ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಈ ಎಲೆಗಳು..! ಆದರೆ ಹೀಗೆ ಬಳಸಿ

Natural Remedies for Diabetes: ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುವ ಎಲೆಗಳು ಮತ್ತು ಗಿಡಮೂಲಿಕೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮಧುಮೇಹ ನಿಯಂತ್ರಣಕ್ಕೆಗೆ ಸಹಾಯ ಮಾಡುತ್ತದೆ.

Written by - Savita M B | Last Updated : Nov 18, 2023, 02:02 PM IST
  • ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದೆ
  • ಮಧುಮೇಹಿಗಳು ಕೇವಲ ಔಷಧಗಳನ್ನು ತೆಗೆದುಕೊಳ್ಳದೆ ಆಹಾರದ ಬಗ್ಗೆ ಹೆಚ್ಚಿನ ಜಾಗರೂಕರಾಗಿರಬೇಕು.
  • ಮಧುಮೇಹಿಗಳು ಸೇವಿಸಬೇಕಾದ ಆರೋಗ್ಯಕರ ಎಲೆಗಳ ಬಗ್ಗೆ ಇಲ್ಲಿ ತಿಳಿಯೋಣ.
ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತವೆ ಈ ಎಲೆಗಳು..! ಆದರೆ ಹೀಗೆ ಬಳಸಿ  title=

Remedies for Diabetes: ಮಧುಮೇಹವು ದೀರ್ಘಕಾಲದ ಕಾಯಿಲೆಯಾಗಿದೆ. ಇದು ಟೈಪ್ 1 ಮತ್ತು ಟೈಪ್ 2 ಎಂಬ ಎರಡು ವಿಧಗಳನ್ನು ಹೊಂದಿದೆ. ಮಧುಮೇಹಿಗಳು ಕೇವಲ ಔಷಧಗಳನ್ನು ತೆಗೆದುಕೊಳ್ಳದೆ ಆಹಾರದ ಬಗ್ಗೆ ಹೆಚ್ಚಿನ ಜಾಗರೂಕರಾಗಿರಬೇಕು. 

ಹಾಗೆಯೇ ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುವ ಎಲೆಗಳು ಮತ್ತು ಗಿಡಮೂಲಿಕೆಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮಧುಮೇಹ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ.. ಹಾಗಾದರೆ  ಮಧುಮೇಹಿಗಳು ಸೇವಿಸಬೇಕಾದ ಆರೋಗ್ಯಕರ ಎಲೆಗಳ ಬಗ್ಗೆ ಇಲ್ಲಿ ತಿಳಿಯೋಣ.

ಇದನ್ನೂ ಓದಿ-Health Tips: ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಏನಾಗುತ್ತೆ ಗೊತ್ತಾ?

ಹಾಗಲಕಾಯಿ ಎಲೆಗಳು: ಹಾಗಲಕಾಯಿಯು ಮಧುಮೇಹ ನಿವಾರಕ ಗುಣಗಳಿಗೆ ಹೆಸರುವಾಸಿಯಾಗಿದ್ದು,.. ನಿಮ್ಮ ಆಹಾರದಲ್ಲಿ ಹಾಗಲ ಎಲೆಗಳನ್ನು ಸೇರಿಸುವುದು ಅಥವಾ ಅವುಗಳನ್ನು ಔಷಧಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

ಮೆಂತ್ಯ ಎಲೆಗಳು: ಮೆಂತ್ಯ ಎಲೆಗಳು ಅಥವಾ ಮೆಂತ್ಯದ ಸೊಪ್ಪಿನಲ್ಲಿರುವ ಕರಗುವ ನಾರುಗಳು ಇನ್ಸುಲಿನ್ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು ವಾರಕ್ಕೆರಡು ಬಾರಿ ಈ ಪಾಲಕ್ ಸೊಪ್ಪನ್ನು ಸೇವಿಸಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಕರಿಬೇವಿನ ಎಲೆಗಳು: ಕರಿಬೇವಿನ ಎಲೆಗಳು ಭಾರತೀಯ ಪಾಕಪದ್ಧತಿಯ ಪ್ರಧಾನ ಅಂಶವಾಗಿದೆ ಮತ್ತು ಸಾಂಪ್ರದಾಯಿಕವಾಗಿ ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಹೆಚ್ಚಿಸುವಲ್ಲಿ ಕರಿಬೇವಿನ ಎಲೆಗಳು ಪ್ರಮುಖ ಪಾತ್ರವಹಿಸುತ್ತವೆ. 

ಬೇವಿನ ಎಲೆಗಳು: ಆಯುರ್ವೇದ ಔಷಧದಲ್ಲಿ ಬೇವಿನ ಎಲೆಗಳನ್ನು ಪ್ರಮುಖ ಹೈಪೊಗ್ಲಿಸಿಮಿಕ್ ಏಜೆಂಟ್ ಎಂದು ಕರೆಯಲಾಗುತ್ತದೆ. ಬೇವಿನ ಸೊಪ್ಪಿನ ರಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವುದಲ್ಲದೆ ಹೊಟ್ಟೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ..

ಇದನ್ನೂ ಓದಿ-ಕೊಳಕು ಹಳದಿ ಹಲ್ಲುಗಳು ಮುತ್ತುಗಳಂತೆ ಹೊಳೆಯಲು ಇಲ್ಲಿವೆ ಬೆಸ್ಟ್ ಮನೆಮದ್ದುಗಳು

ತುಳಸಿ ಎಲೆಗಳು: ತುಳಸಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುವಲ್ಲಿ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಮಧುಮೇಹಿಗಳು ಪ್ರತಿದಿನ ತುಳಸಿ ಎಲೆಗಳನ್ನು ಜಗಿಯುತ್ತಿದ್ದರೆ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಕೊತ್ತಂಬರಿ ಸೊಪ್ಪು: ಕೊತ್ತಂಬರಿ ಸೊಪ್ಪು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ಅದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೊತ್ತಂಬರಿ ಎಲೆಯ ರಸವು ರಕ್ತದಲ್ಲಿನ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ, ವಿಶೇಷವಾಗಿ ಮಧುಮೇಹ ಇರುವವರಿಗೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News