ಮನುಷ್ಯರಿಂದ ನಾಯಿಗೆ ಮಂಕಿಪಾಕ್ಸ್‌ ಹರಡುವ ಬಗ್ಗೆ ಡಬ್ಲ್ಯುಎಚ್‌ಒ ಎಚ್ಚರಿಕೆ

ಇನ್ನೇನು ಕರೋನಾವೈರಸ್ ಸಾಂಕ್ರಾಮಿಕದಿಂದ ಪಾರಾಗುತ್ತಿದ್ದೇವೆ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಷ್ಟರಲ್ಲಿ ವಿಶ್ವದೆಲ್ಲೆಡೆ ಮಂಕಿಪಾಕ್ಸ್‌ನ ಆತಂಕ ಹೆಚ್ಚಾಗಿದೆ. ಈ ಮಧ್ಯೆ, ಮಂಕಿಪಾಕ್ಸ್‌ನ ವಿಶಿಷ್ಟ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು  ಮನುಷ್ಯರಿಂದ ನಾಯಿಗೆ ಮಂಗನ ಕಾಯಿಲೆ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.   

Written by - Yashaswini V | Last Updated : Aug 18, 2022, 12:49 PM IST
  • ಮಂಕಿಪಾಕ್ಸ್ ಸೋಂಕು ಮನುಷ್ಯರಿಂದ ನಾಯಿಗೆ ಹರಡುವುದು ಗಂಭೀರ ಪ್ರಕರಣ
  • ಮಾನವನಿಂದ ನಾಯಿಗೆ ವೈರಸ್ ಹರಡುವ ಪ್ರಕರಣ ಬೆಳಕಿಗೆ ಬಂದ ನಂತರ ಡಬ್ಲ್ಯುಎಚ್‌ಒ ಎಚ್ಚರಿಕೆ
  • ಮಂಗನ ಕಾಯಿಲೆಯಿಂದ ಬಳಲುತ್ತಿರುವ ಜನರು ಪ್ರಾಣಿಗಳ ಸಂಪರ್ಕಕ್ಕೆ ಬರದಂತೆ ಡಬ್ಲ್ಯುಎಚ್‌ಒ ಸಲಹೆ
ಮನುಷ್ಯರಿಂದ ನಾಯಿಗೆ ಮಂಕಿಪಾಕ್ಸ್‌ ಹರಡುವ ಬಗ್ಗೆ ಡಬ್ಲ್ಯುಎಚ್‌ಒ ಎಚ್ಚರಿಕೆ  title=
Monkeypox

ಮಂಕಿಪಾಕ್ಸ್ ಪ್ರಕರಣಗಳ ಬಗ್ಗೆ ಡಬ್ಲ್ಯುಎಚ್‌ಒ ಎಚ್ಚರಿಕೆ: ವಿಶ್ವದಾದ್ಯಂತ ಮಂಗನ ಕಾಯಿಲೆಯ ಪ್ರಕರಣಗಳು ಹೆಚ್ಚಾಗುತ್ತಿದೆ. ಇದುವರೆಗೆ ಮಂಗನ ಕಾಯಿಲೆ ಸೋಂಕಿತ ರೋಗಿಗಳ ಸಂಖ್ಯೆ 35000 ಕ್ಕೆ ಏರಿದೆ. ಕಳೆದ ಒಂದು ವಾರದಲ್ಲಿ 7500 ಹೊಸ ರೋಗಿಗಳು ಪತ್ತೆಯಾಗಿದೆ. ಈ ನಡುವೆ ಮನುಷ್ಯರಿಂದ ನಾಯಿಗೆ ಮಂಗನ ಕಾಯಿಲೆ ಹರಡಿರುವ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. 

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ, ಮಾನವನಿಂದ ನಾಯಿಗೆ ಮೊದಲ ಬಾರಿಗೆ ಮಂಕಿಪಾಕ್ಸ್ ಸೋಂಕು ಹರಡಿರುವ ಬಗ್ಗೆ ವರದಿ ಆಗಿದೆ. ಇದು ವಿಶ್ವದ ಮೊದಲ ಅಪರೂಪದ ಪ್ರಕರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 

ಮಂಕಿಪಾಕ್ಸ್ ಸೋಂಕು ಮನುಷ್ಯರಿಂದ ನಾಯಿಗೆ ಹರಡುವುದು ಗಂಭೀರ ಪ್ರಕರಣ:
ಸುದ್ದಿ ಸಂಸ್ಥೆ ಎಎಫ್‌ಪಿ ಪ್ರಕಾರ, ಮಾನವನಿಂದ ನಾಯಿಗೆ ವೈರಸ್ ಹರಡುವ ಪ್ರಕರಣ ಬೆಳಕಿಗೆ ಬಂದ ನಂತರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ. ಮಂಗನ ಕಾಯಿಲೆಯಿಂದ ಬಳಲುತ್ತಿರುವ ಜನರು ಪ್ರಾಣಿಗಳ ಸಂಪರ್ಕಕ್ಕೆ ಬರದಂತೆ ಡಬ್ಲ್ಯುಎಚ್‌ಒ ಸಲಹೆ ನೀಡಿದೆ.

ಇದನ್ನೂ ಓದಿ- K Sudhakar : '60 ವರ್ಷ ಮೇಲ್ಪಟ್ಟವರು ಅತೀ ಬೇಗ 3ನೇ ಡೋಸ್, ಮಾಸ್ಕ್ ಕಡ್ಡಾಯ' 

ಮೆಡಿಕಲ್ ರಿಸರ್ಚ್ ಜನರಲ್ ಲ್ಯಾನ್ಸೆಟ್ ಕೂಡ ಈ ಪ್ರಕರಣದ ಬಗ್ಗೆ ವರದಿ ಪ್ರಕಟಿಸಿದೆ. ವಿಜ್ಞಾನಿಗಳ ಪ್ರಕಾರ, ಮಂಕಿಪಾಕ್ಸ್ ವಿವಿಧ ಜನಸಂಖ್ಯೆ ಮತ್ತು ಮನುಷ್ಯರಲ್ಲಿ ಪ್ರಾಣಿಗಳಿಗೆ ಹರಡಿದರೆ, ಅದು ವಿಭಿನ್ನವಾಗಿ ಅಭಿವೃದ್ಧಿ ಹೊಂದುವ ಮತ್ತು ವಿಭಿನ್ನವಾಗಿ ರೂಪಾಂತರಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ ಮತ್ತು ಇದು ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ತುರ್ತು ನಿರ್ದೇಶಕ ಮೈಕೆಲ್ ರಯಾನ್ ಪ್ರಕಾರ, ಇದು ಹೆಚ್ಚು ಅಪಾಯಕಾರಿ ಪರಿಸ್ಥಿತಿಯಾಗಿದೆ. ಆದಾಗ್ಯೂ, ಅದೇ ನಾಯಿಯಲ್ಲಿ ಅದೇ ಮನುಷ್ಯನಲ್ಲಿ ವೈರಸ್ ವೇಗವಾಗಿ ಬೆಳೆಯುವುದಿಲ್ಲ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಜನರು ಜಾಗೃತರಾಗಬೇಕು ಎಂದವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ- ಮಂಗನ ಕಾಯಿಲೆ ಭೀತಿಯ ನಡುವೆಯೇ ಹೊಸ ವೈರಸ್‌ ಪತ್ತೆ: ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬುಧವಾರ ಹೆಚ್ಚುತ್ತಿರುವ ಮಂಗನ ಕಾಯಿಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, 92 ದೇಶಗಳಲ್ಲಿ ಇದುವರೆಗೆ 35,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಮತ್ತು 12 ಜನರು ಈ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದವರು ತಿಳಿಸಿದ್ದಾರೆ.

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ವೈರಸ್‌ನ ರೂಪಾಂತರಗಳಿಗೆ ಹೆಸರುಗಳನ್ನು ಘೋಷಿಸಿತು. ವೈರಸ್‌ನ ರೂಪಾಂತರಗಳನ್ನು ಕ್ಲಾಡ್ I, ಕ್ಲಾಡ್ II ಎ ಮತ್ತು ಕ್ಲಾಡ್ II ಬಿ ಎಂದು ಹೆಸರಿಸಲಾಗಿದೆ, ಇದರಲ್ಲಿ II ಬಿ ಎಂಬುದು 2022 ರಲ್ಲಿ ಹರಡಿದ ರೂಪಾಂತರಗಳ ಗುಂಪಾಗಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News