Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು

Yoga For Weight Loss:  ಇಂದು ನಾವು ಅಂತಹ ಕೆಲವು ಯೋಗಾಸನಗಳ ಬಗ್ಗೆ ಹೇಳಲಿದ್ದೇವೆ, ಅದು ನಿಮ್ಮ ತೂಕವನ್ನು ವೇಗವಾಗಿ ಕಡಿಮೆ ಮಾಡುತ್ತದೆ.

Written by - Yashaswini V | Last Updated : Jun 20, 2021, 03:48 PM IST
  • ಯೋಗ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು
  • ತೂಕ ಇಳಿಸಿಕೊಳ್ಳಲು ಬಯಸಿದರೆ ಯೋಗಕ್ಕಿಂತ ಉತ್ತಮವಾದ ಅಭ್ಯಾಸ ಬೇರೆಯಿಲ್ಲ ಎಂದು ಹೇಳಲಾಗುತ್ತದೆ
  • ನಿಮ್ಮ ಸಮತೋಲಿತ ಆಹಾರದ ಜೊತೆಗೆ ನಿಮಗೆ ಯೋಗವೂ ಅಗತ್ಯ
Yoga For Weight Loss: ತೂಕ ಕಡಿಮೆ ಮಾಡಲು ಸಹಾಯಕವಾಗುವ 5 ಉತ್ತಮ ಯೋಗಾಸನಗಳಿವು title=
ತೂಕವನ್ನು ವೇಗವಾಗಿ ಕಡಿಮೆ ಮಾಡಲು ಸಹಾಯಕವಾಗುವ ಯೋಗಾಸನಗಳಿವು

Yoga For Weight Loss: ಇಂದಿನ ಕಾರ್ಯನಿರತ ಜೀವನಶೈಲಿಯಲ್ಲಿ ಜನರು ಸ್ಥೂಲಕಾಯತೆಗೆ ಬಲಿಯಾಗುತ್ತಿದ್ದಾರೆ. ಬೊಜ್ಜು ಕಡಿಮೆ ಮಾಡಲು ಜನರು ವಿವಿಧ ವಿಧಾನಗಳನ್ನು ಅನುಸರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಹ ತೂಕ ಇಳಿಸಿಕೊಳ್ಳಲು ಬಯಸಿದರೆ ಯೋಗಕ್ಕಿಂತ ಉತ್ತಮವಾದ ಅಭ್ಯಾಸ ಬೇರೆ ಏನೂ ಇಲ್ಲ. ಸ್ಥೂಲಕಾಯತೆಯನ್ನು ವೇಗವಾಗಿ ಕಡಿಮೆ ಮಾಡಲು ಮತ್ತು ಹೊಟ್ಟೆಯಲ್ಲಿನ ಕೊಬ್ಬನ್ನು ಕಡಿಮೆ ಮಾಡಲು (Yogasan For Weight Loss), ನಿಮ್ಮ ಸಮತೋಲಿತ ಆಹಾರದ ಜೊತೆಗೆ ನಿಮಗೆ ಯೋಗವೂ ಅಗತ್ಯ. ಇಂದು, ಅಂತರರಾಷ್ಟ್ರೀಯ ಯೋಗ ದಿನದ (International Yoga Day 2021) ಸಂದರ್ಭದಲ್ಲಿ ಅಂತಹ ಕೆಲವು ಯೋಗಾಸನಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಅದು ನಿಮ್ಮ ತೂಕವನ್ನು ವೇಗವಾಗಿ ಕಡಿಮೆ ಮಾಡುತ್ತದೆ.

ವೀರಭದ್ರಾಸನ - ಈ ಆಸನವನ್ನು ಮಾಡಲು, ಒಂದು ಕಾಲು ಹಿಂದಕ್ಕೆ ಎಳೆಯುವ ಮೂಲಕ, ಇನ್ನೊಂದು ಕಾಲು ಮುಂದೆ ಇರಬೇಕು. ಇದರಲ್ಲಿ ಮೊಣಕಾಲು 90 ಡಿಗ್ರಿ ಭಂಗಿಯಲ್ಲಿರಿಸಿ ಮತ್ತು ಕೈಗಳನ್ನು ಸೇರಿಸಿ ತಲೆಯ ಮೇಲ್ಭಾಗಕ್ಕೆ ತೆಗೆದುಕೊಳ್ಳಿ. ವೀರಭದ್ರಾಸನ -2 ಗಾಗಿ, ನೀವು ಈ ಭಂಗಿಯನ್ನು ಮುಂದಕ್ಕೆ ತೆಗೆದುಕೊಳ್ಳಬಹುದು, ಇದರಲ್ಲಿ ನಿಮ್ಮ ಕೈಗಳನ್ನು ಎದೆಯ ಮುಂದೆ ತೆಗೆದುಕೊಂಡು ವಿಸ್ತರಿಸಿದ ಕಾಲುಗಳನ್ನು ನೇರಗೊಳಿಸಿ. ಈ ಯೋಧ ಭಂಗಿ ನಿಮ್ಮ ಕಾಲುಗಳು, ತೊಡೆಗಳು, ಬೆನ್ನು ಮತ್ತು ತೋಳುಗಳ ಮೇಲೆ ಕೆಲಸ ಮಾಡುತ್ತದೆ. ಇದು ಮಾತ್ರವಲ್ಲ, ರಕ್ತ ಪರಿಚಲನೆ ಸರಿಪಡಿಸಲು ಸಹ ಇದು ಸಹಾಯ ಮಾಡುತ್ತದೆ.

ಸೂರ್ಯ ನಮಸ್ಕಾರ್- ಸೂರ್ಯ ನಮಸ್ಕಾರ್ (Surya Namaskar) ಎಂದರೆ 'ಸೂರ್ಯನಿಗೆ ನಮಸ್ಕರಿಸುವುದು' ಅಥವಾ 'ನಮಸ್ಕರಿಸುವುದು'. ಇದು 12 ಯೋಗ ಭಂಗಿಗಳ ಸಂಯೋಜನೆಯನ್ನು ಹೊಂದಿರುತ್ತದೆ, ಇದು ದೇಹದ ವಿವಿಧ ಭಾಗಗಳನ್ನು ಕೇಂದ್ರೀಕರಿಸುತ್ತದೆ. ಇದರ ಈ ವಿಶೇಷತೆಯು ಇಡೀ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ದೇಹವನ್ನು ಸದೃಢವಾಗಿಡಲು ಸೂರ್ಯ ನಮಸ್ಕಾರ್ ಉತ್ತಮ ಮಾರ್ಗವಾಗಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಏಕೆಂದರೆ ಇದು ದೇಹದ ಸಾಧ್ಯವಿರುವ ಪ್ರತಿಯೊಂದು ಭಾಗವನ್ನು ವ್ಯಾಯಾಮ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ - ಶರೀರದ ಈ ಅಂಗಗಳನ್ನು ಸ್ವಚ್ಛವಾಗಿಡದಿದ್ದಲ್ಲಿ ರೋಗಗಳ ಅಪಾಯ ತಪ್ಪಿದ್ದಲ್ಲ

ಭುಜಂಗ್ ಆಸನ - ಭುಜಂಗ ಎಂದರೆ ನಾಗರಹಾವು ಮತ್ತು ಆಸನ ಎಂದರೆ ಭಂಗಿ. ನಾಗರಹಾವು ಹೆಡೆ ಎತ್ತಿ ನಿಲ್ಲುವ ಭಂಗಿಯನ್ನು ಭುಜಂಗಾಸನ (Bhujangasan) ಎಂದು ಹೇಳಲಾಗುತ್ತದೆ. ಮೊದಲನೆಯದಾಗಿ, ನಿಮ್ಮ ಹೊಟ್ಟೆಯ ಮೇಲೆ ಮಲಗಿಕೊಳ್ಳಿ. ಈಗ ನಿಮ್ಮ ಭುಜಗಳ ಕೆಳಗೆ ಹಸ್ತಗಳು ನೆಲಕ್ಕೆ ತಾಗುವಂತೆ ಇರಿಸಿ.  ಈ ಸಮಯದಲ್ಲಿ, ನಿಮ್ಮ ಎರಡು ಪಾದಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ಹಾಗೆಯೇ ಕಾಲುಗಳನ್ನು ನೇರವಾಗಿ ಮತ್ತು ಬಿಗಿಯಾಗಿ ಇರಿಸಿ. ಬಳಿಕ ನಿಧಾನವಾಗಿ ಉಸಿರು ತೆಗೆದುಕೊಳ್ಳುತ್ತಾ ದೇಹದ ಮುಂದಿನ ಭಾಗವನ್ನು ಹೊಕ್ಕುಳವರೆಗೆ ಮೇಲಕ್ಕೆತ್ತಿ. ಈ ಆಸನ ಮಾಡುವ ಮೂಲಕ ಕುತ್ತಿಗೆ, ಭುಜಗಳು, ಬೆನ್ನಿನ ಸ್ನಾಯುಗಳು, ಕೆಳಬೆನ್ನಿನ ಸ್ನಾಯುಗಳಿಗೆ ಅನುಕೂಲವಾಗುತ್ತದೆ.

ಪಾದಹಸ್ತಾಸನ - ನೀವು ಪಾದಹಸ್ತಾಸನಕ್ಕಾಗಿ ನೇರವಾಗಿ ನಿಲ್ಲಬೇಕು. ಬಳಿಕ ಮುಂದೆ ಬಾಗಿ ನಿಮ್ಮ ಕೈಗಳಿಂದ ನಿಮ್ಮ ಪಾದಗಳನ್ನು ಸ್ಪರ್ಶಿಸಿ. ನಿಮ್ಮ ಕೈಗಳನ್ನು ನಿಮ್ಮ ಕಾಲುಗಳ ಕೆಳಗೆ ಇರಿಸಲು ಪ್ರಯತ್ನಿಸಿ. ಕೆಲವು ಸೆಕೆಂಡುಗಳ ಕಾಲ ಈ ರೀತಿ ಇರಿ ಮತ್ತು ನಂತರ ಮೊದಲಿನ ಆಸನಕ್ಕೆ ಮರಳಿ. ಕೆಳಗೆ ಬಾಗುವುದರ ಮೂಲಕ, ಹೊಟ್ಟೆಯ ಮೇಲೆ ಒತ್ತಡವಿರುತ್ತದೆ, ಈ ಕಾರಣದಿಂದಾಗಿ ನಿಮ್ಮ ಹೊಟ್ಟೆಯು ಟೋನ್ ಆಗಿರುತ್ತದೆ. ಗೂನು ಬೆನ್ನಿನ ಸಮಸ್ಯೆ ನಿವಾರಣೆಗೆ ಇದು ಉತ್ತಮ ಆಸನ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ - Yoga: ಈ ದೇಶದಲ್ಲಿ 28 ವರ್ಷಗಳಿಂದ ಯೋಗ ಬ್ಯಾನ್, ಕಾರಣ ಏನ್ ಗೊತ್ತಾ

ಹಲಾಸನ - ನಿಮ್ಮ ಬೆನ್ನಿನ ಮೇಲೆ ನೇರವಾಗಿ ನೆಲದ ಮೇಲೆ ಮಲಗಿ ಮತ್ತು ನಿಮ್ಮ ಎರಡೂ ಕೈಗಳನ್ನು ತುಂಬಾ ಶಾಂತವಾದ ಭಂಗಿಯಲ್ಲಿ ನೆಲದ ಮೇಲೆ ನೇರವಾಗಿ ಇರಿಸಿ. ದೀರ್ಘ ಉಸಿರನ್ನು ತೆಗೆದುಕೊಂಡು, ಕಿಬ್ಬೊಟ್ಟೆಯ ಸ್ನಾಯುಗಳ ಸಹಾಯದಿಂದ ನಿಮ್ಮ ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ ಮತ್ತು ಎರಡೂ ಕಾಲುಗಳನ್ನು 90 ಡಿಗ್ರಿ ಕೋನದಲ್ಲಿ ನಿಲ್ಲುವಂತೆ ಮಾಡಿ. ಸಾಮಾನ್ಯವಾಗಿ ಉಸಿರಾಡುತ್ತಾ, ಕೈಗಳ ಸಹಾಯದಿಂದ ನಿಮ್ಮ ಸೊಂಟವನ್ನು ಮೇಲಕ್ಕೆತ್ತಿ ನೆಲದಿಂದ ಹಿಂತಿರುಗಿ. ಈಗ ನಿಮ್ಮ ಕಾಲುಗಳನ್ನು ತಲೆಯ ಹಿಂದಕ್ಕೆ ತೆಗೆದುಕೊಂಡು, ನಿಮ್ಮ ಕಾಲ್ಬೆರಳುಗಳು ನೆಲವನ್ನು ಮುಟ್ಟುವವರೆಗೆ 180 ಡಿಗ್ರಿ ಕೋನದಲ್ಲಿ ಬಾಗಿ. ಈ ಆಸನ ಮಾಡುವುದರಿಂದ ಮಧುಮೇಹ, ಜೀರ್ಣಕ್ರಿಯೆ, ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News