ಕೇಂದ್ರದ ಶೇ.10 ಮೀಸಲಾತಿ ಮರಾಠರಿಗೆ ಅನ್ವಯವಾಗುವುದಿಲ್ಲ -ಮಹಾರಾಷ್ಟ್ರ ಸಿಎಂ

ಮಹಾರಾಷ್ಟ್ರದ ಮರಾಠ ಸಮುದಾಯವು ಕೇಂದ್ರ ಸರ್ಕಾರವು ಮೇಲ್ಜಾತಿ ಬಡವರಿಗೆ ನೀಡಿರುವ ಶೇ.10 ರಷ್ಟು ಮೀಸಲಾತಿ ಮರಾಠ ಸಮುದಾಯಕ್ಕೆ ಅನ್ವಯವಾಗುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

Last Updated : Feb 13, 2019, 01:03 PM IST
ಕೇಂದ್ರದ ಶೇ.10 ಮೀಸಲಾತಿ ಮರಾಠರಿಗೆ ಅನ್ವಯವಾಗುವುದಿಲ್ಲ -ಮಹಾರಾಷ್ಟ್ರ ಸಿಎಂ title=

ನವದೆಹಲಿ: ಮಹಾರಾಷ್ಟ್ರದ ಮರಾಠ ಸಮುದಾಯವು ಕೇಂದ್ರ ಸರ್ಕಾರವು ಮೇಲ್ಜಾತಿ ಬಡವರಿಗೆ ನೀಡಿರುವ ಶೇ.10 ರಷ್ಟು ಮೀಸಲಾತಿ ಮರಾಠ ಸಮುದಾಯಕ್ಕೆ ಅನ್ವಯವಾಗುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

ಮಂಗಳವಾರದಂದು ಈ ಕುರಿತಾಗಿ ಅಧಿಸೂಚನೆ ಹೊರಡಿಸಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮರಾಠ ಸಮುದಾಯಕ್ಕೆ ಕೇಂದ್ರದ ಶೇ.10 ರ ಮೀಸಲಾತಿ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.ಇತ್ತೀಚಿಗೆ ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆಗೂ ಮುನ್ನ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿ ಬಡವರನ್ನು ತಲುಪುವ ನಿಟ್ಟಿನಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 10 ರಷ್ಟು ಮೀಸಲಾತಿಯನ್ನು ನೀಡಿತ್ತು.ಈ ಮೀಸಲಾತಿಯು ಪ್ರಮುಖವಾಗಿ ಸದ್ಯ ಪ.ಪಂಗಡ, ಪ.ಜಾತಿ.ಒಬಿಸಿ ಹೊರತಾದ ಶೇ.50 ರಷ್ಟು ಮೀಸಲಾತಿ ಪ್ರಮಾಣವನ್ನು ಬಿಟ್ಟು ಇದೆ. 

ಈ ಹಿಂದೆ ಮರಾಠ ಸಮುದಾಯ ಮೀಸಲಾತಿಗಾಗಿ ಹೋರಾಟ ನಡೆಸಿದ ಹಿನ್ನಲೆಯಲ್ಲಿ ಕಳೆದ ವರ್ಷ ನವಂಬರ್ ನಲ್ಲಿ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ 16 ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರವು ಮರಾಠ ಸಮುದಾಯಕ್ಕೆ ನೀಡಿತ್ತು.ಈ ಹಿನ್ನಲೆಯಲ್ಲಿ ಈಗ ಈ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ.

Trending News