ಗರ್ಭಿಣಿಯರ ಹೊಟ್ಟೆಯನ್ನು ಮುಟ್ಟುವುದು ಒಳ್ಳೆಯದಾ..? ತಜ್ಞರು ಹೀಗಂತಾರೆ..! 

Pregnancy health tips : ಗರ್ಭಿಣಿಯರ ಹೊಟ್ಟೆಯನ್ನು ಮುಟ್ಟಿ ಹಾರೈಸುವ ಪದ್ದತಿ ಇದೆ. ಆದ್ರೆ ಈ ವಿಧಾನ ಸರಿಯೇ..? ಎಂಬುವುದು ಹಲವರ ತಲೆಯಲ್ಲಿರುವ ಪ್ರಶ್ನೆ .. ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ..

Written by - Krishna N K | Last Updated : Feb 1, 2024, 04:06 PM IST
  • ಗರ್ಭಿಣಿ ಹೊಟ್ಟೆಯನ್ನು ಮುಟ್ಟುವ ವಿಚಾರದಲ್ಲಿ ಹಲವು ವಿಭಿನ್ನ ಅಭಿಪ್ರಾಯಗಳಿವೆ.
  • ಅನೇಕ ಗರ್ಭಿಣಿಯರು ತಮ್ಮ ಹೊಟ್ಟೆಯನ್ನು ಮುಟ್ಟಲು ಅನುಮತಿ ನೀಡುತ್ತಾರೆ.
  • ಹೊಟ್ಟೆಯನ್ನು ಮುಟ್ಟುವುದು ಎಂದರೆ ಮಹಿಳೆಯ ಅಂತರಂಗವನ್ನು ಸ್ಪರ್ಶಿಸಿದಂತೆ.
ಗರ್ಭಿಣಿಯರ ಹೊಟ್ಟೆಯನ್ನು ಮುಟ್ಟುವುದು ಒಳ್ಳೆಯದಾ..? ತಜ್ಞರು ಹೀಗಂತಾರೆ..!  title=

Health tips : ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈಯಕ್ತಿಕ ಅಭಿಪ್ರಾಯಗಳ ಆಧಾರದ ಮೇಲೆ ಗರ್ಭಿಣಿ ಹೊಟ್ಟೆಯನ್ನು ಮುಟ್ಟುವ ವಿಚಾರದಲ್ಲಿ ಹಲವು ವಿಭಿನ್ನ ಅಭಿಪ್ರಾಯಗಳಿವೆ. ಅನೇಕ ಗರ್ಭಿಣಿಯರು ತಮ್ಮ ಹೊಟ್ಟೆಯನ್ನು ಮುಟ್ಟಲು ಅನುಮತಿ ನೀಡುತ್ತಾರೆ. ಅಲ್ಲದೆ, ಮಗುವಿನ ಕ್ಷಣಗಳನ್ನು ತೋರಿಸಲು ಇಷ್ಟ ಪಡುತ್ತಾರೆ. ಆದರೆ ಕೆಲವರು ಇಂತಹ ವಿಷಯಗಳನ್ನು ಇಷ್ಟಪಡುವುದಿಲ್ಲ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಈ ವಿಷಯದ ಬಗ್ಗೆ ತಜ್ಞರು ಎರಡು ಗರ್ಭಿಣಿ ಮಹಿಳೆಯರ ವಿಭಿನ್ನ ದೃಷ್ಟಿಕೋನಗಳೊಂದಿಗೆ ಅಧ್ಯಯನ ಮಾಡಿದರು. ಆದರೆ ಅವರ ನಿರ್ಧಾರಗಳ ಪ್ರಕಾರ, ಅನುಮತಿಯಿಲ್ಲದೆ ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಸ್ಪರ್ಶಿಸುವುದು ಉತ್ತಮವಲ್ಲ. ಏಕೆಂದರೆ ಹೊಟ್ಟೆಯನ್ನು ಮುಟ್ಟುವುದು ಎಂದರೆ ಮಹಿಳೆಯ ಅಂತರಂಗವನ್ನು ಸ್ಪರ್ಶಿಸಿದಂತೆ. ಹಾಗಾಗಿ ಅವಳ ಒಪ್ಪಿಗೆಯಿಲ್ಲದೆ ಮುಟ್ಟುವುದು ಒಳ್ಳೆಯದಲ್ಲ.

ಇದನ್ನೂ ಓದಿ: ಎಣ್ಣೆ ಪ್ರಿಯರಿಗೆ ಮತ್ತೆ ಶಾಕ್ ಕೊಟ್ಟ ಸರ್ಕಾರ :ರಾಜ್ಯ ಬಜೆಟ್ ಹೊಸ್ತಿಲಲ್ಲೇ ದರ ಏರಿಕೆ 

ಅಲ್ಲದೆ, ಗರ್ಭಿಣಿಯ ಪತಿ, ಒಡಹುಟ್ಟಿದವರು, ಪೋಷಕರು, ಅವರು ಹತ್ತಿರವಿರುವ ವ್ಯಕ್ತಿಗಳ ಹೊರತು ಬೇರೆ ಯಾರೂ ಆಕೆಯ ಅನುಮತಿಯಿಲ್ಲದೆ ಆಕೆಯನ್ನು ಮುಟ್ಟಬಾರದು ಅಂತ ಹೇಳಲಾಗುತ್ತದೆ. ಪರಿಚಯಸ್ಥರು, ಸಹೋದ್ಯೋಗಿಗಳು ಇಲ್ಲವೇ ಅಪರಿಚಿತರು ಗರ್ಭಿಣಿಯರ ಹೊಟ್ಟೆಯನ್ನು ಮುಟ್ಟುವುದು ಸ್ವೀಕಾರಾರ್ಹವಲ್ಲ. 

ಏಕೆಂದರೆ ಅಪರಿಚಿತರು ಗರ್ಭಿಣಿಯ ಹೊಟ್ಟೆಯನ್ನು ಸ್ಪರ್ಶಿಸಿದರೆ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಗರ್ಭಿಣಿಯರ ಅನುಮತಿ ಇಲ್ಲದೆ ಎಂದಿರೂ ಅವರ ಹೊಟ್ಟೆಯನ್ನು ಮುಟ್ಟಬೇಡಿ.. ಅಲ್ಲದೆ, ಕೆಲವು ಕಾರಣಗಳಿಂದ ಯಾರಾದರೂ ಹೊಟ್ಟೆ ಮುಟ್ಟಲು ಬಯಸಿದರೆ, ಮೊದಲು ಅವರ ಅನುಮತಿಯನ್ನು ತೆಗೆದುಕೊಳ್ಳುವುದು ಉತ್ತಮವಂತೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News