ಗುರಗಾಂವ್‌: ಸೋದರ ಸಂಬಂಧಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ

ಗುರಗಾಂವ್‌ನ ಸೆಕ್ಟರ್ 51 ಪ್ರದೇಶದಲ್ಲಿ 16 ವರ್ಷದ ಬಾಲಕ ತನ್ನ ಸೋದರ ಸಂಬಂಧಿಯನ್ನು ಹಾಸಿಗೆಗೆ ಕಟ್ಟಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Last Updated : Nov 17, 2019, 03:20 PM IST
ಗುರಗಾಂವ್‌: ಸೋದರ ಸಂಬಂಧಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಗುರಗಾಂವ್‌ನ ಸೆಕ್ಟರ್ 51 ಪ್ರದೇಶದಲ್ಲಿ 16 ವರ್ಷದ ಬಾಲಕ ತನ್ನ ಸೋದರ ಸಂಬಂಧಿಯನ್ನು ಹಾಸಿಗೆಗೆ ಕಟ್ಟಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಈ ಘಟನೆ ಗುರುವಾರದಂದು ಸಂಭವಿಸಿದ್ದು, ಆದರೆ 15 ವರ್ಷದ ಬಾಲಕಿ ಶಾಲೆಯಲ್ಲಿ ತನ್ನ ಶಿಕ್ಷಕರಿಗೆ ವಿವರಿಸಿದ ನಂತರ ಶುಕ್ರವಾರದಂದು ದೂರು ದಾಖಲಿಸಲಾಗಿದೆ. ಈಗ ಬಾಲಕಿಯ ತಾಯಿ ತನ್ನ ಅತ್ತಿಗೆಯ ಮಗನ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಗುರಗಾಂವ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆ ತನ್ನ ಮಗಳನ್ನು ಸರಿಯಾಗಿ ಇಟ್ಟುಕೊಳ್ಳದ ಕಾರಣ ದೈನಂದಿನ ಕೆಲಸಗಳಿಗೆ ಸಹಾಯ ಮಾಡಲು ತನ್ನ ಅತ್ತಿಗೆಯ ಮನೆಗೆ ಕಳುಹಿಸಿದ್ದಳು. ಅತ್ತಿಗೆ ತನ್ನ ಮಗ ಮತ್ತು ಸೊಸೆಯನ್ನು ಬಿಟ್ಟು ವೈದ್ಯರ ಬಳಿಗೆ ಹೋದಾಗ, 15 ವರ್ಷದ ಹುಡುಗಿಯ ಕೈ ಮತ್ತು ಕಾಲುಗಳನ್ನು ಹಾಸಿಗೆಗೆ ಕಟ್ಟಿ ಅವಳ ಮೇಲೆ ಬಾಲಕ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈಗ ಬಾಲಕನನ್ನು ಬಂಧಿಸಲಾಗಿದ್ದು, ಈ ಘಟನೆ ವಿಚಾರವಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.

Trending News