Health Tips: ಎಚ್ಚರ! ನೀವು ಸೇವಿಸುವ ಈ ಆಹಾರಗಳು ಕುರುಡುತನ ತರಬಹುದು!

ದೃಷ್ಟಿ ನಷ್ಟವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ವಿನಾಶಕಾರಿ ಘಟನೆಗಳಲ್ಲಿ ಒಂದಾಗಿದೆ. ಕೆಲವು ಜನರಿಗೆ ಹುಟ್ಟಿನಿಂದಲೇ ಕುರುಡುತನ ಕಾಡುತ್ತಿದ್ದರೆ, ಇನ್ನೂ ಕೆಲವರಿಗೆ ಅನಾರೋಗ್ಯ ಅಥವಾ ಅಪಘಾತಗಳಿಂದ ಕಣ್ಣು ಕುರುಡಾಗಬಹುದು. 

Written by - Chetana Devarmani | Last Updated : May 23, 2022, 03:44 PM IST
  • ದೃಷ್ಟಿ ನಷ್ಟವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ವಿನಾಶಕಾರಿ ಘಟನೆಗಳಲ್ಲಿ ಒಂದಾಗಿದೆ
  • ನಾವು ಸೇವಿಸುವ ಆಹಾರ ಕೂಡ ಕುರುಡುತನಕ್ಕೆ ಕಾರಣವಾಗಬಹುದು
  • ದೃಷ್ಟಿ ನಷ್ಟಕ್ಕೆ ಯಾವೆಲ್ಲ ಆಹಾರಗಳು ಕಾರಣವಾಗಬಹುದು?
Health Tips: ಎಚ್ಚರ! ನೀವು ಸೇವಿಸುವ ಈ ಆಹಾರಗಳು ಕುರುಡುತನ ತರಬಹುದು!   title=
ಕಣ್ಣುಗಳು

ದೃಷ್ಟಿ ನಷ್ಟವು ವ್ಯಕ್ತಿಯ ಜೀವನದಲ್ಲಿ ಅತ್ಯಂತ ವಿನಾಶಕಾರಿ ಘಟನೆಗಳಲ್ಲಿ ಒಂದಾಗಿದೆ. ಕೆಲವು ಜನರಿಗೆ ಹುಟ್ಟಿನಿಂದಲೇ ಕುರುಡುತನ ಕಾಡುತ್ತಿದ್ದರೆ, ಇನ್ನೂ ಕೆಲವರಿಗೆ ಅನಾರೋಗ್ಯ ಅಥವಾ ಅಪಘಾತಗಳಿಂದ ಕಣ್ಣು ಕುರುಡಾಗಬಹುದು. ಆದರೆ ಕೆಲವು ತಜ್ಞರ ಪ್ರಕಾರ, ನಾವು ಸೇವಿಸುವ ಆಹಾರ ಕೂಡ ಕುರುಡುತನಕ್ಕೆ ಕಾರಣವಾಗಬಹುದು. ದೀರ್ಘಾವಧಿಯ ಪೊರೆ, ಅನಿಯಂತ್ರಿತ ಮಧುಮೇಹ ಅಥವಾ ಕಳಪೆ ಆಹಾರದ ಆಯ್ಕೆಗಳಿಂದ ಸಹ ದೃಷ್ಟಿ ದೋಷ ಉಂಟಾಗಬಹುದು. ಹೌದು, ವಿಚಿತ್ರವೆಂದರೆ ಕೆಲವು ಅನಾರೋಗ್ಯಕರ ಆಹಾರಗಳು ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದಂತೆ. ತಜ್ಞರ ಪ್ರಕಾರ, ಇದು ಸಕ್ಕರೆಯುಕ್ತ ಆಹಾರಗಳು ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಹೆಚ್ಚಿನ ಸೇವನೆಯಿಂದ ಪ್ರಚೋದಿಸಲ್ಪಡುತ್ತದೆ.

ಇದನ್ನೂ ಓದಿ: Health Tips: ಹಾಲಿನೊಂದಿಗೆ ಖರ್ಜೂರ ಬೆರೆಸಿ ಸೇವಿಸಿದರೆ ದಂಪತಿಗಳಿಗಿದೆ ಅನೇಕ ಲಾಭ

ದೃಷ್ಟಿ ನಷ್ಟಕ್ಕೆ ಆಹಾರ ಕಾರಣವಾಗಬಹುದೇ?

ಬ್ರೆಡ್, ಪಾಸ್ತಾ, ಕೆಚಪ್ ಮತ್ತು ಪಿಜ್ಜಾ ಪಾನೀಯಗಳು ದೃಷ್ಟಿ ನಷ್ಟಕ್ಕೆ ಹಾದಿ ತೋರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕಾರಣ ಇವು ನಿಮ್ಮಲ್ಲಿ ದೃಷ್ಟಿದೋಷವನ್ನು ತಂದೊಡ್ಡಬಹುದು. ರಕ್ತದಲ್ಲಿನ ಸಕ್ಕರೆಯ ಹೆಚ್ಚಳವು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ಗೆ ಕಾರಣವಾಗಬಹುದು. ಇದು ರೆಟಿನಾವನ್ನು ಹಾನಿಗೊಳಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಪರಿಣಾಮವಾಗಿ, ಇದು ಕುರುಡುತನವನ್ನು ಉಂಟುಮಾಡಬಹುದು ಎಂಬುದು ಹಲವರು ಅಭಿಪ್ರಾಯವಾಗಿದೆ.

ಅಸಹಜವಾಗಿ ರಕ್ತದಲ್ಲಿನ ಅಧಿಕ ಸಕ್ಕರೆಯ ಮಟ್ಟವು ಟೈಪ್-2 ಮಧುಮೇಹಕ್ಕೆ ಕಾರಣವಾಗಬಹುದು. ದೀರ್ಘಕಾಲದ ಅನಾರೋಗ್ಯಕರ ಜೀವನಶೈಲಿಯು ಇನ್ಸುಲಿನ್ ಪ್ರತಿರೋಧ, ಮೆಟಾಬಾಲಿಕ್ ಸಿಂಡ್ರೋಮ್, ತೂಕ ಹೆಚ್ಚಾಗುವುದು ಮತ್ತು ಡಯಾಬಿಟಿಕ್ ರೆಟಿನೋಪತಿಯ ತೀವ್ರ ಸಂದರ್ಭಗಳಲ್ಲಿ ಕಣ್ಣುಗಳಿಗೆ ಹಾನಿಯುಂಟು ಮಾಡಬಹುದು. 

ಇದನ್ನೂ ಓದಿ: Curd Benefits: ಬೇಸಿಗೆಯಲ್ಲಿ ಮೊಸರು ತಿನ್ನುವುದರಿಂದ ಈ ಅಪಾಯವನ್ನು ತಪ್ಪಿಸಬಹುದು!

ಸಂಸ್ಕರಿಸಿದ ಮಾಂಸ, ಉಪ್ಪು, ಕೆಫೀನ್ ಯುಕ್ತ ಆಹಾರಗಳು ಸಹ ಕಣ್ಣಿಗೆ ಹಾನಿಯನ್ನು ತಂದೊಡ್ಡಬಹುದು. ಉಪ್ಪು ಮತ್ತು ಕೆಫೀನ್ ಅಧಿಕವಾಗಿ ಸೇವಿಸಿದಾಗ ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆದ್ದರಿಂದ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಇದರಿಂದಾಗಿ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಅನೇಕ ತಜ್ಷರು ಅಭಿಪ್ರಾಯ ಪಡುತ್ತಾರೆ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News