿಯ ವಿದ್ಯಾರ್ಥಿ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Aadhaar Card: ಕೋಟ್ಯಂತರ ಗ್ರಾಹಕರಿಗೆ UIDAI ವತಿಯಿಂದ ಬಹುದೊಡ್ಡ ಉಡುಗೊರೆ, ವಿವರಕ್ಕಾಗಿ ಸುದ್ದಿ ಓದಿ

ದೆಹಲಿಯಲ್ಲಿ ಜೂನಿಯರ್ ವಿದ್ಯಾರ್ಥಿಯೊಬ್ಬ ಸಿನೀಯರ್ ವಿದ್ಯಾರ್ಥಿಯನ್ನೇಇರಿದು ಕೊಲೆ ಮಾಡಿರುವುದು ಪೋಷರಲ್ಲಿ ಆತಂಕ ಮೂಡಿಸಿದೆ. ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಪೋಷಕರು ಶಾಲಾ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News