ಬೆಂಗಳೂರಿಗರ ಮುಖದಲ್ಲಿ ಅರಳಲಿದೆ ನಗು

WeLittle Pediatric Dental Clinic: ಕಳೆದ ಕೆಲವು ವರ್ಷಗಳಿಂದ ಡಾ.ಶಿಫಾ ಅವರು ಮಕ್ಕಳ ದಂತ ವೈದ್ಯ ಚಿಕಿತ್ಸೆಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಕುರಿತು ಹೇಳುತ್ತ ಬಂದಿದ್ದಾರೆ ಮತ್ತು ಬಾಯಿಯ ಆರೋಗ್ಯ, ನಿದ್ರೆಯ ಸಮಸ್ಯೆ ಮತ್ತು ಮೆದುಳಿನ ಬೆಳವಣಿಗೆಗಳ ನಡುವೆ ಇರುವ ಸಂಬಂಧದ ಕುರಿತು ಬ್ಲಾಗ್‍ನಲ್ಲಿ ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅವರು ದಂತ ಆರೈಕೆಗೆ ಸಂಬಂಧಿಸಿ ಅನೇಕ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ತಡೆಗಟ್ಟಬಹುದಾದ ಮಕ್ಕಳ ದಂತವೈದ್ಯಕೀಯ ಸಮಸ್ಯೆ (ಪ್ರಿವೆಂಟಿವ್ ಪಿಡಿಯಾಟ್ರಿಕ್ ಡೆಂಟಿಸ್ಟ್ರಿ) ವಿಷಯದಲ್ಲಿ ಪ್ರಮುಖರಾಗಿದ್ದಾರೆ.

Written by - Yashaswini V | Last Updated : Apr 18, 2023, 08:30 AM IST
  • ದಂತ ವೈದ್ಯರ ಬಳಿ ಹೋಗುವುದು ಮಕ್ಕಳು ಮತ್ತು ಪೋಷಕರಿಗೆ ನೋವುಂಟು ಮಾಡುವ ಅನುಭವವಾಗಿದೆ.
  • ಆಸ್ಪತ್ರೆಯ ಶುಷ್ಕ ವಾತಾವರಣವು ಮಕ್ಕಳಲ್ಲಿ ಭಯವುಂಟುಮಾಡುತ್ತದೆ ಮತ್ತು ಅವರು ಅನಗತ್ಯವಾಗಿ ಒತ್ತಡಕ್ಕೆ ಸಿಲುಕುವಂತೆ ಮಾಡುತ್ತದೆ.
  • ಇಂತಹ ಆತಂಕದ, ಒತ್ತಡದ ಪರಿಸ್ಥಿತಿಯನ್ನು ಬದಲಿಸಲು ವಿನೂತನವಾಗಿ 4,000 ಚದರ ಅಡಿ ಒಳಾಂಗಣದಲ್ಲಿ ನಿರ್ಮಿಸಲಾಗಿರುವ ವಿನ್ಯಾಸವು ಮಕ್ಕಳು ಮತ್ತು ಪೋಷಕರಲ್ಲಿ ಸಂತಸದ ಅನುಭವ ನೀಡಲಿದೆ.
ಬೆಂಗಳೂರಿಗರ ಮುಖದಲ್ಲಿ ಅರಳಲಿದೆ ನಗು title=

WeLittle: ಕಳೆದ ಒಂಬತ್ತು ವರ್ಷಗಳಿಂದ ವಿ ಲಿಟಲ್, ಮಕ್ಕಳ ದಂತ ವೈದ್ಯಶಾಸ್ತ್ರದಲ್ಲಿ ನೋವುರಹಿತ ಚಿಕಿತ್ಸೆ ಎಂಬುದಕ್ಕೆ ಸಮಾನಾರ್ಥಕ ಪದವಾಗಿದ್ದು, ಮಕ್ಕಳು ಮತ್ತು ಅವರ ಪೋಷಕರ ಜೀವನದಲ್ಲಿ ನಗು ಅರಳಿಸುತ್ತಿದೆ. ಭಾರತದ ಮೊದಲ ಮಕ್ಕಳ ಪ್ರಿವೆಂಟಿವ್ ಪೀಡಿಯಾಟ್ರಿಕ್ ಡೆಂಟಿಸ್ಟ್ರಿ ಕ್ಲಿನಿಕ್ ಆಗಿರುವ ವಿ ಲಿಟಲ್, ಡಾ.ಶಿಫಾ ಅವರ ಕನಸಿನ ಕೂಸಾಗಿದ್ದು, 2012ರಿಂದಲೂ ಕೊಯಮತ್ತೂರಿನಲ್ಲಿ ನಗುವನ್ನು ಪಸರಿಸುತ್ತಿದೆ. ಈಗ ಅವರು ತಮ್ಮ ನೂತನ ದಂತ ವೈದ್ಯ ಕ್ಲಿನಿಕ್ ಅನ್ನು ರಾಜಧಾನಿ ಬೆಂಗಳೂರಿನ ಇಂದಿರಾನಗರದಲ್ಲಿ ಆರಂಭಿಸಿದ್ದಾರೆ.

ಇಂದಿರಾನಗರದಲ್ಲಿರುವ ವಿ ಲಿಟಲ್ ಅನ್ನು ಸಾನಿಯಾ ಮಿರ್ಜಾ, ಭಾರತೀಯ ಟೆನ್ನಿಸ್ ಆಟಗಾರ್ತಿ, ಭಾರತದ ಪ್ರೈಡ್ ಆಂಡ್ ಮಾಮ್ ಹಾಗೂ ಗುಂಜನ್ ಕೃಷ್ಣ, ಐಎಎಸ್, ಆಯುಕ್ತರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಡಾ.ಶಿಫಾ, ಪ್ರಿವೆಂಟಿವ್ ಪೀಡಿಯಾಟ್ರಿಕ್ ಡೆಂಟಿಸ್ಟ್ ಹಾಗೂ ಡೆಂಟಲ್ ಸ್ಲೀಪ್‍ನಲ್ಲಿ ಸೂಪರ್ ಸ್ಪೆಶಾಲಿಟಿಗಾಗಿ ಅಂತಾರಾಷ್ಟ್ರೀಯ ಗೋಲ್ಡ್ ಅವಾರ್ಡ್ ಪುರಸ್ಕೃತರು ಅದ್ಧೂರಿ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಸಾನಿಯಾ ಮಿರ್ಜಾ, "ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ದಂತ ಆರೈಕೆಯನ್ನು ಹುಡುಕುತ್ತಿರುವ ಪೋಷಕರಿಗೆ ವಿ ಲಿಟಲ್ ಉತ್ತಮ ಆಯ್ಕೆಯಾಗಿದೆ," ಎಂದು ಅವರು ಹೇಳಿದರು.

ಇದನ್ನೂ ಓದಿ- ನೀವೂ ಕೂಡ ಕೇವಲ ಟೇಸ್ಟ್ ನೋಡಿ ಟೂತ್‌ಪೇಸ್ಟ್ ಖರೀದಿಸುತ್ತೀರಾ?

ದಂತ ವೈದ್ಯರ ಬಳಿ ಹೋಗುವುದು ಮಕ್ಕಳು ಮತ್ತು ಪೋಷಕರಿಗೆ ನೋವುಂಟು ಮಾಡುವ ಅನುಭವವಾಗಿದೆ. ಆಸ್ಪತ್ರೆಯ ಶುಷ್ಕ ವಾತಾವರಣವು ಮಕ್ಕಳಲ್ಲಿ ಭಯವುಂಟುಮಾಡುತ್ತದೆ ಮತ್ತು ಅವರು ಅನಗತ್ಯವಾಗಿ ಒತ್ತಡಕ್ಕೆ ಸಿಲುಕುವಂತೆ ಮಾಡುತ್ತದೆ. ಇಂತಹ ಆತಂಕದ, ಒತ್ತಡದ ಪರಿಸ್ಥಿತಿಯನ್ನು ಬದಲಿಸಲು ವಿನೂತನವಾಗಿ 4,000 ಚದರ ಅಡಿ ಒಳಾಂಗಣದಲ್ಲಿ ನಿರ್ಮಿಸಲಾಗಿರುವ ವಿನ್ಯಾಸವು ಮಕ್ಕಳು ಮತ್ತು ಪೋಷಕರಲ್ಲಿ ಸಂತಸದ ಅನುಭವ ನೀಡಲಿದೆ. ಕ್ಲಿನಿಕ್‍ನಲ್ಲಿರುವ ಏರೋಪ್ಲೇನ್ ಸ್ಟಿಮ್ಯುಲೇಟರ್ ಮಕ್ಕಳ ಸಂಭ್ರಮಕ್ಕೆ ಹೊಸ ರೆಕ್ಕೆ ಮೂಡಿಸಲಿದೆ. ಈ ಅತ್ಯದ್ಭುತವಾದ ಆಟದ ಪ್ರದೇಶವು ಮಕ್ಕಳಿಗೆ ವಿನೋದಮಯ, ಸಾಹಸಮಯ ಅನುಭವವನ್ನು ನೀಡುತ್ತದೆ.  ಸ್ನೇಹಮಯಿ ವೈದ್ಯರು ಮತ್ತು ನಗುಮೊಗದ ವೈದ್ಯಕೀಯ ಸಿಬ್ಬಂದಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದರ ಜತೆಗೆ, ಅವರು ತಮ್ಮ ದಂತ ಸಮಸ್ಯೆಯನ್ನು ಸಕಾರಾತ್ಮಕ ರೀತಿಯಲ್ಲಿ ಪರಿಹರಿಸಿಕೊಳ್ಳಲು ಸಹಾಯ ಮಾಡುತ್ತಾರೆ.

ವಿ ಲಿಟಲ್, ದಂತ ಆರೈಕೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದ ಉಪಕರಣಗಳನ್ನು ಹೊಂದಿದೆ. ಹಲ್ಲಿನ ಹುಳುಕು, ಮುರಿದ ಅಥವಾ ಸಡಿಲವಾದ ಹಲ್ಲುಗಳ ಸಮಸ್ಯೆ, ಮಗುವಿನ ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು `ಸ್ಲೀಪ್ ಡೆಂಟಿಸ್ಟ್ರಿ’ ವಿಧಾನವನ್ನು ಅನುಸರಿಸುವ ಮೂಲಕ ತೀವ್ರತೆಯನ್ನು ಕಡಿಮೆ ಮಾಡುತ್ತಾರೆ. ಚಿಕಿತ್ಸೆ (ಓರಲ್ ಪ್ರೊಸೀಜರ್) ಸಂದರ್ಭದಲ್ಲಿ ಕಾಣಿಸಿಕೊಳ್ಳುವ ನೋವು ಮತ್ತು ಅಸೌಖ್ಯವನ್ನು ತರಬೇತಿ ಪಡೆದ ನುರಿತ ವೈದ್ಯರು ನಿರ್ವಹಿಸುತ್ತಾರೆ. ಇದಕ್ಕಾಗಿ ಅವರು ವರ್ಷಗಳಿಂದಲೂ ಅನುವಂಶೀಯ ಸಮಸ್ಯೆ ಎಂದೇ ಭಾವಿಸಲಾಗಿದ್ದ ಬಾಗಿದ ಹಲ್ಲುಗಳನ್ನು ಸರಿಪಡಿಸಲು ಉಸಿರಾಟ ಮತ್ತು ಸ್ನಾಯುಗಳನ್ನು ಬಲಗೊಳಿಸುವ ಮೈಫಂಕ್ಷನಲ್ ಥೆರಪಿಯಂತಹ ವಿಶಿಷ್ಟ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಡಾ.ಶಿಫಾ ಅವರು ಮಕ್ಕಳ ದಂತ ವೈದ್ಯ ಚಿಕಿತ್ಸೆಯಲ್ಲಿ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಕುರಿತು ಹೇಳುತ್ತ ಬಂದಿದ್ದಾರೆ ಮತ್ತು ಬಾಯಿಯ ಆರೋಗ್ಯ, ನಿದ್ರೆಯ ಸಮಸ್ಯೆ ಮತ್ತು ಮೆದುಳಿನ ಬೆಳವಣಿಗೆಗಳ ನಡುವೆ ಇರುವ ಸಂಬಂಧದ ಕುರಿತು ಬ್ಲಾಗ್‍ನಲ್ಲಿ ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ಅವರು ದಂತ ಆರೈಕೆಗೆ ಸಂಬಂಧಿಸಿ ಅನೇಕ ವೈದ್ಯಕೀಯ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ ಮತ್ತು ತಡೆಗಟ್ಟಬಹುದಾದ ಮಕ್ಕಳ ದಂತವೈದ್ಯಕೀಯ ಸಮಸ್ಯೆ (ಪ್ರಿವೆಂಟಿವ್ ಪಿಡಿಯಾಟ್ರಿಕ್ ಡೆಂಟಿಸ್ಟ್ರಿ) ವಿಷಯದಲ್ಲಿ ಪ್ರಮುಖರಾಗಿದ್ದಾರೆ.

ಇದನ್ನೂ ಓದಿ- ಬಾಯಿಗೆ ಸಂಬಂಧಿಸಿದ ಈ ಲಕ್ಷಣಗಳು ಕಂಡು ಬಂದರೆ ಹುಷಾರಾಗಿರಿ, ಇದು ಮಾರಣಾಂತಿಕವೂ ಆಗಿರಬಹುದು!

ಡಾ.ಶಿಫಾ ಅವರ ಪ್ರಕಾರ, 'ದಂತ ಆರೈಕೆಯ ಹಲವು ಸಮಸ್ಯೆಗಳು ಹಲ್ಲುಗಳ ಜೋಡಣೆಯಲ್ಲಿ ವ್ಯತ್ಯಾಸ, ನಾಲಗೆಯ ಒತ್ತಡ, ಮುಖದ ನಗು, ಮಾತು ಮತ್ತು ನಿದ್ರೆಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿವೆ. ದಂತ ನೈರ್ಮಲ್ಯ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಮೌಖಿಕ ನಿರ್ಬಂಧಗಳು, ಮೈಫಂಕ್ಷನಲ್ ಅಭ್ಯಾಸ ಕ್ರಮಗಳ ಮೂಲಕ ಅವುಗಳನ್ನು ಸರಿಪಡಿಸಬಹುದು.'

ಸಣ್ಣ ಸಂಗತಿಗಳು ಯಾವಾಗಲೂ ದೊಡ್ಡದಾಗಿರುತ್ತವೆ. ಕಡಿಮೆ ಸೌಲಭ್ಯ ಹೊಂದಿರುವ ಮಕ್ಕಳ ಮುಖದಲ್ಲಿ ಸಮಗ್ರ ಆರೋಗ್ಯ ಆರೈಕೆ ಪಡೆಯುವ ಮೂಲಕ ನಗು ಅರಳಿಸಲು ನಮ್ಮ ಉಪಕ್ರಮವಾದ ಬಿಗ್ ಹಾರ್ಟ್ ಫೌಂಡೇಷನ್‍ನೊಂದಿಗೆ ದೊಡ್ಡ ಬದಲಾವಣೆಗಳನ್ನು ತರಲು ನಾವು ಸಣ್ಣ ಹೆಜ್ಜೆಗಳನ್ನು ಇಡುತ್ತಿದ್ದೇವೆ. ಸಮಗ್ರ ಮೌಖಿಕ ಆರೋಗ್ಯ ಆರೈಕೆಯ ಅಗತ್ಯವಿರುವ ಮಕ್ಕಳು ಮತ್ತು ಅವರ ಕುಟುಂಬಗಳನ್ನು ಗುರುತಿಸಿ ಅವರು ಪಡೆಯಬಹುದಾದ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಪಡೆಯಲು ನೆರವಾಗಲು ಸಮಾನ ಮನಸ್ಕ ಸಮುದಾಯಗಳು ಅಥವಾ ಫೌಂಡೇಷನ್‍ಗಳ ಸಹಭಾಗಿತ್ವ ಪಡೆಯುವುದು ನಮ್ಮ ಫೌಂಡೇಶನ್ ಆಶಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ:
ವಿ ಲಿಟಲ್
ನಂ.557, ಮೊದಲ ಮಹಡಿ, 9ನೇ `ಎ’ ಮುಖ್ಯರಸ್ತೆ
ಮೊದಲ ಹಂತ, ಇಂದಿರಾನಗರ, ಬೆಂಗಳೂರು- 560038
ದೂರವಾಣಿ: 080 41151111
ಮೊಬೈಲ್: 90925 21112

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News