ಭಾರತದ ರಾಜಕಾರಣದಲ್ಲಿ ಬಿಹಾರ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮುಂದೆ ಇವೆ- ಅಶ್ವಿನಿ ಚೌಬೆ

   

Last Updated : Apr 24, 2018, 06:33 PM IST
ಭಾರತದ ರಾಜಕಾರಣದಲ್ಲಿ ಬಿಹಾರ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮುಂದೆ ಇವೆ- ಅಶ್ವಿನಿ ಚೌಬೆ title=

ವಾರಣಾಸಿ:  ಬಿಹಾರ್ ಮತ್ತು ಉತ್ತರಪ್ರದೇಶಗಳ ಕುರಿತಾಗಿ ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂತ್ ಅವರ ಹೇಳಿಕೆಗೆ ಕೇಂದ್ರ ಸಚಿವ ಅಶ್ವಿನಿ ಚೌಬೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಗಳವಾರದಂದು ಸುದ್ದಿಗಾರರೊಂದಿಗೆ  ಮಾತನಾಡಿದ ಅವರು "ದೇಶದ ರಾಜಕಾರಣದಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳು ಮುಂಚೂಣಿಯಲ್ಲಿವೆ.ನಾವು ದೇಶದ ಅಭಿವೃದ್ಧಿಗೆ ಯಾವಾಗಲೂ ಕೊಡುಗೆ ನೀಡಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ" ಎಂದು ಚೌಬೆ ಹೇಳಿದರು.

ನೀತಿ ಆಯೋಗದ ಸಿಇಓ ಅವರು ಬಿಹಾರ, ಉತ್ತರಪ್ರದೇಶ, ಛತ್ತೀಸ್ ಘಡ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳು ಸಾಮಾಜಿಕ ಸೂಚ್ಯಂಕದಲ್ಲಿ  ಭಾರತವನ್ನು ಹಿಂದುಳಿಯುವಂತೆ ಮಾಡಿವೆ ಎಂದು ಪ್ರತಿಕ್ರಿಯಿಸಿದ್ದರು.

"ಭಾರತದ ಪೂರ್ವ ಭಾಗದಲ್ಲಿರುವ ಬಿಹಾರ್, ಉತ್ತರಪ್ರದೇಶ, ಚತ್ತೀಸ ಘಡ್ , ಮತ್ತು ರಾಜಸ್ಥಾನ್, ವಿಶೇಷವಾಗಿ ಸಾಮಾಜಿಕ ಸೂಚ್ಯಂಕಗಳಲ್ಲಿ  ಭಾರತವನ್ನುಹಿಂದುಳಿಯುವಂತೆ ಮಾಡಿವೆ, ನಾವು ವಾಣಿಜ್ಯ ವಿಭಾಗದಲ್ಲಿ ಸುಧಾರಿಸುತ್ತಿದ್ದರು ಸಹಿತ, ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆ ಇರುತ್ತೇವೆ" ಎಂದು ಅಮಿತಾಬ್ ಕಾಂತ್ ತಿಳಿಸಿದ್ದರು.

Trending News