ಇಡೀ ವಿಶ್ವಾದ್ಯಂತ ಬಳಕೆಯಾಗಲಿದೆ ಭಾರತದ ಈ Corona Vaccine, ಸಿಕ್ತು WHO ಅನುಮತಿ

ವಿಶ್ವ ಆರೋಗ್ಯ ಸಂಸ್ಥೆ (WHO), ಅಸ್ಟ್ರಾಜೇನಿಕಾ (AstraZeneca)/ ಆಕ್ಸ್ಫರ್ಡ್ (Oxford)ನ ಕೊವಿಡ್ 19 ಲಸಿಕೆಯಾಗಿರುವ (Covid-19 Vaccine) ಎರಡು ಆವೃತ್ತಿಗಳಿಗೆ ವಿಶ್ವಾದ್ಯಂತ ತುರ್ತು ಬಳಕೆಗೆ (emergency use)ಅನುಮತಿ ನೀಡಿದೆ.

Written by - Nitin Tabib | Last Updated : Feb 16, 2021, 05:26 PM IST
  • ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವ್ಯಾಕ್ಸಿನ್ ತುರ್ತು ಬಳಕೆಗೆ WHO ಅನುಮೋದನೆ,
  • ನಾಲ್ಕು ವಾರಗಳ ಬಳಿಕ ದೊರೆತೆ ಈ ಅನುಮೋದನೆ.
  • ಇದಕ್ಕೂ ಮೊದಲು ಫೈಜರ್-ಬಯೋಂಟೆಕ್ ನ ಕೊವಿಡ್-19 ಲಸಿಕೆಗೆ ಅನುಮೋದನೆ ನೀಡಿತ್ತು WHO.
ಇಡೀ ವಿಶ್ವಾದ್ಯಂತ ಬಳಕೆಯಾಗಲಿದೆ ಭಾರತದ ಈ Corona Vaccine, ಸಿಕ್ತು WHO ಅನುಮತಿ title=
Made In India Corona Vaccine(File Photo)

ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆ (WHO), ಅಸ್ಟ್ರಾಜೇನಿಕಾ (AstraZeneca)/ ಆಕ್ಸ್ಫರ್ಡ್ (Oxford)ನ ಕೊವಿಡ್ 19 ಲಸಿಕೆಯಾಗಿರುವ (Covid-19 Vaccine) ಎರಡು ಆವೃತ್ತಿಗಳಿಗೆ ವಿಶ್ವಾದ್ಯಂತ ತುರ್ತು ಬಳಕೆಗೆ (emergency use)ಅನುಮತಿ ನೀಡಿದೆ. ಇದರಲ್ಲಿನ ಒಂದು ಒಂದು ಆವೃತ್ತಿಯನ್ನು Serum Institute Of India ಉತ್ಪಾದಿಸುತ್ತಿದೆ. ಇನ್ನೊಂದೆಡೆ ಎರಡನೇ ವ್ಯಾಕ್ಸಿನ್ AstraZeneca-SKBO ಅನ್ನು ರಿಪಬ್ಲಿಕ್ ಆಫ್ ಕೊರಿಯಾ (Republic of Korea) ಉತ್ಪಾದಿಸುತ್ತಿದೆ.  ಲಸಿಕೆಗೆ ದೊರೆತ ಈ  ಅನುಮೋದನೆ ಎಂದರೆ ಇದೀಗ ಇದನ್ನು ಕೋವಾಕ್ಸ್ ಅಭಿಯಾನದ ಅಡಿ ವಿಶ್ವಾದ್ಯಂತ ಬಳಸಬಹುದಾಗಿದೆ. ಅಲ್ಲದೆ, ವಿವಿಧ ದೇಶಗಳಲ್ಲಿ ಈ ಲಸಿಕೆಯ ಬಳಕೆಯನ್ನು ಅನುಮೋದಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಇದು ಸಹಕಾರಿಯಾಗಿದೆ.

ಇದನ್ನೂ ಓದಿ-  ಭಾರತಕ್ಕೆ ಥ್ಯಾಂಕ್ಸ್ ಹೇಳಿದ WHO ಮುಖ್ಯಸ್ಥ ಅಧಾನೊಮ್ ಘೆಬ್ರೆಯೆಸಸ್

WHO ಹೇಳಿದ್ದೇನು? WHO said this
ಈ ಕುರಿತು ಹೇಳಿಕೆ ನೀಡಿರುವ WHO ಸಹಾಯಕ ನಿರ್ದೇಶಕಿ (WHO's Assistant Director General) ಮಾರಿಯಾಂಗೊಲಾ ಸಿಮೊವೋ (Mariangela Simao), "ಇದುವರೆಗೆ ಲಸಿಕೆ ದೊರೆಯದ ದೇಶಗಳು, ಸಮಾನ ವ್ಯಾಕ್ಸಿನ್ ಹಂಚಿಕೆಗಾಗಿ ಆರಂಭಿಸಲಾಗಿರುವ 'ಕೊವ್ಯಾಕ್ಸ್ (Covacs) ಅಡಿ ತಮ್ಮ ಆರೋಗ್ಯ ಕಾರ್ಯಕರ್ತರಿಗೆ (Health Workers) ಹಾಗೂ ಜನಸಂಖ್ಯೆಗೆ ಲಸಿಕಾಕರಣ ಪ್ರಕ್ರಿಯೆ ಆರಂಭಿಸಬಹುದು. ಆದರೆ, ಪ್ರತಿಯೊಂದು ಸ್ಥಳಗಳಲ್ಲಿ ಆದ್ಯತೆಯ ಆಧಾರದ ಮೇಲೆ ನಾಗರಿಕರಿಗೆ ವ್ಯಾಕ್ಸಿನ್ ಲಭ್ಯವಾಗಬೇಕು ಎಂಬುದನ್ನು ಖಚಿತಪಡಿಸಲು ನಾವು ಪ್ರಯತ್ನಿಸಬೇಕು. ಇದಕ್ಕಾಗಿ ನಾವು ನಮ್ಮ  ಉತ್ಪಾದನಾ ಸಾಮರ್ಥ್ಯವನ್ನು (Manufacturing Capacity) ಹೆಚ್ಚಿಸಬೇಕು ಹಾಗೂ ವ್ಯಾಕ್ಸಿನ್ ತಯಾರಕರು ಶೀಘ್ರದಲ್ಲಿ ತಮ್ಮ ವ್ಯಾಕ್ಸಿನ್ ಅನ್ನು WHO ತಲುಪಿಸಬೇಕಾದ ಅಗತ್ಯತೆ ಇದೆ. ಏಕೆಂದರೆ ಅವುಗಳನ್ನು ಪರಿಶೀಲನೆಗೆ ಒಳಪಡಿಸಬೇಕು" ಎಂದು ಹೇಳಿದ್ದಾರೆ.

ಇದನ್ನೂ ಓದಿ-COVID-19 Vaccine : ಪ್ರಪಂಚವು ನೈತಿಕ ವೈಫಲ್ಯದಿಂದ ದುರಂತದ ಅಂಚಿನಲ್ಲಿದೆ - WHO

ನಾಲ್ಕು ವಾರಗಳ ತನಿಖೆಯ ಬಳಿಕ ಸಿಕ್ತು ಅನುಮೋದನೆ Approval received
ಅಸ್ಟ್ರಾಜೆನೆಕಾ (AstraZeneca) / ಆಕ್ಸ್‌ಫರ್ಡ್ (Oxford vaccines) ಲಸಿಕೆಗಳೆರಡರ ವಿಷಯದಲ್ಲಿ ಅವುಗಳಿಗೆ ಶೀತಲ ಸರಪಳಿಗಳ ಅವಶ್ಯಕತೆ, ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಕುರಿತಾದ ಮಾಹಿತಿ ಹಾಗೂ ಅಪಾಯ ನಿರ್ವಹಣೆಯಂತಹ (risk management) ವಿವಿಧ ಅಂಶಗಳ ಆಧಾರದ ಮೇಲೆ ತನಿಖೆಗೆ ಒಳಪಡಿಸಲಾಗಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು WHOಗೆ 4 ವಾರಗಳು ಕಾಲಾವಕಾಶ ತಗುಲಿದೆ. ಈ ಹಿಂದೆ, ತುರ್ತು ಬಳಕೆಗಾಗಿ ಫಿಜರ್-ಬಯೋನೋಟೆಕ್ ಕೋವಿಡ್ -19 ಲಸಿಕೆಯನ್ನು ಡಬ್ಲ್ಯುಎಚ್‌ಒ ಅನುಮೋದಿಸಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Good News : ದೇಶವಾಸಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಇನ್ನೂ 4 Corona vaccine

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News