ಜಮ್ಮು ಕಾಶ್ಮೀರ್: ಉಗ್ರರ ದಾಳಿಗೆ 12 ಸಿಆರ್ಪಿಎಫ್ ಸೈನಿಕರ ಬಲಿ, ಹೊಣೆ ಹೊತ್ತ ಜೆಇಎಂ

ಉಗ್ರರು ಐಇಡಿ ಬಳಸಿ 12 ಸಿಆರ್ಪಿಎಫ್ ಸೈನಿಕರನ್ನು ಅವಂತಿಪುರಾದಲ್ಲಿ ಹತ್ಯೆ ಮಾಡಿದ್ದಾರೆ.ಈ ಹತ್ಯೆಯ ಜವಾಬ್ದಾರಿಯನ್ನು ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಜೈಶ್ ಇ-ಮೊಹಮ್ಮದ್ ಹೊತ್ತಿದೆ.

Last Updated : Feb 14, 2019, 05:12 PM IST
ಜಮ್ಮು ಕಾಶ್ಮೀರ್: ಉಗ್ರರ ದಾಳಿಗೆ 12 ಸಿಆರ್ಪಿಎಫ್ ಸೈನಿಕರ ಬಲಿ, ಹೊಣೆ ಹೊತ್ತ ಜೆಇಎಂ title=
photo:ANI

ಶ್ರೀನಗರ: ಉಗ್ರರು ಐಇಡಿ ಬಳಸಿ 12 ಸಿಆರ್ಪಿಎಫ್ ಸೈನಿಕರನ್ನು ಅವಂತಿಪುರಾದಲ್ಲಿ ಹತ್ಯೆ ಮಾಡಿದ್ದಾರೆ.ಈ ಹತ್ಯೆಯ ಜವಾಬ್ದಾರಿಯನ್ನು ಪಾಕ್ ಮೂಲದ ಭಯೋತ್ಪಾದಕ ಸಂಘಟನೆ ಜೈಶ್ ಇ-ಮೊಹಮ್ಮದ್ ಹೊತ್ತಿದೆ.

ಉಗ್ರರು ರಸ್ತೆಯಲ್ಲಿ ಕಾರ್ ವೊಂದಕ್ಕೆ ಐಇಡಿಯನ್ನು ಅಳವಡಿಸಿದ್ದರು ಎನ್ನಲಾಗಿದೆ. ಯಾವಾಗ 20 ಸೈನಿಕರನ್ನು ಒಳಗೊಂಡ ವಾಹನವು ಆ ಕಾರ್ ಹತ್ತಿರ ಬಂದಿದೆಯೋ ಆಗ ಉಗ್ರರು ಅದನ್ನು ಸ್ಪೋಟಗೊಳಿಸಿದ್ದಾರೆ. ಅನಂತರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.ಈ ಘಟನೆ ನಡೆದ ತಕ್ಷಣ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ. 

ಈ ದುರ್ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಮೆಹಬೂಬಾ ಮುಫ್ತಿ" ಅವಂತಿಪುರಾದಿಂದ ನಿಜಕ್ಕೂ ಆಘಾತಕಾರಿ ಸುದ್ದಿ ಬರುತ್ತಿದೆ. ನಮ್ಮ 12 ಭದ್ರತಾ ಪಡೆಗಳ ಸೈನಿಕರು ಹುತಾತ್ಮರಾಗಿದ್ದಾರೆ, ಇನ್ನು ಹಲವರು ಮೃತಪಟ್ಟಿದ್ದಾರೆ. ಇಂತಹ ಕ್ರೂರ ಘಟನೆಯನ್ನು ಖಂಡಿಸಲು ಪದಗಳೇ ಸಿಗುತ್ತಿಲ್ಲ "ಎಂದು ಟ್ವೀಟ್ ಮಾಡಿದ್ದಾರೆ.ಬುಧುವಾರವಷ್ಟೇ ಬಡ್ಗಾಂ ಜಿಲ್ಲೆಯ ಗೋಪಾಲಪುರ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಇದರಿಂದಾಗಿ ಇಬ್ಬರು ಉಗ್ರರು ಹತ್ಯೆಯಾಗಿದ್ದರು.

Trending News