Summer health tips : ಬೇಸಿಗೆಯಲ್ಲಿ ಅತಿಯಾದ ಬೆವರುವಿಕೆ, ನಿರ್ಜಲೀಕರಣ ಮತ್ತು ಶಾಖದಿಂದಾಗಿ ಚರ್ಮವು ಹೆಚ್ಚಾಗಿ ಕಪ್ಪಾಗುತ್ತದೆ. ಬೇಸಿಗೆ ಕಾಲದಲ್ಲಿ ತ್ವಚೆಯನ್ನು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ದದ್ದುಗಳು, ಸನ್ ಬರ್ನ್ಸ್, ಟ್ಯಾನಿಂಗ್, ಮೊಡವೆ, ಅಲರ್ಜಿಯಂತಹ ವಿವಿಧ ಪರಿಸ್ಥಿತಿಗಳು ರೂಪುಗೊಳ್ಳುತ್ತವೆ. ಇದರಿಂದ ಚರ್ಮರೋಗಗಳು ಉಂಟಾಗುತ್ತದೆ.
ಡರ್ಮಟಾಲಜಿಸ್ಟ್‌ಗಳು ಸಾಮಾನ್ಯವಾಗಿ ಸನ್‌ಸ್ಕ್ರೀನ್ ಅನ್ನು ಅನ್ವಯಿಸುವ ಬಗ್ಗೆ ಸಲಹೆ ನೀಡುತ್ತಾರೆ. ದೀರ್ಘಾವಧಿಯಲ್ಲಿಯೂ ಸಹ ಚರ್ಮದ ಸಮಸ್ಯೆಗಳನ್ನು ತಪ್ಪಿಸಲು ಬೇಸಿಗೆಯಲ್ಲಿ ಹೊಂದಿರುವ ಪ್ರಮುಖ ಅಭ್ಯಾಸಗಳಲ್ಲಿ ಉದು ಕೂಡ ಒಂದು. ಟ್ಯಾನಿಂಗ್, ಸನ್ ಬರ್ನ್ಸ್ ಮತ್ತು ಅಲರ್ಜಿಗಳಿಂದ ಮುಕ್ತವಾದ ಆರೋಗ್ಯಕರ ಚರ್ಮವನ್ನು ಹೊಂದಲು, ಕೆಳಗೆ ತಿಳಿಸಲಾದ ತಪ್ಪುಗಳನ್ನು ಮಾಡಬೇಡಿ.
ಇದನ್ನೂ ಓದಿ:ಈ ಕಾಯಿಲೆಯಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ಮರೆತೂ ಸೇವಿಸಬಾರದು!
ಅತೀಯಾಗಿ ಸನ್‌ಸ್ಕ್ರೀನ್ ಹಚ್ಚಬೇಡಿ : ಸೂರ್ಯನ ಹಾನಿಕಾರಕ UV ಕಿರಣಗಳಿಂದ ರಕ್ಷಣೆ ಪಡೆಯಲು ಜನರು ಸನ್‌ಸ್ಕ್ರೀನ್‌ಗಳ ಬಳಕೆ ಮಾಡುತ್ತಾರೆ. ಆದ್ರೆ, ಅತಿಯಾಗಿ ಸನ್ ಬಳಕೆಯಿಂದ ಚರ್ಮದ ಕ್ಯಾನ್ಸರ್ ಗುರಿಯಾಗುವ ಸಾಧ್ಯತೆ ಇರುತ್ತದೆ. ಪ್ರತಿ 2-3 ಗಂಟೆಗಳ ನಂತರ ನಿಮ್ಮ ಸನ್‌ಸ್ಕ್ರೀನ್ ಅನ್ನು ಪುನಃ ಅನ್ವಯಿಸಲು ಚರ್ಮರೋಗ ತಜ್ಞರು ಸಲಹೆ ನೀಡುತ್ತಾರೆ.
ಮಾಯಿಶ್ಚರೈಸಿಂಗ್ ಬಳಸದಿರುವುದು : ಬೇಸಿಗೆಯಲ್ಲಿ ಮಾಯಿಶ್ಚರೈಸಿಂಗ್ ಕ್ರೀಮ್ ಅನ್ನು ಬಳಸಬಾರದು ಅಂತ ಕೆಲವು ಜನರು ಹೇಳುತ್ತಾರೆ. ಅಲ್ಲದೆ, ಎಣ್ಣೆಯುಕ್ತ ಚರ್ಮ ಹೊಂದಿದ್ದರೂ ಸಹ, ಮಾಯಿಶ್ಚರೈಸರ್ ಹಚ್ಚುವುದು ಮುಖ್ಯ. ಏಕೆಂದರೆ ಇದು ಚರ್ಮದಲ್ಲಿ ನೀರಿನ ಅಂಶವನ್ನು ಲಾಕ್ ಮಾಡುತ್ತದೆ ಮತ್ತು ಮೃದುವಾಗಿರಿಸುತ್ತದೆ.
ಇದನ್ನೂಓದಿ: ಹೋಳಿ ಹಬ್ಬದಂದು ʼಕೆಮಿಕಲ್ ಮಿಶ್ರಿತ ಬಣ್ಣʼದಿಂದ ತ್ವಚೆ ರಕ್ಷಣೆ ಹೇಗೆ..! ಇಲ್ಲಿವೇ ನೋಡಿ ಟಿಪ್ಸ್
ಹೆಚ್ಚಾಗಿ ನೀರು ಕುಡಿಯದಿರುವುದು : ಬೇಸಿಗೆಯಲ್ಲಿ ಚರ್ಮವನ್ನು ಆರೋಗ್ಯಕರವಾಗಿಡಲು ನೀರು ಪ್ರಮುಖ ಅಂಶ. ಇದರ ಹೊರತಾಗಿ ಕಾಲೋಚಿತ ಹಣ್ಣುಗಳನ್ನು ತಿನ್ನುವುದು ಮತ್ತು ಪ್ರತಿದಿನ 2-3 ಲೀಟರ್ ನೀರನ್ನು ಕುಡಿಯುವುದು ನಿಮ್ಮನ್ನು ಹೈಡ್ರೀಕರಿಸಿದ ಮತ್ತು ಆರೋಗ್ಯಕರವಾಗಿರಿಸುತ್ತದೆ. ಹೆಚ್ಚಿನ ನೀರಿನಂಶವಿರುವ ಆಹಾರವನ್ನು ಸೇವಿಸುವುವುದು ಒಳ್ಳೆಯದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.