ದೆಹಲಿ ತಲುಪಿದ Covaxin ಮೊದಲ ಬ್ಯಾಚ್, ಲಸಿಕೆ ಹಾಕಿಸಿಕೊಳ್ಳುವಾಗ ಆಯ್ಕೆ ಸಿಗಲಿದೆಯೇ ?

Covaxin Vs Covishield - ದೇಶಾದ್ಯಂತ ಲಸಿಕಾಕರಣ ಮಹಾ ಅಭಿಯಾನ ಆರಂಭಕ್ಕೂ ಮುನ್ನ ದೇಶದ ವಿವಿಧ ಭಾಗಗಳಲ್ಲಿ ಲಸಿಕೆ ತಲುಪಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಸಿರಮ್ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್ ಬಳಿಕ ಇದೀಗ ಭಾರತ ಬಯೋಟೆಕ್ ಲಸಿಕೆಯಾಗಿರುವ ಕೊವ್ಯಾಕ್ಸಿನ್ ನ ಮೊದಲ ಬ್ಯಾಚ್ ರಾಷ್ಟ್ರರಾಜಧಾನಿ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ತಲುಪಲು ಆರಂಭಗೊಂಡಿದೆ. 

Written by - Nitin Tabib | Last Updated : Jan 13, 2021, 12:34 PM IST
  • ರಾಷ್ಟ್ರರಾಜಧಾನಿ ತಲುಪಿದ Covaxin ಮೊದಲ ಬ್ಯಾಚ್
  • ಲಸಿಕೆ ಹಾಕಿಸಿಕೊಳ್ಳುವಾಗ ಜನರಿಗೆ ಆಯ್ಕೆ ಮಾಡುವ ಸ್ವಾತಂತ್ರ್ಯ ಸಿಗಲಿದೆಯೇ?
  • ತಜ್ಞರ ಅಭಿಮತ ಏನು ತಿಳಿದುಕೊಳ್ಳೋಣ ಬನ್ನಿ.
ದೆಹಲಿ ತಲುಪಿದ Covaxin ಮೊದಲ ಬ್ಯಾಚ್, ಲಸಿಕೆ ಹಾಕಿಸಿಕೊಳ್ಳುವಾಗ ಆಯ್ಕೆ ಸಿಗಲಿದೆಯೇ ? title=
Covaxin Vs Covishield (File Image)

Covaxin Vs Covishield - ದೇಶಾದ್ಯಂತ ಲಸಿಕಾಕರಣ ಮಹಾ ಅಭಿಯಾನ ಆರಂಭಕ್ಕೂ ಮುನ್ನ ದೇಶದ ವಿವಿಧ ಭಾಗಗಳಲ್ಲಿ ಲಸಿಕೆ ತಲುಪಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಸಿರಮ್ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್ ಬಳಿಕ ಇದೀಗ ಭಾರತ ಬಯೋಟೆಕ್ ಲಸಿಕೆಯಾಗಿರುವ ಕೊವ್ಯಾಕ್ಸಿನ್ ನ ಮೊದಲ ಬ್ಯಾಚ್ ರಾಷ್ಟ್ರರಾಜಧಾನಿ ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ತಲುಪಲು ಆರಂಭಗೊಂಡಿದೆ. ಇಂದು ಬೆಳಗ್ಗೆ ಹೈದ್ರಾಬಾದ್ ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಮೊದಲ ಲಸಿಕೆಯ ಬ್ಯಾಚ್ ದೆಹಲಿ ತಲುಪಿದೆ. 

ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆಯಾಗಿರುವ ಕೋವಿಶೀಲ್ಡ್ ಹಾಗೂ ಭಾರತ ಬಯೋಟೆಕ್ ಲಸಿಕೆಯಾಗಿರುವ ಕೊವ್ಯಾಕ್ಸಿನ್ (Covaxin) ತುರ್ತು ಬಳಕೆಗೆ ಔಷಧ ಮಹಾನಿರ್ದೇಶನಾಲಯ ಅನುಮತಿ ನೀಡಿರುವುದು ಇಲ್ಲಿ ಗಮನಾರ್ಹ. ಎಲ್ಲಕ್ಕಿಂತ ಮೊದಲು ಮಂಗಳವಾರ ಸಿರಮ್ ಇನ್ಸ್ಟಿಟ್ಯೂಟ್ ವ್ಯಾಕ್ಸಿನ್ ಡಿಲೆವರಿ ಕಾರ್ಯಕ್ಕೆ ಚಾಲನೆ ನೀಡಿದೆ. ದೇಶದ ಒಟ್ಟು 13 ಸ್ಥಳಗಳಲ್ಲಿ ನಾಲ್ಕು ಏರ್ಲೈನ್ಸ್ ವಿಮಾನಗಳ ಮೂಲಕ ವ್ಯಾಕ್ಸಿನ್ ತಲುಪಿಸಲಾಗಿದೆ. ಜನವರಿ 16 ರಂದು ವಿಶ್ವದ ಅತಿ ದೊಡ್ಡ ಲಸಿಕಾಕರಣ ಕಾರ್ಯಕ್ರಮಕ್ಕೆ ಭಾರತ ಚಾಲನೆ ನೀಡಲಿದೆ. 

ಇತ್ತೀಚೆಗಷ್ಟೇ ಈ ಲಸಿಕಾಕರಣ ಕಾರ್ಯಕ್ರಮಕ್ಕೆ ಸಂಬಂಧ ಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ಕೂಡ ನಡೆಸಿದ್ದಾರೆ. ಈ ವೇಳೆ ಅವರು ಮೊದಲ ಹಂತದ ಲಸೀಕಾಕರಣ ಕಾರ್ಯಕ್ರಮದಲ್ಲಿ ಒತ್ತು 3 ಕೋಟಿ ಆರೋಗ್ಯ ರಕ್ಷಕರು ಹಾಗೂ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದಾರೆ. ಆದರೆ, ಎರಡೆರಡು ವ್ಯಾಕ್ಸಿನ್ ಗಳ ಮೂಲಕ ಲಸಿಕಾಕರಣ ಆರಂಭವಾಗುತ್ತಿರುವ ಕಾರಣ ಜನರ ಮನದಲ್ಲಿ ಹಲವು ಪ್ರಶ್ನೆಗಳು ಮೂಡುತ್ತಿವೆ. ಈ ಎರಡೂ ವ್ಯಾಕ್ಸಿನ್ ಗಳಲ್ಲಿ ಯಾವ ಲಸಿಕೆ ಉತ್ತಮ ಹಾಗೂ ಲಸಿಕೆ ಹಾಕಿಸಿಕೊಳ್ಳುವಾಗ ಲಸಿಕೆ ಆಯ್ಕೆ ಮಾಡುವ ಸ್ವಾತಂತ್ರ್ಯ ಜನರಿಗೆ ಇರಲಿದೆಯೇ? ಇತ್ಯಾದಿ.

ಆಂಗ್ಲ ಮಾಧ್ಯಮದ ಮುಂಚೂಣಿಯಲ್ಲಿರುವ ವೃತ್ತಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಡೋಸಿಂಗ್ ಪ್ಯಾಟರ್ನ್ ಕುರಿತು ಒತ್ತಿ ಹೇಳಿರುವ ಕೇಂದ್ರ ಆರೋಗ್ಯ ಸಚಿವಾಲಯ ಲಸಿಕೆಯ ಎರಡು ಪ್ರಮಾಣಗಳ ನಡುವೆ ಒಟ್ಟು 28 ದಿನಗಳ ಅಂತರ ಇರಲಿದೆ ಎಂದು ಹೇಳಿದೆ. ಎರಡನೇ ಪ್ರಮಾಣ ತೆಗೆದುಕೊಂಡ 14 ದಿನಗಳ ಬಳಿಕ ಲಸಿಕೆಯ ಪ್ರಭಾವ ಕಾಣಲು ಸಿಗಲಿದೆ ಎಂದು ಹೇಳಿದೆ.

ಇದನ್ನು ಓದಿ- Corona Vaccine : ಮಹಾಮಾರಿಯ ವಿರುದ್ಧ ಮಹಾಸಮರಾಭ್ಯಾಸ, ಕರೋನಾ ವಿರುದ್ಧ ಕದನಕ್ಕೆ ಕ್ಷಣಗಣನೆ !

ಈ ಕುರಿತು ಹೇಳಿಕೆ ನೀಡಿರುವ ನೀತಿ ಆಯೋಗದ ಸದಸ್ಯರಾಗಿರುವ  (ಆರೋಗ್ಯ ವಿಭಾಗ) ಡಾ. ವಿ.ಕೆ.ಪಾಲ್ ಹಾಗೂ ಭೂಷಣ್ ಕೂಡ ಸುರಕ್ಷಿತ ನಡವಳಿಕೆ ಕಾಪಾಡಿಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಕಳೆದ ವಾರ ಭಾರತದಲ್ಲಿ ಸೋಂಕಿನ ಪ್ರಮಾಣ ಶೇ.2 ಕ್ಕಿಂತ ಕಡಿಮೆ ಇತ್ತು ಎಂದು ಅವರು ಹೇಳಿದ್ದಾರೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಮಾತ್ರ 50 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದರು.

ಇದನ್ನು ಓದಿ-CoronaVaccine : ಶೀಘ್ರ ಬರಲಿದೆ ಗೇಮ್ ಚೇಂಜರ್ ಸಿಂಗಲ್ ಡೋಸ್ ಕರೋನಾ ವ್ಯಾಕ್ಸಿನ್..! ಏನಿದರ ಸ್ಪೆಷ್ಯಾಲಿಟಿ..?

ಎರಡು ಲಸಿಕೆಗಳು
ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಪುಣೆ ಮೂಲದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಹೈದ್ರಾಬಾದ್ ಮೂಲಕ ಭಾರತ ಬಯೋಟೆಕ್ ಸಂಸ್ಥೆಗಳಲ್ಲಿ ಉತ್ಪಾದಿಸಲಾಗುತ್ತಿದೆ. ಜನವರಿ ಮೂರರಂದು ಔಷಧ ಮಹಾನಿರ್ದೇಶನಾಲಯ ಈ ಎರಡು ಲಸಿಕೆಗಳ ಸುರಕ್ಷತೆ ಮತ್ತು ಇಮ್ಯೂನೋಜೆನೆಸಿಟಿಯ ಆಧಾರದ ಮೇಲೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಎರಡೂ ಲಸಿಕೆಗಳನ್ನು ಸಾವಿರಾರು ಜನರ ಮೇಲೆ ಪರೀಕ್ಷೆ ಕೈಗೊಳ್ಳಲಾಗಿದ್ದು , ಎರಡೂ ಲಸಿಕೆಗಳು ಸುರಕ್ಷಿತವಾಗಿವೆ ಎಂದು ಡಾ. ಪಾಲ್ ಹೇಳಿದ್ದಾರೆ.  ಹೀಗಾಗಿ ಲಸಿಕಾಕರಣದ ಮೊದಲು ಹಾಗೂ ನಂತರ ಕೊರೊನಾ ವಿರುದ್ಧದ ನಮ್ಮ ವ್ಯವಹಾರ ಕಾಪಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದೂ ಕೂಡ ಅವರು ಹೇಳಿದ್ದಾರೆ.

ಲಸಿಕೆ ಆಯ್ದುಕೊಳ್ಳುವ ಸ್ವಾತಂತ್ರ್ಯ ಸಿಗಲಿದೆಯಾ?
ಪ್ರಸ್ತುತ ಎರಡು ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ದೊರೆತ ಕಾರಣ ಎರಡೂ ಲಸಿಕೆಗಳಲ್ಲಿ ಯಾವ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ಸ್ವಾತಂತ್ರ್ಯ ಜನರಿಗೆ ಸಿಗಲಿದೆಯೇ? ಎಂಬ ಪ್ರಶ್ನೆಗೆ ಮಂಗಳವಾರ ಉತ್ತರಿಸಿರುವ ಸರ್ಕಾರ ಈ ಆಯ್ಕೆಯ ಸ್ವಾತಂತ್ರ್ಯ ಜನರಿಗೆ ಇರುವುದಿಲ್ಲ ಎಂದು ಹೇಳಿದೆ. ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ವಿಭಾಗದ ಸಚಿವರು. "ವಿಶ್ವದ ಹಲವು ದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಲಸಿಕೆಗಳು ಬಳಕೆಯಾಗುತ್ತಿವೆ. ಆದರೆ ವರ್ತಮಾನದಲ್ಲಿ ಯಾವುದೇ ಒಂದು ದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳುವವರಿಗೆ ತಮ್ಮ ಆಯ್ಕೆಯನ್ನು ಹೇಳುವ ಅವಕಾಶ ನೀಡಲಾಗಿಲ್ಲ" ಎಂದಿದ್ದಾರೆ.

ಇದನ್ನು ಓದಿ- Bharat Biotech's Covaxin ಪ್ರತಿ ಡೋಸ್‌ ನ ಬೆಲೆ ಎಷ್ಟು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News