Water Side Effects: ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ!

ಆರೋಗ್ಯವಂತ ವ್ಯಕ್ತಿಯು ಪ್ರತಿದಿನ 2-3 ಲೀಟರ್ ನೀರನ್ನು ಕುಡಿಯುವುದು ಅವಶ್ಯಕ

Last Updated : Apr 22, 2021, 04:47 PM IST
  • ಹೆಚ್ಚು ನೀರನ್ನು ಕುಡಿಯುವುದರಿಂದ, ದೇಹದಲ್ಲಿರುವ ಜೀವಕೋಶಗಳು ಉಬ್ಬಿಕೊಳ್ಳುತ್ತವೆ
  • ಆರೋಗ್ಯವಂತ ವ್ಯಕ್ತಿಯು ಪ್ರತಿದಿನ 2-3 ಲೀಟರ್ ನೀರನ್ನು ಕುಡಿಯುವುದು ಅವಶ್ಯಕ
  • ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ನೀರು ಕುಡಿಯುವುದರಿಂದ ಅತಿಯಾದ ಹೈಡ್ರೇಶನ್ ಸಮಸ್ಯೆ
Water Side Effects: ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ! title=

ನವದೆಹಲಿ: ಅತಿಯಾದರೆ ಅಮೃತವು ವಿಷವಂತೆ ಎಂಬುವುದು ನಮಗೆಲ್ಲರಿಗೂ ತಿಳಿದಿದೆ. ಅದು ಮನಸ್ಸಿಗಾಗಲಿ ಅಥವಾ ದೇಹ ಆರೋಗ್ಯಕ್ಕೆ ಆದ್ರೂ ಸರಿ. ಇಂದು ನಾವು ನಿಮಗೆ ನೀರಿನ ಬಗ್ಗೆ ತಿಳಿಸಿಕೊಡಲಿದ್ದೇವೆ. ನಮ್ಮ ಜೀವನಕ್ಕೆ ಮತ್ತು ನಮ್ಮ ದೇಹಕ್ಕೆ ನೀರು ಬಹಳ ಮುಖ್ಯ. ದೇಹದಲ್ಲಿ ನೀರಿನ ಕೊರತೆ ಇದ್ದರೆ (Dehydration) ಅನೇಕ ರೋಗಗಳು ಬರುವ ಅಪಾಯವಿದೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ನೀರಿನ ಅಗತ್ಯಗಳು ವಿಭಿನ್ನವಾಗಿವೆ. ನೀವು ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿಗೆ  ನೀರು ಕುಡಿಯುವುದು ನಿಮ್ಮ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ನಿಮಗೆ ಬಾಯಾರಿದಾಗ ಮಾತ್ರ ನೀರು ಕುಡಿಯಿರಿ: 

ನಮಗೆ ಬಾಯಾರಿದಾಗ ಮಾತ್ರ ನೀರನ್ನು ಕುಡಿಯಬೇಕೆಂದು ಆರೋಗ್ಯ ತಜ್ಞರು(Health Specialist) ಯಾವಾಗಲೂ ಹೇಳುತ್ತಾರೆ. ನಿಮಗೆ ಬಾಯಾರಿಕೆಯಿಲ್ಲದಿದ್ದರೆ ಅನಗತ್ಯವಾಗಿ ನೀರು ಕುಡಿಯಬೇಡಿ. ಕ್ಲಿನಿಕಲ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿಯೂ ಇದನ್ನು ಹೇಳಲಾಗಿದೆ. ಆರೋಗ್ಯವಂತ ವ್ಯಕ್ತಿಯು ಪ್ರತಿದಿನ 2-3 ಲೀಟರ್ ನೀರನ್ನು ಕುಡಿಯುವುದು ಅವಶ್ಯಕ ಎಂದು ಹೇಳಲಾಗುತ್ತದೆ. ಆದರೆ ಹೆಚ್ಚು ನೀರು ಕುಡಿಯುವುದರಿಂದ ಅನೇಕ ರೀತಿಯ ಅಡ್ಡಪರಿಣಾಮಗಳು ಉಂಟಾಗುತ್ತವೆ.

Health Tips: ನಿತ್ಯ ರಾತ್ರಿ ಹಾಲಿನೊಂದಿಗೆ ಈ ಹಣ್ಣನ್ನು ಸೇವಿಸಿ, ದೂರವಾಗುತ್ತೆ ಈ ಎಲ್ಲಾ ಸಮಸ್ಯೆ

ಹೆಚ್ಚು ನೀರು ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳು: 

1. ಹೆಚ್ಚು ನೀರು ಕುಡಿಯುವುದರಿಂದ, ದೇಹದಲ್ಲಿನ ಎಲೆಕ್ಟ್ರೋಲೈಟ್‌ ಸಮತೋಲನ(Electrolytes balance).ವು ಹದಗೆಡುತ್ತದೆ ಎಲೆಕ್ಟ್ರೋಲೈಟ್‌ ನಲ್ಲಿ ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳ ಮಿಶ್ರಣವಾಗಿದ್ದು, ಇದು ದೇಹಕ್ಕೆ ಶಕ್ತಿಯನ್ನು ಒದಗಿಸುವುದರ ಜೊತೆಗೆ ದೇಹದ ಅಂಗಗಳನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.

ಕರೋನಾ ಕಾಲದಲ್ಲಿ ಬಿಸಿನೀರಿನ ಸ್ಟೀಮ್ ಗಿಂತ ಮೊದಲು ಈ 5 ವಿಚಾರ ತಿಳಿದಿರಲಿ

2. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ನೀರು ಕುಡಿಯುವುದರಿಂದ ಅತಿಯಾದ ಹೈಡ್ರೇಶನ್(Overhydration) ಸಮಸ್ಯೆಯಾಗಬಹುದು, ಇದು ಮೂತ್ರಪಿಂಡಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೆಚ್ಚುವರಿ ನೀರು ಮೂತ್ರಪಿಂಡಗಳ ಕಾರ್ಯನಿರ್ವಹಣೆಯ ಹೊರೆಯನ್ನು ಹೆಚ್ಚಿಸುತ್ತದೆ, ಇದರಿಂದ ಮೂತ್ರಪಿಂಡದ ವೈಫಲ್ಯದ ಅಪಾಯವಿದೆ.

ಟೆನ್ಶನ್ ಬೇಡ.! ಈ ಆಹಾರಗಳನ್ನು ತಿಂದು ದೇಹದಲ್ಲಿ ಆಕ್ಸಿಜನ್ ಹೆಚ್ಚಿಸಿಕೊಳ್ಳಿ.

3. ಹೆಚ್ಚುವರಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಅಸಹಜವಾಗಿ ಕಡಿಮೆ ಸೋಡಿಯಂ ಕಡಿಮೆ(Sodium decrease) ಯಾಗುತ್ತದೆ. ಇದು ಹೈಪೊಟ್ರೀಮಿಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಯೊಂದು ಹೇಳುತ್ತದೆ.

Health Insurance ಹೆಚ್ಚು ಕುಟುಂಬ ಸದಸ್ಯರು ಇರುವ ಕುಟುಂಬಕ್ಕೆ ಇದು ಉತ್ತಮ ಆರೋಗ್ಯ ವಿಮಾ ಪಾಲಸಿ

4. ಹೆಚ್ಚು ನೀರನ್ನು ಕುಡಿಯುವುದರಿಂದ, ದೇಹದಲ್ಲಿರುವ ಜೀವಕೋಶಗಳು ಉಬ್ಬಿ(Swelling in body cells)ಕೊಳ್ಳುತ್ತವೆ ಮತ್ತು ಈ ಸ್ಥಿತಿಯು ನಿಮ್ಮ ಜೀವಕ್ಕೆ ಅಪಾಯ ತರುತ್ತದೆ ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News