ಜಮ್ಮು-ಕಾಶ್ಮೀರ್: ತರಬೇತಿಗೆ ತೆರಳಿದ್ದ 10 BSF ಯೋಧರು ನಾಪತ್ತೆ

ಉತ್ತರ ಪ್ರದೇಶದ ಬರ್ಧಾಮನ್ ಮತ್ತು ದಂಬಾದ್ ರೈಲ್ವೇ ಯಲ್ಲಿ ತೆರಳುತ್ತಿದ್ದ 10 ಯೋಧರು ಮುಘಲ್ಸಾರೈ ಎಂಬಲ್ಲಿ ಕಾಣೆಯಾಗಿದ್ದಾರೆ.

Last Updated : Jun 28, 2018, 08:17 AM IST
ಜಮ್ಮು-ಕಾಶ್ಮೀರ್: ತರಬೇತಿಗೆ ತೆರಳಿದ್ದ 10 BSF ಯೋಧರು ನಾಪತ್ತೆ title=

ಮುಘಲ್ಸಾರೈ(ಉತ್ತರ ಪ್ರದೇಶ): ಪಶ್ಚಿಮ ಬಂಗಾಳದ ಬರ್ಧಮಾನ್ ಮತ್ತು ಜಾರ್ಖಂಡ್ನ ದಂಬಾದ್ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್) ಹತ್ತು ಮಂದಿ ಸೈನಿಕರು ಕಾಣೆಯಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಲಯಕ್ಕೆ ತರಬೇತಿಗೆಂದು ಉತ್ತರ ಪ್ರದೇಶದ ಬರ್ಧಾಮನ್ ಮತ್ತು ದಂಬಾದ್ ರೈಲ್ವೇ ಯಲ್ಲಿ ತೆರಳುತ್ತಿದ್ದ 83 ಸೈನಿಕರು ತೆರಳುತ್ತಿದ್ದರು.  ಮುಘಲ್ಸಾರೈ ರೈಲ್ವೆ ನಿಲ್ದಾಣದಲ್ಲಿ ರೈಲು ನಿಂತಿದ್ದ ಸಮಯದಲ್ಲಿ ಹೆಡ್ ಕೌಂಟಿಂಗ್ ನಡೆಸುತ್ತಿರುವಾಗ 10 ಮಂದಿ ಕಾಣೆಯಾಗಿರುವುದು ತಿಳಿದುಬಂದಿದೆ.

ಈ ಕುರಿತು ಈಗಾಗಲೇ ಮುಘಲ್ಸರೈ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಒಟ್ಟು 83 ಯೋಧರು ವಿಶೇಷ ತರಬೇತಿಗಾಗಿ ಜಮ್ಮು ಕಾಶ್ಮೀರಕ್ಕೆ ತರಳುತ್ತಿದ್ದ ಸಂದರ್ಭದಲ್ಲಿ ಹತ್ತು ಜನ ನಾಪತ್ತೆಯಾಗಿದ್ದಾರೆ. ತಮ್ಮ ಕಮಾಂಡರ್ ಗೆ ಯಾವುದೇ ರೀತಿಯಲ್ಲೂ ಮಾಹಿತಿ ನೀಡದೆ ನಾಪತ್ತೆಯಾಗಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು' ಎಂದು ದೂರು ಸಲ್ಲಿಸಲಾಗಿದೆ. ಈ ಬಗ್ಗೆ ತನಿಖೆ ಆರಂಭಿಸಿದ್ದೇವೆ ಎಂದು ಜಿ.ಪಿ.ಪಿ ಮೊಘಲ್ಸಾರೈ ಸಬ್ ಇನ್ಸ್ಪೆಕ್ಟರ್ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.

Trending News