ದೇಹದಲ್ಲಿ ಈ ಬದಲಾವಣೆ ಕಾಣಿಸಿಕೊಂಡರೆ ರಕ್ತದಲ್ಲಿ ಶುಗರ್ ಹೆಚ್ಚಾಗುತ್ತಿದೆ ಎಂದರ್ಥ

ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ, ರೋಗಿಯ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತವೆ. ಯಾವ ರೀತಿಯ ಬದಲಾವಣೆಗಳು ಬರಲು ಪ್ರಾರಂಭಿಸುತ್ತವೆ ಎಂಬುದನ್ನು ನೀವು ತಿಳಿದಿರಬೇಕು. 

Written by - Ranjitha R K | Last Updated : Jan 17, 2023, 01:01 PM IST
  • ಮಧುಮೇಹ ಎನ್ನುವುದು ಅಪಾಯಕಾರಿ ಕಾಯಿಲೆ
  • ಕಾಯಿಲೆ ಬಂದಾಗ ದೇಹ ನೀಡುತ್ತದೆ ಈ ಸಂಕೇತಗಳನ್ನು
  • ಬದಲಾವಣೆ ಕಂಡು ಹಿಡಿದರೆ ಅಪಾಯ ಕೂಡಾ ಕಡಿಮೆಯಾಗುತ್ತದೆ
ದೇಹದಲ್ಲಿ ಈ ಬದಲಾವಣೆ ಕಾಣಿಸಿಕೊಂಡರೆ ರಕ್ತದಲ್ಲಿ ಶುಗರ್ ಹೆಚ್ಚಾಗುತ್ತಿದೆ ಎಂದರ್ಥ title=

ಬೆಂಗಳೂರು : ನಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ಏರು ಪೇರಾದರೂ ದೇಹ ಮೊದಲೇ ಸೂಚನೆಯನ್ನು ನೀಡುತ್ತದೆ. ಅದನ್ನು ನಾವು ಅರ್ಥ ಮಾಡಿಕೊಂಡರೆ ಆಗುವ ಅನಾಹುತವನ್ನು ತಪ್ಪಿಸಬಹುದು. ಮಧುಮೇಹ ಕೂಡಾ ಹಾಗೆಯೇ. ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ, ರೋಗಿಯ ದೇಹದಲ್ಲಿ ಕೆಲವು ಬದಲಾವಣೆಗಳು ಕಂಡು ಬರುತ್ತವೆ. ಯಾವ ರೀತಿಯ ಬದಲಾವಣೆಗಳು ಬರಲು ಪ್ರಾರಂಭಿಸುತ್ತವೆ ಎಂಬುದನ್ನು ನೀವು ತಿಳಿದಿರಬೇಕು. ಈ ಬದಲಾವಣೆಗಳನ್ನು ತಿಳಿದುಕೊಂಡರೆ ಹೆಚ್ಚಿನ ಅಪಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬಹುದು. 

ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ದೇಹ ನೀಡುತ್ತದೆ ಈ ಸಂಕೇತ : 
ಪಾದಗಳಲ್ಲಿ ಕಂಡುಬರುವ ಲಕ್ಷಣ :  
ಮಧುಮೇಹ ಪಾದಗಳ ಮೇಲೆ ಎರಡು ರೀತಿಯಲ್ಲಿ ಪರಿಣಾಮ ಬೀರುತ್ತವೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ನರಮಂಡಲಕ್ಕೆ ಹಾನಿಯಾಗುತ್ತದೆ. ಇದರಿಂದ ರಕ್ತ ಪರಿಚಲನೆಯ ಮೇಲೆ ಕೂಡಾ ಪರಿಣಾಮ ಬೀರುತ್ತದೆ.  ರೋಗಿಯ ನರಮಂಡಲಕ್ಕೆ ಹಾನಿಯಾದಾಗ ಯಾವುದೇ ಸಂವೇದನೆ ತಿಳಿಯುವುದಿಲ್ಲ. ರಕ್ತ ಪರಿಚಲನೆಯಲ್ಲಿ ತೊಂದರೆಯಾದರೆ, ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುವುದಿಲ್ಲ. ಹೀಗಾದಾಗ ಸೋಂಕನ್ನು ಗುಣಪಡಿಸುವುದು ತುಂಬಾ ಕಷ್ಟಕರವಾಗುತ್ತದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ, ಅದು ಅಂಗಾಂಗಳನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. 

ಇದನ್ನೂ ಓದಿ : Winter Diet: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯಿಂದ ರೋಗಗಳಿಂದ ದೂರ ಉಳಿಯಬಹುದು

ಕಣ್ಣುಗಳಲ್ಲಿ ಬದಲಾವಣೆ :  
ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ಕಣ್ಣುಗಳ ರೆಟಿನಾದಲ್ಲಿನ ರಕ್ತನಾಳಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾದಾಗ ಕಣ್ಣುಗಳಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಉದಾಹರಣೆಗೆ ದೃಷ್ಟಿ ದುರ್ಬಲಗೊಳ್ಳುವುದು, ದೃಷ್ಟಿ ಮಂದವಾಗುವುದು, ಕಣ್ಣಿನ ಪೊರೆ ರೋಗ, ಗ್ಲುಕೋಮಾ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಲ್ಲದೆ, ರೆಟಿನೋಪತಿ ಅಪಾಯ ಕೂಡಾ ಎದುರಾಗಬಹುದು. ಇದು ರೆಟಿನಾಗೆ ಸಂಬಂಧಿಸಿದ ಕಾಯಿಲೆಯಾಗಿದೆ. ಈ ಕಾಯಿಲೆಗೆ ಚಿಕಿತ್ಸೆ ನೀಡದಿದ್ದರೆ,  ದೃಷ್ಟಿ ನಷ್ಟವಾಗುವ ಸಂಭವ ಕೂಡಾ ಇರುತ್ತದೆ.   
 
ಒಸಡುಗಳಲ್ಲಿ ನೋವು :  
ಸಕ್ಕರೆಯ ಮಟ್ಟವು ಹೆಚ್ಚಾದಾಗ, ಒಸಡು ರೋಗವೂ  ಕಾಣಿಸುತ್ತದೆ.  ಇದರಲ್ಲಿ, ರಕ್ತನಾಳಗಳು ಮುಚ್ಚಲ್ಪಡುತ್ತವೆ ಅಥವಾ ದಪ್ಪವಾಗುತ್ತವೆ. ಇದರಿಂದಾಗಿ ಒಸಡುಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಅಧಿಕ ರಕ್ತದ ಸಕ್ಕರೆಯಿಂದಾಗಿ, ಬಾಯಿಯಲ್ಲಿ ಬ್ಯಾಕ್ಟೀರಿಯಾವೂ ಬೆಳೆಯುತ್ತದೆ. 

ಇದನ್ನೂ ಓದಿ : Health Care Tips: ಚಳಿಗಾಲದಲ್ಲಿ ನಿಮ್ಮ ಈ ಅಭ್ಯಾಸ ಅಧಿಕ ರಕ್ತದೊತ್ತದಕ್ಕೆ ಕಾರಣವಾಗಬಹುದು... ಎಚ್ಚರ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News