Weight Loss Drink: ತೂಕ ಕಳೆದುಕೊಂಡು ಫಿಟ್ ಆಗಿರಬೇಕಾದ್ರೆ ಈ ಪಾನೀಯ ಸೇವಿಸಿ

ತೂಕವನ್ನು ನಿಯಂತ್ರಿಸುವುದು ಪ್ರತಿಯೊಬ್ಬರಿಗೂ ದೊಡ್ಡ ಸವಾಲು. ಡಿಟಾಕ್ಸ್ ಪಾನೀಯಗಳನ್ನು ಸೇವಿಸುವ ಮೂಲಕ ನೀವು ತೂಕವನ್ನು ನಿಯಂತ್ರಿಸಬಹುದು. ಈ ಪಾನೀಯಗಳು ನಿಮಗೆ ಉತ್ತಮ ಆರೋಗ್ಯದ ಜೊತೆಗೆ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.

Written by - Puttaraj K Alur | Last Updated : Oct 26, 2022, 09:03 PM IST
  • ಸೇಬು ಮತ್ತು ಸೌತೆಕಾಯಿಯನ್ನು ಮಿಕ್ಸಿಯಲ್ಲಿ ರುಬ್ಬಿ ನಿಂಬೆ ರಸದೊಂದಿಗೆ ಸೇವಿಸಿರಿ
  • ಕ್ಯಾರೆಟ್ ಮತ್ತು ಅನಾನಸ್ ಮಿಶ್ರಣದಿಂದ ತಯಾರಿಸಿದ ಪಾನೀಯ ಸೇವಿಸಿದ್ರೆ ತೂಕ ನಷ್ಟವಾಗುತ್ತದೆ
  • ಎಳ ನೀರಿನ ಜೊತೆಗೆ ಪುದೀನಾ ಸೇರಿಸಿ ಜ್ಯೂಸ್ ಮಾಡಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು
Weight Loss Drink: ತೂಕ ಕಳೆದುಕೊಂಡು ಫಿಟ್ ಆಗಿರಬೇಕಾದ್ರೆ ಈ ಪಾನೀಯ ಸೇವಿಸಿ   title=
ತೂಕ ನಷ್ಟಕ್ಕೆ ಈ ಜ್ಯೂಸ್ ಸೇವಿಸಿರಿ

ನವದೆಹಲಿ: ಅನೇಕರು ತೂಕ ಇಳಿಸಿಕೊಳ್ಳಲು ವಿವಿಧ ರೀತಿಯಲ್ಲಿ ಸರ್ಕಸ್ ಮಾಡುತ್ತಾರೆ. ಡಯಟ್ ಮಾಡಲು ಪ್ರಯತ್ನಿಸಿದರೂ ಹಬ್ಬ ಹರಿದಿನಗಳ ಸಿಹಿ ತಿನಿಸುಗಳಿಂದ ಡಯಟಿಂಗ್‍ನ ಸಂಪೂರ್ಣ ಯೋಜನೆ ಹಾಳಾಗುತ್ತದೆ. ಇದರಿಂದ ತೂಕ ಹೆಚ್ಚಾಗುವುದು ಖಚಿತ. ಹಬ್ಬ-ಹರಿದಿನಗಳೆಂದರೆ ವಿವಿಧ ರೀತಿಯ ಆಹಾರ ಮತ್ತು ಪಾನೀಯಗಳ ಸಮಯ. ಆದರೆ ಈ ದಿನಗಳಲ್ಲಿ ನೀವು ಸೇವಿಸುವ ಆಹಾರವು ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ. ಅದರಲ್ಲೂ ದೀಪಾವಳಿಯಂದು ಎಣ್ಣೆ, ಮೈದಾ ಖಾದ್ಯಗಳನ್ನು ಹೆಚ್ಚು ತಿನ್ನುವುದರಿಂದ ಕೊಬ್ಬು ಬಹಳಷ್ಟು ಹೆಚ್ಚುತ್ತದೆ.

ನೀವು ತೂಕವನ್ನು ನಿಯಂತ್ರಿಸಲು ಬಯಸಿದರೆ ನಾವಿಲ್ಲಿ ಕೆಲವು ಮನೆಮದ್ದುಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಹಬ್ಬಗಳ ನಂತರ ನೀವು ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದರೆ ಈ ಕೆಲವು ಪಾನೀಯಗಳನ್ನು ತಯಾರಿಸಿ ಸೇವಿಸಬೇಕು. ನಿಮ್ಮ ಡಯಟ್ ಜೊತೆಗೆ ಈ ಪಾನೀಯಗಳು ತೂಕ ಕಳೆದುಕೊಳ್ಳಲು ನಿಮಗೆ ಸಹಕಾರಿಯಾಗಿವೆ.  

ಸೇಬು ಡಿಟಾಕ್ಸ್ ಪಾನೀಯ

ದೆಹದಲ್ಲಿನ ಕೊಬ್ಬನ್ನು ತೆಗೆದುಹಾಕಲು ನೀವು ಹಸಿರು ಸೇಬು ಪಾನೀಯವನ್ನು  ತಯಾರಿಸಿ ಸೇವಿಸಬಹುದು. ಅಜವಾನ, ಬಾಳೆಹಣ್ಣು, ಸೌತೆಕಾಯಿ ಮತ್ತು ಪುದೀನವನ್ನು ಸೇಬಿನೊಂದಿಗೆ ಬೆರೆಸಿ ಸೇಬು ಡಿಟಾಕ್ಸ್ ಪಾನೀಯವನ್ನು ತಯಾರಿಸಬೇಕು. ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಪುಡಿಮಾಡಿ ಮತ್ತು ಉತ್ತಮವಾಗಿ ಜ್ಯೂಸ್ ತಯಾರಿಸಿ. ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಫಿಲ್ಟರ್ ಮಾಡಿ, ಬಳಿಕ ಅದಕ್ಕೆ ನಿಂಬೆ ರಸ ಮತ್ತು ಕರಿಮೆಣಸಿನ ಪುಡಿ ಸೇರಿಸಬಹುದು. ರುಚಿಗೆ ತಕ್ಕಷ್ಟು ಕಪ್ಪು ಉಪ್ಪನ್ನು ಕೂಡ ಸೇರಿಸಿ ಸೇವಿಸಬಹುದು.

ಇದನ್ನೂ ಓದಿ: Cholesterol ಸೇರಿದಂತೆ ಇತರ ಕಾಯಿಲೆಗಳಿಗೆ ಬೈ ಬೈ ಹೇಳಲು ಇಂದಿನಿಂದಲೇ ಈ ಹಸಿರು ಪಾನೀಯ ಸೇವನೆ ಆರಂಭಿಸಿ

ನಿಂಬೆ ಡಿಟಾಕ್ಸ್ ಪಾನೀಯ

ನಿಂಬೆ ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ದೇಹವನ್ನು ನಿರ್ವಿಷಗೊಳಿಸಲು ಕೆಲಸ ಮಾಡುತ್ತದೆ. ನಿಂಬೆ ಡಿಟಾಕ್ಸ್ ಪಾನೀಯವನ್ನು ತಯಾರಿಸಲು ಸೇಬು ಮತ್ತು ಸೌತೆಕಾಯಿಯನ್ನು ಮಿಕ್ಸಿಯಲ್ಲಿ ನೀರು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ನುಣ್ಣಗೆ ರುಬ್ಬಿಕೊಂಡು ಜ್ಯೂಸ್ ಮಾಡಿ. ಪ್ರತಿದಿನ ಬೆಳಗ್ಗೆ ಈ ಜ್ಯೂಸ್ ಸೇವಿಸುವುದರಿಂದ ದೇಹದ ಹೆಚ್ಚುವರಿ ಕೊಬ್ಬಿನ ಸಮಸ್ಯೆ ನಿವಾರಣೆಯಾಗುತ್ತದೆ.

ಕ್ಯಾರೆಟ್ ಮತ್ತು ಅನಾನಸ್ ಪಾನೀಯ

ಕ್ಯಾರೆಟ್ ಮತ್ತು ಅನಾನಸ್ ಮಿಶ್ರಣದಿಂದ ಪಾನೀಯವನ್ನು ತಯಾರಿಸಬಹುದು. ಕ್ಯಾರೆಟ್ ಮತ್ತು ಅನಾನಸ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಬ್ಲೆಂಡರ್ನಲ್ಲಿ ಹಾಕಿ ಜ್ಯೂಸ್ ತಯಾರಿಸಿ. ಇದಕ್ಕೆ ಶುಂಠಿಯನ್ನೂ ಸೇರಿಸಿ. ಶುಂಠಿ, ಅನಾನಸ್ ಮತ್ತು ಕ್ಯಾರೆಟ್ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಎಳ ನೀರು (Coconut Water)

ಎಳ ನೀರಿನಲ್ಲಿ ಇರುವ ಗುಣಗಳು ಬೊಜ್ಜು ಹೋಗಲಾಡಿಸಲು ಕೆಲಸ ಮಾಡುತ್ತವೆ. ಪುದೀನಾ ಎಲೆಗಳ ರಸದೊಂದಿಗೆ ತೆಂಗಿನ ನೀರನ್ನು ಬೆರೆಸಿ ಜ್ಯೂಸ್ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಪಾನೀಯವನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ.

ಇದನ್ನೂ ಓದಿ: Tips For Men: ನಿತ್ಯ ಈ 1 ಕೆಲಸ ಮಾಡಿ 40ರ ಬಳಿಕವೂ ಪುರುಷರು ಯಂಗ್ ಹಾಗೂ ಫಿಟ್ ಆಗಿ ಕಾಣಿಸಿಕೊಳ್ಳಬಹುದು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News