Side Effects : ಮೊಟ್ಟೆಯ ಜೊತೆಗೆ ಈ ಆಹಾರಗಳನ್ನ ಅಪ್ಪಿತಪ್ಪಿಯೂ ಸೇವಿಸಬೇಡಿ! ಯಾಕೆ ಇಲ್ಲಿ ಓದಿ

ಬಾಳೆಹಣ್ಣು ತಿಂದ ನಂತರ ಎಂದಿಗೂ ಮೊಟ್ಟೆಯನ್ನು ಸೇವಿಸಬಾರದು

Last Updated : Jun 6, 2021, 05:09 PM IST
  • ಮೊಟ್ಟೆಯನ್ನು ನಾವು ಅನೇಕ ರೀತಿಯಲ್ಲಿ ಬಳಸುತ್ತೇವೆ
  • ಮೊಟ್ಟೆಯಲ್ಲಿ ಕೊಲಿನ್ ಅಂಶವಿದ್ದು, ಇದು ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ
  • ಬಾಳೆಹಣ್ಣು ತಿಂದ ನಂತರ ಎಂದಿಗೂ ಮೊಟ್ಟೆಯನ್ನು ಸೇವಿಸಬಾರದು
 Side Effects : ಮೊಟ್ಟೆಯ ಜೊತೆಗೆ ಈ ಆಹಾರಗಳನ್ನ ಅಪ್ಪಿತಪ್ಪಿಯೂ ಸೇವಿಸಬೇಡಿ! ಯಾಕೆ ಇಲ್ಲಿ ಓದಿ title=

ಮೊಟ್ಟೆಯನ್ನು ನಾವು ಅನೇಕ ರೀತಿಯಲ್ಲಿ ಬಳಸುತ್ತೇವೆ, ಉದಾಹರಣೆಗೆ ಕೆಲವೊಮ್ಮೆ ಮೊಟ್ಟೆಯ ಅಮ್ಲೆಟ್ ಗಳನ್ನು ತಯಾರಿಸುವುದು, ಕೆಲವೊಮ್ಮೆ ಬೇಯಿಸಿದ ಮೊಟ್ಟೆ ಅಥವಾ ಮೊಟ್ಟೆ ಪಲ್ಯವಾಗಿ ತಿನ್ನುವುದೂ ಉಂಟು. ಪೋಷಕಾಂಶಭರಿತ ಮೊಟ್ಟೆಗಳು ಪ್ರೋಟೀನ್ ಯುಕ್ತವಾಗಿದ್ದು ದೇಹಕ್ಕೆ ಶಕ್ತಿಯನ್ನು ನೀಡುತ್ತವೆ. ಮೊಟ್ಟೆ ಅನೇಕ ರೋಗಗಳನ್ನು ದೂರ ವಿರಿಸುವುದು ಮಾತ್ರವಲ್ಲ, ನಮ್ಮ ಆರೋಗ್ಯಕ್ಕೂ ನೆರವಾಗುತ್ತದೆ. ಮೊಟ್ಟೆಯಲ್ಲಿ ಕೊಲಿನ್ ಅಂಶವಿದ್ದು, ಇದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೆದುಳನ್ನು ಚಟುವಟಿಕೆಯಿಂದ ಇರಿಸುತ್ತದೆ. ಜೊತೆಗೆ ಮೊಟ್ಟೆಯಲ್ಲಿರುವ ವಿಟಮಿನ್ ಬಿ-12 ಒತ್ತಡವನ್ನು ದೂರ ಮಾಡುತ್ತದೆ.

ಅಂಡಾಣುವು ಆಂಟಿ ಆಕ್ಸಿಡೆಂಟ್ ಗಳನ್ನು ಹೊಂದಿದ್ದು, ಇದು ರೆಟಿನಾವನ್ನು ಬಲಪಡಿಸುತ್ತದೆ, ಇದು ಕಣ್ಣಿನ ಪೊರೆಯ ಅಪಾಯವನ್ನು ಉಂಟುಮಾಡುವುದಿಲ್ಲ. ನಾವೆಲ್ಲರೂ ಇಂತಹ ಪ್ರಯೋಜನಕಾರಿಯಾದ ಮೊಟ್ಟೆ(Eggs)ಯನ್ನು ತಿನ್ನಬೇಕೆಂದು ಬಯಸುತ್ತೇವೆ, ಆದರೆ ನಮಗೆ ಹೇಗೆ ತಿನ್ನಬೇಕು ಎಂದು ತಿಳಿದಿಲ್ಲ. ಮೊಟ್ಟೆಯೊಂದಿಗೆ ಕೆಲವು ವಸ್ತುಗಳನ್ನು ಬಳಸುವುದರಿಂದ ಹಲವಾರು ರೋಗಗಳನ್ನು ಆಹ್ವಾನಿಸುತ್ತೇವೆ. ಮೊಟ್ಟೆ ಮತ್ತು ಆರೋಗ್ಯಕ್ಕೆ ಹಾನಿಕರ ವಾಗಿರುವ ಆಹಾರಗಳ ಬಗ್ಗೆ ತಿಳಿಯೋಣ.

ಇದನ್ನೂ ಓದಿ : ಹೀಗೆ ಮಾಡಿ.! ಫ್ರಿಜ್ ಇಲ್ಲದಿದ್ದರೂ ಟೊಮ್ಯಾಟೋ, ದನಿಯಾ, ಪುದಿನ ಫ್ರೆಶ್ ಇರುತ್ತದೆ.

ಮೊಟ್ಟೆ ಜೊತೆ ನಿಂಬೆ ಸೇವನೆ ಬೇಡ : ಕೆಲವರು ಮೊಟ್ಟೆಯೊಂದಿಗೆ ನಿಂಬೆಯನ್ನು ಪ್ರಯೋಗ ಮಾಡುತ್ತಾರೆ, ಇದು ಸಂಪೂರ್ಣ ತಪ್ಪು. ಬೇಯಿಸಿದ ಮೊಟ್ಟೆಯೊಂದಿಗೆ ನಿಂಬೆ(Lemon)ಯ ಬಳಕೆ ನಮ್ಮ ರಕ್ತನಾಳಗಳಿಗೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು.

ಇದನ್ನೂ ಓದಿ : Green Tea : ಕೊರೋನಾ ವಿರುದ್ಧ ಹೋರಾಡಲು ಗ್ರೀನ್‌ ಟೀ : ಸಂಶೋಧನೆಯಿಂದ ಮಾಹಿತಿ ಬಹಿರಂಗ!

ಮೊಟ್ಟೆ ಜೊತೆ ಬಾಳೆಹಣ್ಣು ಸೇವನೆ : ಬಾಳೆಹಣ್ಣು(Banana) ತಿಂದ ನಂತರ ಎಂದಿಗೂ ಮೊಟ್ಟೆಯನ್ನು ಸೇವಿಸಬಾರದು, ಇದು ಮಲಬದ್ಧತೆ, ಗ್ಯಾಸ್ ಮತ್ತು ಕರುಳಿನ ತೊಂದರೆಗಳನ್ನು ಉಂಟುಮಾಡಬಹುದು.

ಇದನ್ನೂ ಓದಿ : Health benefits of capsicum : ದೊಣ್ಣೆ ಮೆಣಸಿನಕಾಯಿ ಯಾಕೆ ತಿನ್ನಬೇಕು..? ಇಲ್ಲಿದೆ ನಾಲ್ಕು ಕಾರಣ

ಮೊಟ್ಟೆ ಮತ್ತು ಚೀಸ್ : ಮೊಟ್ಟೆಯನ್ನು ಸೇವಿಸಿದ ತಕ್ಷಣ ಚೀಸ್(Cheese) ಸೇವಿಸಬಾರದು, ಏಕೆಂದರೆ ಮೊಟ್ಟೆ ಮತ್ತು ಚೀಸ್ ಎರಡರಲ್ಲೂ ಪ್ರೋಟೀನ್ ಗಳು ಹೇರಳವಾಗಿರುತ್ತವೆ. ನೀವು ಹೆಚ್ಚಿನ ಪ್ರಮಾಣದ ಪ್ರೋಟೀನ್ ಸೇವಿಸಿದಾಗ, ಅದು ಜೀರ್ಣವಾಗಲು ತುಂಬಾ ಕಷ್ಟವಾಗುತ್ತದೆ.

ಇದನ್ನೂ ಓದಿ : Empty Stomach : ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯುವು ಸೇವಿಸಬೇಡಿ ಈ ಮಸಾಲೆ ಪದಾರ್ಥಗಳನ್ನು!

ಮೀನು ಮತ್ತು ಮೊಟ್ಟೆ ಎರಡು ಅಲರ್ಜಿ ಉಂಟುಮಾಡುತ್ತದೆ : ಬೇಯಿಸಿದ ಮೊಟ್ಟೆಗಳನ್ನು ಮೀನು(Fish) ತಿಂದ ನಂತರ ಸೇವಿಸಬಾರದು. ಬೇಯಿಸಿದ ಮೊಟ್ಟೆಗಳನ್ನು ಸೇವಿಸಿ ಮೀನು ತಿಂದರೆ ಚರ್ಮದ ಅಲರ್ಜಿಯನ್ನು ಉಂಟುಮಾಡಬಹುದು.

ಇದನ್ನೂ ಓದಿ : Mango Hair Pack: ಕೂದಲ ಆರೈಕೆಗೆ ಬಳಸಿ ಮಾವಿನ ಹೇರ್ ಪ್ಯಾಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News