ಬಟ್ಟೆ ಧರಿಸದೇ ಮಲಗುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ!

Benefits of Sleeping without clothes: ರಾತ್ರಿ ಮಲಗುವಾಗ ಜನರು ಸಾಮಾನ್ಯವಾಗಿ ಸಡಿಲವಾದ ಪೈಜಾಮಾ ಮತ್ತು ಟಿ-ಶರ್ಟ್‌ ಹೀಗೆ ಆರಾಮದಾಯಕ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. 

Written by - Chetana Devarmani | Last Updated : Jan 24, 2025, 04:56 PM IST
  • ಬಟ್ಟೆ ಧರಿಸದೇ ಮಲಗುವುದರ ಪ್ರಯೋಜನ
  • ಬಟ್ಟೆ ಧರಿಸದೇ ಮಲಗಬಹದೇ?
  • ಬಟ್ಟೆ ಧರಿಸದೇ ಮಲಗಿದರೆ ಏನಾಗುತ್ತದೆ?
ಬಟ್ಟೆ ಧರಿಸದೇ ಮಲಗುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ!  title=

Benefits of Sleeping without clothes: ರಾತ್ರಿ ಮಲಗುವಾಗ ಜನರು ಸಾಮಾನ್ಯವಾಗಿ ಸಡಿಲವಾದ ಪೈಜಾಮಾ ಮತ್ತು ಟಿ-ಶರ್ಟ್‌ ಹೀಗೆ ಆರಾಮದಾಯಕ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಬಟ್ಟೆ ಹಾಕದೆಯೇ ಬೆತ್ತಲಾಗಿ ಮಲಗುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ದೊರೆಯುತ್ತವೆ ಎಂದು ನಿಮಗೆ ತಿಳಿದಿದೆಯೇ.   

ಬಟ್ಟೆ ಇಲ್ಲದೆ ಮಲಗುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ದೇಹದಲ್ಲಿ ಆಕ್ಸಿಟೋಸಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ನಿಮ್ಮ ದೇಹವನ್ನು ತಂಪಾಗಿರಿಸುತ್ತದೆ. ಇದು ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.

ಯುಎಸ್ ಸಿಡಿಸಿ ಪ್ರಕಾರ, ನಿದ್ರೆಯ ಕೊರತೆಯು ಹೃದಯ ಕಾಯಿಲೆ ಮತ್ತು ಮಧುಮೇಹ ಸೇರಿದಂತೆ ಇತರ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನೀವು ಬಟ್ಟೆ ಇಲ್ಲದೆ ಮಲಗಿದರೆ, ನೀವು ಹೆಚ್ಚು ಸಮಯದವರೆಗೆ ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತದೆ. ಇದು ಹೃದ್ರೋಗ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಸುದೀಪ್ ಅಳಿಯ ಸಂಚಿ ಸಿನಿಮಾಗೆ ಅದ್ದೂರಿ ಮುಹೂರ್ತ, ಕಿಚ್ಚನ ಇಡೀ ಕುಟುಂಬ ಸಾಥ್

ರಾತ್ರಿಯ ನಿದ್ರೆ ಸರಿಯಾಗಿ ಆಗದಿದ್ದರೆ ತೂಕ ಹೆಚ್ಚಾಗಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ಬಟ್ಟೆ ಇಲ್ಲದೆ ಮಲಗಿದರೆ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ತೂಕ ಹೆಚ್ಚಾಗುವುದಿಲ್ಲ. ಇದಲ್ಲದೆ, ಬಟ್ಟೆ ಇಲ್ಲದೆ ಮಲಗುವುದರಿಂದ ನಿಮ್ಮ ದೇಹವು ತಂಪಾಗಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್‌ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ ಪ್ರಮಾಣವನ್ನು ಹೆಚ್ಚಿಸುವುದರಿಂದ ಬೊಜ್ಜು ಮತ್ತು ಮಧುಮೇಹದ ಅಪಾಯವೂ ಕಡಿಮೆಯಾಗುತ್ತದೆ.

ಬಿಗಿಯಾದ ಒಳ ಉಡುಪು ಧರಿಸುವುದರಿಂದ ನೀವು ಬೆವರುತ್ತಿದ್ದರೆ ಇದು ವೆಜೆನಲ್‌ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಒಳ ಉಡುಪುಗಳನ್ನು ಬದಲಾಯಿಸದಿದ್ದರೆ ಇಂತಹ ಸೋಂಕಿಗೆ ತುತ್ತಾಗಬಹುದು. ಬಟ್ಟೆ ಇಲ್ಲದೆ ಮಲಗುವುದರಿಂದ ಈ ರೀತಿಯ ಸೋಂಕನ್ನು ತಡೆಯುತ್ತದೆ ಮತ್ತು ಯೋನಿಯನ್ನು ಆರೋಗ್ಯಕರವಾಗಿರಿಸುತ್ತದೆ.
ಪುರುಷ ಫಲವತ್ತತೆಯನ್ನು ಹೆಚ್ಚಿಸುತ್ತದೆ

ಪುರುಷರು ಬಟ್ಟೆ ಇಲ್ಲದೆ ಮಲಗುವುದರಿಂದಲೂ ಪ್ರಯೋಜನ ಪಡೆಯಬಹುದು. ಇತ್ತೀಚಿನ ಸಂಶೋಧನೆಯೊಂದು ಬಿಗಿಯಾದ ಒಳ ಉಡುಪು ಮತ್ತು ಕಡಿಮೆ ವೀರ್ಯಾಣುಗಳ ಸಂಖ್ಯೆಗೆ ಆಳವಾದ ಸಂಬಂಧವಿದೆ ಎಂದು ಬಹಿರಂಗಪಡಿಸಿದೆ. ಸಂಶೋಧನೆಯಲ್ಲಿ ಸೇರಿಸಲಾದ 656 ಪುರುಷರಲ್ಲಿ, ಬಾಕ್ಸರ್‌ಗಳನ್ನು ಧರಿಸಿದವರಲ್ಲಿ ಬಿಗಿಯಾದ ಒಳ ಉಡುಪು ಧರಿಸಿದವರಿಗಿಂತ ಹೆಚ್ಚಿನ ವೀರ್ಯಾಣುಗಳ ಸಂಖ್ಯೆ ಇತ್ತು. ಹೀಗಾಗಿ ಬಟ್ಟೆ ಇಲ್ಲದೇ ಮಲಗುವುದು ಆರೋಗ್ಯಕ್ಕೆ ಸಾಕಷ್ಟು  ಪ್ರಯೋಜನಗಳನ್ನು ನೀಡುತ್ತದೆ. 

ಇದನ್ನೂ ಓದಿ: ಯಪ್ಪೋ ಎನ್‌ ಮಸ್ತ್‌ ಅದಾಳೋ ಈಕೆ..! ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗನ ತಂಗಿ ಫೋಟೋಸ್‌ ವೈರಲ್

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News