ತಮಿಳುನಾಡು: ಐಟಿ ದಾಳಿ ವೇಳೆ 100 ಕೆಜಿ ಚಿನ್ನ ಬಿಸ್ಕಿಟ್ ಹಾಗೂ 163 ಕೋಟಿ ನಗದು ವಶ

   

Last Updated : Jul 18, 2018, 04:01 PM IST
 ತಮಿಳುನಾಡು: ಐಟಿ ದಾಳಿ ವೇಳೆ 100 ಕೆಜಿ ಚಿನ್ನ ಬಿಸ್ಕಿಟ್ ಹಾಗೂ 163 ಕೋಟಿ ನಗದು ವಶ  title=
Photo courtesy: ANI

ನವದೆಹಲಿ: ಸೋಮವಾರ ಆದಾಯ ತೆರಿಗೆ (ಐಟಿ) ಇಲಾಖೆಯು ತಮಿಳುನಾಡಿನ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ  ಸಂಸ್ಥೆಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ಮಾಡಿ 163 ಕೋಟಿ ರೂ. ನಗದು ಮತ್ತು 100 ಕೆಜಿ ಚಿನ್ನದ ಬಿಸ್ಕಿಟ್ ಬಾರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚೆನ್ನೈ, ಮಧುರೈ ಮತ್ತು ಅರುಪ್ಕೊಟ್ಟೈಯಲ್ಲಿ ಕಚೇರಿಗಳಲ್ಲಿ ದಾಳಿ ಕಾರ್ಯಾಚರಣೆ ನಡೆಸಿ ಐಟಿ ಇಲಾಖೆ ಭಾರಿ ಪ್ರಮಾಣದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಂಡಿದೆ.

 ಐಟಿ ಇಲಾಖೆ ಅಧಿಕಾರಿಗಳು ಹೇಳುವಂತೆ ಇಲ್ಲಿಯವರೆಗೆ ದೇಶದಲ್ಲಿ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಸಿಕ್ಕಂತಹ ಅತಿ ದೊಡ್ಡ ಮೊತ್ತ ಎಂದು ತಿಳಿಸಿದ್ದಾರೆ. 

Trending News